Advertisement

ಮನೆ ಕಟ್ಟಲು ಪಡಿಪಾಟಲು

12:49 AM Nov 13, 2021 | Team Udayavani |

ಮಂಗಳೂರು: ಹತ್ತು ವರ್ಷಗಳ ಹಿಂದೆಯೇ ಸರಕಾರದಿಂದ ಮನೆ ಮಂಜೂರಾಗಿದ್ದರೂ ಕಾಮಗಾರಿ ಪೂರ್ಣಗೊಳಿಸಲಾಗದೆ ರಾಜ್ಯಾದ್ಯಂತ ಲಕ್ಷಾಂತರ ಮಂದಿ ಫ‌ಲಾನುಭವಿಗಳು ಪರದಾಡುತ್ತಿದ್ದಾರೆ. ಸರಕಾರದ ಅನುದಾನ ಸಾಲದಿರುವುದು, ಅನ್ಯಮೂಲ ಗಳಿಂದ ಹಣ ಹೊಂದಿಸಲಾಗದೆ ಇರು ವುದು ಕಾರಣ. ಅರ್ಧಕ್ಕೆ ನಿಂತಿ ರುವ ಮನೆ ಕಾಮಗಾರಿ ಪೂರ್ಣ ಗೊಳ್ಳುವಂತೆ ಮಾಡುವುದು ಈಗ ಸರಕಾರಕ್ಕೂ ಸವಾಲಾಗಿದೆ.

Advertisement

ಈ ಹಿಂದೆ ಮಂಜೂರಾಗಿರುವ ಮನೆಗಳನ್ನು ಪೂರ್ಣಗೊಳಿಸದೆ ಹೊಸದಾಗಿ ಮನೆ ಮಂಜೂರು ಮಾಡದಿರಲು ಸರಕಾರ ನಿರ್ಧರಿಸಿದ್ದು, ಇದರಿಂದ ಹೊಸ ಆಕಾಂಕ್ಷಿಗಳಿಗೆ ತೊಡಕಾಗಿದೆ. ನಾಲ್ಕು ವರ್ಷಗಳಿಂದ ಹೊಸ ಮನೆ ಮಂಜೂರಾತಿ ಆಗುತ್ತಿಲ್ಲ. ಸದ್ಯ ಆಯ್ದ ಗ್ರಾ.ಪಂ.ಗಳಲ್ಲಿ ಅಮೃತ ಗ್ರಾಮೀಣ ವಸತಿ ಯೋಜನೆಯಲ್ಲಿ ಮಾತ್ರ ಹೊಸ ಮನೆ ಮಂಜೂರು ಮಾಡಲು ನಿರ್ಧರಿಸಲಾಗಿದೆ.

ಪೂರ್ಣಗೊಳ್ಳಲು ಬಾಕಿ ಇರುವ ಮನೆಗಳನ್ನು, ಮುಖ್ಯವಾಗಿ ಒಂದು ದಶಕದಿಂದ ಪೂರ್ಣಗೊಳ್ಳದಿರುವ ಮನೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳು ಫ‌ಲಾನುಭವಿಗಳಲ್ಲಿ ಮನವಿ ಮಾಡುತ್ತಿದ್ದಾರೆ, ಆದರೆ ಫ‌ಲಾನುಭವಿಗಳು ಮನೆ ಪೂರೈಸಲು ತಮಗೆ ಎದುರಾಗಿರುವ ಆರ್ಥಿಕ ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ.

58,0927 ಮನೆ ಬ್ಲಾಕ್‌ :

10 ವರ್ಷಗಳಲ್ಲಿ ವಿವಿಧ ಗ್ರಾಮೀಣ ವಸತಿ ಯೋಜನೆಯಡಿ ಮಂಜೂರಾದ 31,59,963 ಮನೆಗಳ ಪೈಕಿ 21,27,256 ಮನೆಗಳು ಪೂರ್ಣಗೊಂಡಿವೆ. ಮನೆ ಗಳನ್ನು ನಿಗದಿತ ಅವಧಿಯಲ್ಲಿ ಆರಂಭಿಸದ ಕಾರಣ 5,80,927 ಮನೆಗಳು ಬ್ಲಾಕ್‌ ಆಗಿವೆ. ಕಳೆದ ವರ್ಷ ಅನ್‌ಬ್ಲಾಕ್‌ಗೆ ಅವಕಾಶ ನೀಡಿದ್ದರೂ ಹೆಚ್ಚಿನ ಮನೆಗಳ ಕಾಮಗಾರಿ ಆರಂಭವಾಗದೆ ಬ್ಲಾಕ್‌ ಆಗಿವೆ.

Advertisement

ತಳಪಾಯದಲ್ಲೇ ಬಾಕಿ :

ದ.ಕ. ಜಿಲ್ಲೆಯಲ್ಲಿ 2010-11ರಲ್ಲಿ ಮಂಜೂರಾದ ಮನೆಗಳ ಪೈಕಿ 266 ಮನೆಗಳು ಇನ್ನೂ ತಳಪಾಯದ ಹಂತ ದಲ್ಲಿವೆ. 140 ಮನೆಗಳು ಗೋಡೆ ಹಂತ ದಲ್ಲಿವೆ. ಉಡುಪಿ ಜಿಲ್ಲೆಯಲ್ಲಿ 2010-11ರಲ್ಲಿ ಮಂಜೂರಾದ ಮನೆಗಳ ಪೈಕಿ 230 ಮನೆಗಳು ತಳಪಾಯದಲ್ಲೇ ಬಾಕಿಯಾಗಿವೆ.

ಪಿಡಿಒಗಳಿಗೆ ಹೊಣೆ:

ಮನೆ ಕಾಮಗಾರಿ ಪೂರ್ಣಗೊಳಿಸುವ ಹೊಣೆಯನ್ನು ಪಿಡಿಒಗಳಿಗೆ ವಹಿಸಲಾಗಿದೆ. ಮನೆ ಕಾಮಗಾರಿ ಬಾಕಿ ಇರಿಸಿ ಕೊಂಡಿರುವ ಫ‌ಲಾನುಭವಿಗಳ ಪೈಕಿ ಹೆಚ್ಚಿನ ಮಂದಿ ಹಣಕಾಸಿನ ಕಾರಣ ಮುಂದಿಡುತ್ತಿದ್ದಾರೆ. ಮಳೆ, ಕೊರೊನಾ ಕಾರಣ ಇನ್ನು ಕೆಲವರದು.  2010ರಲ್ಲಿ ಮನೆ ಕಾಮಗಾರಿ ಆರಂಭಿಸಿ ಈಗ ಪೂರ್ಣ ಗೊಳಿಸಿದರೆ ಅನುದಾನ ಬಿಡುಗಡೆಯಾಗುತ್ತದೆ ಎನ್ನುತ್ತಾರೆ ಪಿಡಿಒಗಳು.

ಈಗ ಮನೆಗಳು ಪೂರ್ಣಗೊಳ್ಳದಿರಲು ಆರ್ಥಿಕ ತೊಡಕು ಪ್ರಮುಖ ಕಾರಣ. ಕೆಲವು ಮಂದಿ ನಿಯಮವನ್ನು ಉಲ್ಲಂ ಸಿ ಮನೆ ನಿರ್ಮಿಸಿದ್ದಾರೆ. ಅವುಗಳನ್ನು “ನಾಟ್‌ ಒಕೆ’ ಎಂದು ಪರಿಗಣಿಸಲಾಗಿದೆ. ಹಂತ ಹಂತವಾಗಿ ಫೋಟೋ ತೆಗೆಯದಿರುವುದು, ವಸತಿಯೇತರ ಉದ್ದೇಶಕ್ಕೆ ನಿರ್ಮಾಣ, ನಿಗದಿತ ಮೊತ್ತ, ನಿಗದಿತ ವಿಸ್ತೀರ್ಣ ಮೀರಿ ನಿರ್ಮಾಣ ಮಾಡದಿರುವುದು ಮೊದಲಾದವು “ನಾಟ್‌ ಓಕೆ’ ಪಟ್ಟಿಯಲ್ಲಿ ಸೇರುತ್ತವೆ. ಇಂತಹ “ನಾಟ್‌ಒಕೆ’ ಮನೆಗಳ ಬಗ್ಗೆ ಮತ್ತೂಮ್ಮೆ ಪರಿಶೀಲಿಸಿ “ಓಕೆ’ ಸಾಧ್ಯ

ತೆಯ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ನಿಗಮವು ಸೂಚಿಸಿದೆ. ಆದರೆ ಇಂತಹ “ನಾಟ್‌ಒಕೆ’ ಮನೆಗಳು “ಒಕೆ’ ಆಗುವ ಸಾಧ್ಯತೆಗಳು ಕಡಿಮೆ. ಇದರ ಜತೆಗೆ ಆಧಾರ್‌, ಮೊಬೈಲ್‌ ಸಂಖ್ಯೆ ಮೊದಲಾದ ತಾಂತ್ರಿಕ ದೋಷಗಳಿಂದ ಅನುದಾನ ವಿಳಂಬವಾಗಿರುತ್ತದೆ. ಆದರೆ “ತಾಂತ್ರಿಕ ಕಾರಣ’ದ ಪ್ರಕರಣಗಳು ತೀರಾ ಕಡಿಮೆ, ಇದನ್ನು ಸರಿಪಡಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

-ಸಂತೋಷ್‌ ಬೊಳ್ಳೆಟ್ಟು

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next