Advertisement
ಮಹೇಶ್ ಎಂಬುವರಿಗೆ ಸೇರಿದ ಕೋಳಿಫಾರಂ ಇದಾಗಿದ್ದು ಸುಮಾರು 6 ಸಾವಿರ ಕೋಳಿಗಳನ್ನು ಸಾಕುತ್ತಿದ್ದರು. ಆದರೆ ಭಾನುವಾರ ರಾತ್ರಿ ಇಡೀ ಎಡಬಿಡದ ಮಳೆ ಸುರಿಯುತ್ತಿತ್ತು. ಬೆಳಗಿನ ಜಾವ 3 ಘಂಟೆ ಸುಮಾರಿಗೆ ಫಾರಂ ಪಕ್ಕದಲ್ಲಿರುವ ಗೋಂದಿನಾಲೆ ಭರ್ತಿಯಾಗಿ ಏರಿಮೇಲೆ ನೀರು ಹತ್ತಿ ಹರಿಯಲಾರಂಬಿಸಿತು. ನೋಡನೋಡುತ್ತಿದ್ದಂತೆ ನೀರಿನ ಪ್ರಮಾಣ ದಿಢೀರನೆ ಜಾಸ್ತಿಯಾಗಿ ನಿಯಂತ್ರಣಕ್ಕೆ ಬಾರದಂತಾಯಿತು.
3500 ಕೋಳಿ ಮರಿಗಳು, ಭತ್ತದ ಹೊಟ್ಟು, ಕೋಳಿ ಫುಡ್ ಎಲ್ಲವೂ ನೀರಿನಲ್ಲಿ ಕೊಚ್ಚಿಹೋಗಿದೆ. ಇನ್ನು ನೀರಿನಲ್ಲಿ ನೆನೆದು ಒದ್ದೆಯಾಗಿರುವ ಕೆಲವು ಮರಿಗಳು ಬದುಕುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಪಶುವೈದ್ಯರು ತಿಳಿಸಿದರು. ಸುಮಾರು 3 ಲಕ್ಷದಷ್ಟು ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.