ಹೊಳೆಹೊನ್ನೂರು: ಶಿವಮೊಗ್ಗ ತಾಲೂಕಿನ ಪಿಳ್ಳಂಗಿರಿಯಲ್ಲಿ ಶಂಕುಸ್ಥಾಪನೆ ತೆರಳಿದ ವೇಳೆ ಗುರುವಾರ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಅವರು ಹಕ್ಕು ಪತ್ರ ವಿತರಣೆಗಾಗಿ ಆಗಮಿಸಿದಾಗ ಗ್ರಾ.ಪಂ. ಕಚೇರಿ ಮುಂಭಾಗ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.
ಸ್ಥಳೀಯ ಕಾಂಗ್ರೆಸ್ ಮುಖಂಡ ನಾಗರಾಜ್ ನೇತೃತ್ವದಲ್ಲಿ ಕೆಲ ಗ್ರಾಮಸ್ಥರು ಹಕ್ಕು ಪತ್ರ ವಿತರಣೆಗೆ ಆಗ್ರಹಿಸಿ ಘೇರಾವ್ ಹಾಕಿ ಮಾತಿನ ಚಕಮಕಿ ನಡೆಸಿದರು. ಶಿವಮೊಗ್ಗ – ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ನಿವೇಶನ ಹಾಗೂ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಹೆಚ್ಚುವರಿ ಪರಿಹಾರ ಹಣ ವಿತರಣೆ ವಿಚಾರದಲ್ಲಿ ವಾಗ್ವಾದ ನಡೆಸಿ, ಪಿಳ್ಳಂಗಿರಿ ಗ್ರಾಪಂ ವ್ಯಾಪ್ತಿಯಲ್ಲಿ72 ಕುಟುಂಬಗಳು ಬೀದಿಗೆ ಬಿದ್ದಿವೆ. ಆದರೂ ಶಾಸಕರು ಪಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡಲು ಹಿಂದೆಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ನಂತರ ಗ್ರಾಮಸ್ಥರ ಬಳಿ ಮಾತನಾಡಿದ ಶಾಸಕ ಅಶೋಕ್ ನಾಯ್ಕ್, 30 ವರ್ಷದಿಂದ ಆಗದಿರುವ ಸಮಸ್ಯೆ ಎರಡು ದಿನದಲ್ಲಿ ಬಗೆಹರಿದು. ಬೇಡಿಕೆಯಂತೆ ನೈಜ ಪಲಾನುಭವಿಗಳಿಗೆ ಹೆಚ್ಚಿನ ಪರಿಹಾರ ಹಣ ಮಂಜೂರಾದರೆ ಕ್ಷೇತ್ರದ ಶಾಸಕನಾಗಿ ನಾನು ಅತ್ಯಂತ ಖುಷಿ ಪಡಿತ್ತೇನೆ. ಹಕ್ಕುಪತ್ರ ವಿತರಿಸುವ ವಿಚಾರದಲ್ಲಿ 30 ವರ್ಷದಿಂದ ಯಾರೊಬ್ಬರಿಗೂ ಧಮ್ ಇರಲಿಲ್ಲ ಹಕ್ಕುಪತ್ರ ವಿತರಣೆ ಹಾಗೂ ಹೆಚ್ಚಿನ ಪರಿಹಾರ ದೊರಕಿಸಿಕೊಡುವಲ್ಲಿ ನಿಮ್ಮ ಗ್ರಾಮಾಂತರದ ಜನತೆಯ ಧ್ವನಿಯಾಗಿ ಬೆಂಬಲಕ್ಕೆ ನಿಂತಿದ್ದೆನೆ. 94 ಸಿ ಮತ್ತು 94 ಡಿ ಅರ್ಜಿಗಳ ಬಗ್ಗೆ ಅರಿವಿಲ್ಲದವರನ್ನು ಕಟ್ಟಿಕೊಂಡು ಕೂಗಾಡುವ ಬದಲಿಗೆ. ಸಂಬಂಧಪಟ್ಟ ಹಕ್ಕುಪತ್ರ ಕೊಡುವ ವರಗೆ ಪ್ರತಿಭಟನೆ ನಡೆಸಿದರೆ ಪ್ರಯೋಜನವಾಗಬಹುದು. ಗ್ರಾಮಸ್ಥರ ಸಮಸ್ಯೆ ಸರಿ ಪಡಿಸುವ ಕೆಲಸ ಪ್ರಗತಿಯಲ್ಲಿದೆ. ಇಲ್ಲ ಸಲ್ಲದವರ ಮಾತು ಕೇಳಿದರೆ ಆಗಬೇಕಿರುವ ಕೆಲಸಗಳು ತಡವಾಗುತ್ತವೆ ಎಂದು ಸಮಸ್ಯೆಯ ಮೂಲವನ್ನು ಸ್ಥಳದಲ್ಲಿದವರಿಗೆ ತಿಳಿಸಿದರು.