Advertisement

ಭಾರತೀಯ ಒಲಿಂಪಿಕ್‌ ಸಂಸ್ಥೆಗೂ ನಿಷೇಧ ಭೀತಿ!

11:26 PM Jul 22, 2022 | Team Udayavani |

ಹೊಸದಿಲ್ಲಿ: ಭಾರತ ಫುಟ್ ಬಾಲ್‌ ಸಂಸ್ಥೆ ಮತ್ತು ಹಾಕಿ ಇಂಡಿಯಾ ತಮ್ಮ ಅಂತಾರಾಷ್ಟ್ರೀಯ ಮಂಡಳಿಗಳಿಂದ ನಿಷೇಧದ ಭೀತಿ ಎದುರಿಸುತ್ತಿವೆ. ಈ ನಡುವೆ ಭಾರತ ಒಲಿಂಪಿಕ್‌ ಸಂಸ್ಥೆಯೂ (ಐಒಎ) ಇಂಥದೇ ಭೀತಿ ಗೊಳ ಗಾಗಿದೆ. ಮುಂದಿನ ವಾರಗಳಲ್ಲಿ ತ್ತೈವಾರ್ಷಿಕ ಚುನಾವಣೆ ನಡೆಸದೇ ಹೋದರೆ, ಐಒಎಯನ್ನು ಅಮಾನತು ಗೊಳಿಸಬೇಕಾಗುತ್ತದೆ ಎಂದು ಐಒಸಿ ಹೇಳಿದೆ.

Advertisement

ಇತ್ತೀಚೆಗೆ ಐಒಎ ಅಧ್ಯಕ್ಷ ಸ್ಥಾನಕ್ಕೆ ನರೀಂದರ್‌ ಬಾತ್ರಾ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಅವರ ವಿರುದ್ಧ ಹಣ ದುರುಪಯೋಗದ ಹಿನ್ನೆಲೆಯಲ್ಲಿ ಸಿಬಿಐ ವಿಚಾರಣೆ ಕೂಡ ಆರಂಭಿಸಿದೆ. ಮಾಜಿ ಹಾಕಿ ಆಟಗಾರ ಅಸ್ಲಾಮ್‌ ಶೇರ್‌ ಖಾನ್‌, ನರೀಂದರ್‌ ಬಾತ್ರಾ ಅಕ್ರಮವಾಗಿ ಐಒಸಿ ಅಧ್ಯಕ್ಷರಾಗಿದ್ದಾರೆಂದು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ್ದ ನ್ಯಾಯಪೀಠ ಬಾತ್ರಾಗೆ ಹೊರಹೋಗುವಂತೆ ಆದೇಶಿಸಿತ್ತು.

ಎಐಎಫ್ಎಫ್ ನಲ್ಲಿ ಚುನಾವಣೆ ನಡೆಸದೆ ದೀರ್ಘ‌ಕಾಲದಿಂದ ಅಧ್ಯಕ್ಷರಾಗಿ ಮುಂದುವರಿದ ಪ್ರ ಫುಲ್‌ ಪಟೇಲ್‌ ಅವರನ್ನು ಉಚ್ಚಾಟಿಸಲಾಗಿದೆ. ನರೀಂದರ್‌ ಬಾತ್ರಾಗೆ ನಿಯಮಬಾಹಿರವಾಗಿ ಆಜೀವ ಸದಸ್ಯ ಸ್ಥಾನ ನೀಡಿರುವ ಕಾರಣ ಹಾಕಿ ಇಂಡಿಯಾ ಕೂಡ ಇಕ್ಕಟ್ಟಿಗೆ ಸಿಲುಕಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next