ನವದೆಹಲಿ: ಚುನಾವಣಾ ಆಯೋಗಕ್ಕೆ ಅರುಣ್ ಗೋಯಲ್ ಅವರನ್ನು ತರಾತುರಿಯಲ್ಲಿ ಮತ್ತು ಮಿಂಚಿನ ವೇಗದಲ್ಲಿ ಆಯುಕ್ತರನ್ನಾಗಿ ನೇಮಕ ಮಾಡಿರುವ ಔಚಿತ್ಯವೇನು ಎಂದು ಸುಪ್ರೀಂಕೋರ್ಟ್ ಗುರುವಾರ(ನವೆಂಬರ್ 24)ವೂ ಪ್ರಶ್ನಿಸಿದೆ.
ಇದನ್ನೂ ಓದಿ:ದೆಹಲಿ ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶ ನಿಷೇಧ; ಮಹಿಳಾ ಆಯೋಗ ನೋಟಿಸ್
ಆದರೆ ಸುಪ್ರೀಂಕೋರ್ಟ್ ನ ಅವಲೋಕವನ್ನು ಕೇಂದ್ರ ಸರ್ಕಾರ ವಿರೋಧಿಸಿದ್ದು, ಗೋಯೆಲ್ ಅವರ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸುವಂತೆ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಈ ಸಂದರ್ಭದಲ್ಲಿ ಪೀಠಕ್ಕೆ ಮನವಿ ಮಾಡಿಕೊಂಡರು.
ಜಸ್ಟೀಸ್ ಕೆ.ಎಂ.ಜೋಸೆಫ್ ನೇತೃತ್ವದ ಪಂಚಸದಸ್ಯ ಪೀಠ, ಅರುಣ್ ಗೋಯಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿರುವ ಕೇಂದ್ರ ಸರ್ಕಾರದ ಮೂಲ ಕಡತವನ್ನು ಪರಿಶೀಲಿಸಿದ್ದು, ಇದು ಯಾವ ರೀತಿಯ ಮಾನದಂಡ? ಆದರೂ ನಾವು ಅರುಣ್ ಗೋಯಲ್ ಅವರ ಅರ್ಹತೆಯನ್ನು ಪ್ರಶ್ನಿಸುತ್ತಿಲ್ಲ, ಆದರೆ ಆಯ್ಕೆ ಪ್ರಕ್ರಿಯೆ ಬಗ್ಗೆ ಪ್ರಶ್ನಿಸುತ್ತಿರುವುದಾಗಿ ತಿಳಿಸಿದೆ.
Related Articles
ಈ ಅರ್ಜಿಯ ವಿಚಾರಣೆ ವೇಳೆ ಅಟಾರ್ನಿ ಜನರಲ್ ಅವರು ಕೇಂದ್ರದ ಪರ ವಾದ ಮಂಡಿಸುತ್ತಿರುವ ಸಂದರ್ಭದಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ತಮ್ಮ ಅಹವಾಲನ್ನು ಪೀಠದ ಮುಂದೆ ಸಲ್ಲಿಸಲು ಮುಂದಾಗಿದ್ದರು. ಈ ವೇಳೆ ದಯವಿಟ್ಟು ಸ್ವಲ್ಪ ನಿಮ್ಮ ಬಾಯಿಯನ್ನು ಹತೋಟಿಯಲ್ಲಿಟ್ಟುಕೊಳ್ಳಿ ಎಂದು ಕೇಂದ್ರದ ಪರ ವಾದ ಮಂಡಿಸುತ್ತಿದ್ದ ಅಟಾರ್ನಿ ಜನರಲ್ ಭೂಷಣ್ ಗೆ ಹೇಳಿದ ಘಟನೆ ನಡೆಯಿತು.