Advertisement

ಐಡಿ ನಿರೀಕ್ಷೆಯಲ್ಲಿ ಲಕ್ಷ ಮಂದಿ

12:21 PM Apr 26, 2018 | Team Udayavani |

ಬೆಂಗಳೂರು: ಬೆಂಗಳೂರು ನಗರದ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿಗೆ ಹೊಸದಾಗಿ 3.50 ಲಕ್ಷ ಜನರು ಸೇರ್ಪಡೆಯಾಗಿದ್ದು, ಆ ಪೈಕಿ 1 ಲಕ್ಷಕ್ಕೂ ಹೆಚ್ಚಿನ ಮತದಾರರಿಗೆ ಹಾಲೋಗ್ರಾಂ ಕೊರತೆಯಿಂದ ಗುರುತಿನ ಚೀಟಿ ಸಿಕ್ಕಿಲ್ಲ. ಬೆಂಗಳೂರು ನಗರದ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 88 ಲಕ್ಷ ಮತದಾರರಿದ್ದು, ಆ ಪೈಕಿ 3.50 ಲಕ್ಷಕ್ಕೂ ಅಧಿಕ ಜನರು ಹೊಸದಾಗಿ ಪಟ್ಟಿಗೆ ಸೇರ್ಪಡೆಗೊಂಡಿ ದ್ದಾರೆ. ಇದರೊಂದಿಗೆ ವಿಳಾಸ ಬದಲಾವಣೆ, ಕ್ಷೇತ್ರ ಬದಲಾವಣೆ, ಪಟ್ಟಿಯಲ್ಲಿನ ದೋಷಗಳ ಬದಲಾವಣೆ ಕಾರಣಗಳಿಂದಾಗಿ 1.5 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. ಆ ಪೈಕಿ ಈಗಾಗಲೇ 3.50 ಲಕ್ಷ ಜನರಿಗೆ ಗುರುತಿನ ಚೀಟಿ ವಿತರಿಸಲಾಗಿದ್ದು, ಹೊಸದಾಗಿ ಸೇರ್ಪಡೆಗೊಂಡಿರುವವರಿಗೆ ಗುರುತಿನ ಚೀಟಿ ದೊರೆಯಬೇಕಿದೆ.

Advertisement

ಗುರುತಿನ ಚೀಟಿಯನ್ನು ನಕಲು ಮಾಡಬಾರದೆಂಬ ಉದ್ದೇಶದಿಂದ ಪ್ರತಿ ಗುರುತಿನ ಚೀಟಿಯಲ್ಲಿ ಹಾಲೋಗ್ರಾಂ ಅಳವಡಿಸಲಾಗುತ್ತದೆ. ಆದರೀಗ, ಆ ಹಾಲೋಗ್ರಾಂ ಕೊರತೆಯುಂಟಾಗಿರುವುದರಿಂದ ಹೊಸದಾಗಿ ಪಟ್ಟಿಗೆ ಸೇರ್ಪಡೆಯಾದವರಿಗೆ ಬೆಂಗಳೂರು ಒನ್‌ ಕೇಂದ್ರ, ಬಿಬಿಎಂಪಿ ಕಚೇರಿಗಳಲ್ಲಿ ಗುರುತಿನ ಚೀಟಿ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಬೆಂಗಳೂರು ದಕ್ಷಿಣ, ಪದ್ಮನಾಭನಗರ, ಯಶವಂತಪುರ, ಕೆ.ಆರ್‌.ಪುರ ಸೇರಿದಂತೆ ನಗರದ ಹಲವು ಕ್ಷೇತ್ರಗಳಲ್ಲಿ ಹಾಲೋಗ್ರಾಂ ಕೊರತೆಯಿಂದ ಗುರುತಿನ ಚೀಟಿ ವಿತರಣೆಯಾಗಿಲ್ಲ. ಈ ಬಗ್ಗೆ ಕೇಂದ್ರಗಳ ಸಿಬ್ಬಂದಿಯನ್ನು ಕೇಳಿದರೆ, ಹಾಲೋಗ್ರಾಂ ಕೊರತೆಯಿರುವುದರಿಂದ ಹೊಸದಾಗಿ ಮತದಾರರ ಗುರುತಿನ ಚೀಟಿ ನೀಡಲಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next