Advertisement
ಗ್ರಾಮ ಡಿಜಿ ವಿಕಸನ ಕಾರ್ಯಕ್ರಮವನ್ನು ಶಿಕ್ಷಣ ಫೌಂಡೇಶನ್ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಹಭಾಗಿತ್ವದಲ್ಲಿ ಮತ್ತು ಡೆಲ್ ಸಂಸ್ಥೆಯ ಸಹಯೋಗದೊಂದಿಗೆ ಉಡುಪಿ ಜಿÇÉೆಯಲ್ಲಿ 40 ಗ್ರಾ.ಪಂ. ಮಟ್ಟದ ಗ್ರಂಥಾಲಯದ ಮೂಲಕ ಪ್ರಾಯೋಗಿಕವಾಗಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿದೆ.
ಡಿವೈಸ್‌ಗಳನ್ನು ನೀಡಿದ್ದರಿಂದ ಗ್ರಂಥಾಲಯಕ್ಕೆ ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಗ್ರಂಥಪಾಲಕರು ಗ್ರಂಥಾಲಯಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಹಲವಾರು ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ಮಾಡುತ್ತಾ ಪುಸ್ತಕಗಳ ಪ್ರಾಮುಖ್ಯತೆಯನ್ನು ಕೂಡ ತಿಳಿಸಲಾಗುತ್ತಿದೆ. ಶಿಕ್ಷಣ ಫೌಂಡೇಶನ್ ನೀಡಿರುವ ಡಿವೈಸ್‌ಗಳಲ್ಲಿ sikshanapedia Appಗಳನ್ನು ಹಾಕಲಾಗಿದೆ ಎನ್ನುತ್ತಾರೆ ಸಂಯೋಜಕಿ ಆಶಾ ಶೆಟ್ಟಿ.
Related Articles
ಜಿಲ್ಲೆಯಲ್ಲಿ ಆಯ್ಕೆಯಾದ ಗ್ರಾ.ಪಂ. ಗ್ರಂಥಾಲಯಗಳಿಗೆ ಡಿಜಿಟಲ್ ಸ್ಪರ್ಶ ನೀಡುವ ಉದ್ದೇಶದಿಂದ ಸ್ಮಾರ್ಟ್ ಟಿವಿ ಹಾಗೂ 4 ಆ್ಯಂಡ್ರಾಯ್ಡ ಸ್ಮಾಟ್‌ಫೋನ್‌ಗಳನ್ನು ನೀಡಲಾಗಿದೆ. ಈಗಾಗಲೇ 32 ಗ್ರಂಥಾಲಯಗಳಿಗೆ ಡಿವೈಸ್‌ಗಳನ್ನು ನೀಡಲಾಗಿದೆ. ಉಳಿದ 6 ಗ್ರಂಥಾಲಯಗಳಿಗೆ ಡೆಲ್ ಸಂಸ್ಥೆ ಕಡೆಯಿಂದ ಮೊನಿಟರ್ ಹಾಗೂ ಕ್ರೋಮ ಬುಕ್ ಗಳನ್ನೂ ನೀಡಲಾಗುತ್ತಿದೆ.
Advertisement
ಗ್ರಾಮ ಡಿಜಿ ವಿಕಸನದಡಿಯಲ್ಲಿ ಉಡುಪಿ ಜಿಲ್ಲೆ ಯಲ್ಲಿ ಇಲ್ಲಿಯವರೆಗೆ 38,539 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಜನವರಿಯಿಂದ ಮೇ ತಿಂಗಳವರೆಗೆ 154 ಡಿವೈಸ್‌ಗಳಿಂದ 5,933 ಗಂಟೆ ಶಿಕ್ಷಣ ಪೀಡಿಯ ಬಳಕೆಯಾಗಿದೆ. ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾ.ಪಂ.ಸಂಪೂರ್ಣ ಡಿಜಿಟಲ್ ಸಾಕ್ಷರತಾ ಅಭಿಯಾನಕ್ಕೆ ಆಯ್ಕೆಯಾಗಿದೆ. ಕೋಟತಟ್ಟು ಗ್ರಾ.ಪಂ.ವ್ಯಾಪ್ತಿಯ 16ರಿಂದ 60 ವರ್ಷದ ಎಲ್ಲ ಜನತೆಗೆ ಡಿಜಿಟಲ್ ಬಳಕೆ ಕುರಿತು ಮಾಹಿತಿ ನೀಡುವ ಯೋಜನೆ ಹಾಕಿಕೊಂಡಿದ್ದೇವೆ.-ರೀನಾ ಎಸ್. ಹೆಗ್ಡೆ
ಜಿಲ್ಲಾ ಸಂಯೋಜಕರು, ಶಿಕ್ಷಣ ಫೌಂಡೇಶನ್ -ಪುನೀತ್ ಸಾಲ್ಯಾನ್