Advertisement

Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್‌!

07:05 PM Dec 11, 2024 | Team Udayavani |

ಹೊಳೆನರಸೀಪುರ: ಉತ್ತಮ ಸಾಧನೆ ಮಾಡಿ ಪ್ರಶಸ್ತಿ ಪಡೆದುಕೊಂಡಿದ್ದ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗ, ಔಷಧಿ, ಮಾತ್ರೆ, ಎಂಜೆಕ್ಷನ್‌, ಗ್ಲೂಕೋಸ್‌ ಕೊರತೆ!

Advertisement

ಈ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 30ಕ್ಕೂ ಹೆಚ್ಚು ನುರಿತ ವೈದ್ಯರಿದ್ದರೂ ಚಿಕಿತ್ಸೆಗೆ ಔಷಧವಿಲ್ಲದೇ ರೋಗಿಗಳು, ಮಧ್ಯಮ ವರ್ಗದವರು ಪರದಾಡುತ್ತಿದ್ದಾರೆ.

ಸಕ್ಕರೆ ಕಾಯಿಲೆ, ರಕ್ತದೊತ್ತಡ, ಜ್ವರ, ಮೈಕೈ ನೋವಿನ ಮಾತ್ರೆಗಳಿಗಾಗಿ ಜನ ಆಸ್ಪತ್ರೆಗೆ ಆಗಮಿಸುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಮಾತ್ರೆಗಳೇ ಇಲ್ಲ. ರೋಗಿಗಳಿಗೆ ತಪಾಸಣೆ ಮಾಡುವ ವೈದ್ಯರು ವಿಧಿ ಇಲ್ಲದೇ ಚೀಟಿ ಬರೆದು ಖಾಸಗಿ ಮೆಡಿಕಲ್‌ ಸ್ಟೋರ್‌ಗಳತ್ತ ಕಳುಹಿಸುತ್ತಿರುವುದು ವಿಷಾದನೀಯ.

ಹೊಂದಾಣಿಕೆ ಇಲ್ಲ: ಸಹ ವೈದ್ಯರ ನಡುವೆ ಸಾಮರಸ್ಯ, ಹೊಂದಾಣಿಕೆ ಇಲ್ಲದೇ ಇರುವುದೇ ಆಸ್ಪತ್ರೆಯಲ್ಲಿ ಸಮಸ್ಯೆ ಉದ್ಭವಿಸಲು ಕಾರಣ ಎಂದು ಹೆಸರು ಹೇಳಲು ಇಚ್ಚಿಸದ ವೈದ್ಯರೊಬ್ಬರು ತಿಳಿಸಿದ್ದಾರೆ. ಹಾಲಿ ಶಾಸಕ ರೇವಣ್ಣ ಅವರು ಸಾರ್ವಜನಿಕರಿಗೆ ಬೇಕಾದ ಎಲ್ಲಾ ಸವಲತ್ತು ತಂದಿದ್ದಾರೆ. ಆದರೆ, ಈಗ ಅವು ಸಾರ್ವಜನಿಕರ ಸೇವೆಗೆ ಲಭ್ಯತೆ ಇದೆಯೇ ಎಂಬುದು ಪ್ರಶ್ನೆಯಾಗಿದೆ.

ಆಸ್ಪತ್ರೆ ಆಡಳಿತ ಕಾರ್ಯವೈಖರಿ ಸರಿಯಿಲ್ಲ: ಹೌದು, ಈ ಹಿಂದೆ ಆರೋಗ್ಯ ರûಾ ಸಮಿತಿ ಸಾರ್ವಜನಿಕರ ಮತ್ತು ರೋಗಿಗಳಿಗೆ ನೀಡುವ ಸೇವೆ ಬಗ್ಗೆ ಸಂಪೂರ್ಣ ಚರ್ಚೆ ನಡೆಯುತ್ತಿತ್ತು. ಆದರೆ, ಇದೀಗ, ಆಡಳಿತಾಧಿಕಾರಿಗಳ ಕಾರ್ಯ ವೈಖರಿಯೇ ಸರಿಯಿಲ್ಲ. ವೈದ್ಯರು-ವೈದ್ಯಾಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆಯಿದೆ. ಇದೀಗ ಸಾರ್ವಜನಿಕ ಆಸ್ಪತ್ರೆ ಸರಿದಾರಿ ತರಲು ಹೋರಾಟ ಮಾಡಬೇಕಿದೆ ಎಂದು ಸಾರ್ವಜನಿಕ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಸುರೇಶ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

Advertisement

ಔಷಧ ಸರಬರಾಜಿಗೆ 3 ತಿಂಗಳು ಕಾಯಬೇಕು…

ನಾವು ಔಷಧಗಳಿಗೆ ಇಂಡೆಂಟ್‌ ಹಾಕಿದ್ದೇವೆ. ಅದನ್ನು ಪೂರೈಸಲು ಟೆಂಡರ್‌ ಕರೆದಿದ್ದು ಟೆಂಡರ್‌ದಾರರು ಔಷಧಿ ಸರಬರಾಜಿಗೆ ಕನಿಷ್ಠ 3 ತಿಂಗಳಾದರೂ ಬೇಕು. ಇನ್ನು ನಮಗೆ ಸರ್ಕಾರಿ ಈ ಪ್ರಕ್ಯೂರ್‌ ಮೆಂಟ್‌ನಲ್ಲಿ ಔಷಧಿ ಖರೀದಿಗೆ ಅವಕಾಶವಿದ್ದರೂ ಔಷಧ ಉಗ್ರಾಣದಲ್ಲಿ ಇಲ್ಲ ಎಂಬುದನ್ನು ಖಾತ್ರಿ ಪಡಿಸಿದ ನಂತರ ಖರೀದಿಗೆ ಅವಕಾಶ ಇದೆ ಎಂದು ವೈದ್ಯಾಧಿಕಾರಿ ಹಾಗೂ ಮಕ್ಕಳ ವೈದ್ಯ ಡಾ.ಧನಶೇಖರ್‌ ತಿಳಿಸಿದ್ದಾರೆ. ಅವರ ಇಂತಹ ತೋರ್ಪಡಿಕೆ ಮಾತು ಬಿಟ್ಟರೆ ಆಸ್ಪತ್ರೆ ಆಡಳಿತ ನಡೆಸುವ ಬಗ್ಗೆ ಗೊತ್ತೇ ಇಲ್ಲವೆಂದು ವರ್ತಿಸುತ್ತಿದ್ದಾರೆಂದು ರೋಗಿಗಳು ಆರೋಪಿಸಿದ್ದಾರೆ.

ವಾರದೊಳಗೆ ಆಸ್ಪತ್ರೆಗೆ ಬೇಕಾದ ಔಷಧ ಬಾರದೆ ಹೋದಲ್ಲಿ ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಆಸ್ಪತ್ರೆ ಮುಂದೆ ಪ್ರತಿಭಟನೆ ಅನಿವಾರ್ಯ. – ಸುರೇಶ್‌ ಕುಮಾರ್‌, ಸಾರ್ವಜನಿಕ ಆಸ್ಪತ್ರೆ ಆರೋಗ್ಯ ರûಾ ಸಮಿತಿ ಸದಸ್ಯ

ರಾಧಾಕೃಷ್ಣ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next