Advertisement
ಧರ್ಮಾಧ್ಯಕ್ಷರು ಆರು ಪುರುಷರು, ಆರು ಮಹಿಳೆಯರು ಸಹಿತ 12 ಮಂದಿ ಪ್ರೇಷಿತರ (ವಿಶ್ವಾಸಿಗಳು) ಪಾದಗಳನ್ನು ತೊಳೆದರು. ಮೂರು ವರ್ಷಗಳಿಂದ ಪೋಪ್ ಫ್ರಾನ್ಸಿಸ್ ಅವರು ಪಾದ ತೊಳೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಿಳೆಯರ ಪಾದ ತೊಳೆಯಲು ಅವಕಾಶ ಕಲ್ಪಿಸಿ ಆದೇಶ ನೀಡಿದ್ದರು. ಈ ಬಾರಿಯೂ ಅದೇ ಸಂಪ್ರದಾಯವನ್ನು ಮುಂದುವರಿಸಿ ಪುರುಷರ ಜತೆಗೆ ಮಹಿಳೆಯರು ಸೇರಿದಂತೆ 12 ಮಂದಿಯ ಪಾದಗಳನ್ನು ಎಲ್ಲ ಚರ್ಚ್‌ಗಳಲ್ಲಿ ತೊಳೆಯಲಾಯಿತು. ಕೆಥೆಡ್ರಲ್ ಪ್ರಧಾನ ಧರ್ಮಗುರು ಡಾ| ಲೋರೆನ್ಸ್ ಡಿ’ಸೋಜಾ, ಸಹಾಯಕ ಧರ್ಮಗುರು ವಂ| ಕೆನ್ಯೂಟ್ ಮತ್ತು ಇತರರು ಉಪಸ್ಥಿತರಿದ್ದರು.
ಯೇಸು ತನ್ನ 12 ಮಂದಿ ಶಿಷ್ಯರೊಂದಿಗೆ ಸೇರಿ ಕೊನೆಯ ಭೋಜನ ನಡೆಸಿದ್ದರು. ಈ ವೇಳೆ ಶಿಷ್ಯರ ಪಾದಗಳನ್ನು ತೊಳೆದಿದ್ದರ ಸಂಕೇತವಾಗಿ ಇದು ನಡೆಯುತ್ತಿದೆ. ಶುಕ್ರವಾರ ಯೇಸು ಸ್ವಾಮಿಯನ್ನು ಶಿಲುಬೆಗೇರಿಸಿದ್ದು ಶುಕ್ರವಾರವನ್ನುಕ್ರೆಸ್ತರು ಶುಭ ಶುಕ್ರವಾರವಾಗಿ ಆಚರಿಸಿ ಧ್ಯಾನ, ಉಪವಾಸ ಹಾಗೂ ಯೇಸುವಿನ ಶಿಲುಬೆಯ ಹಾದಿಯನ್ನು ನೆರವೇರಿಸುವ ಮೂಲಕ ಆಚರಿಸುತ್ತಾರೆ.