Advertisement

ಹೊಳಲ್ಕೆರೆ: ಮಹಿಳೆ ಆತ್ಮಹತ್ಯೆ

01:20 PM Oct 07, 2022 | Team Udayavani |

ಹೊಳಲ್ಕೆರೆ: ತಾಲೂಕಿನ ಟಿ. ನುಲೆನೂರು ಅಂಚೆ ಕಚೇರಿ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಅಂಚೆ ಕಚೇರಿ ಸಿಬ್ಬಂದಿ, ಅರೆಹಳ್ಳಿ ನಿವಾಸಿ ರಾಜೇಶ್ವರಿ ಮೃತ ಮಹಿಳೆ. ಈಕೆ ಗಂಡ ವಿಜಯಕುಮಾರ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜೇಶ್ವರಿ, ಗಂಡನ ದುರಾಭ್ಯಾಸದಿಂದ ಸುಮಾರು 12 ಲಕ್ಷ ಸಾಲ ಮಾಡಿದ್ದರು. ಬಂದ ವೇತನದಿಂದ ಸಾಲ ತೀರಿಸಿದ್ದರೂ, ಮತ್ತಷ್ಟು ಸಾಲ ಮಾಡಿ ಹಣ ಕೊಡಬೇಕು, ಇಲ್ಲವಾದರೆ ಸಾಯಿ ಎಂದು ಒತ್ತಾಯಿಸಿದರು. ಇದೇ ಕಾರಣಕ್ಕೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

22 ವರ್ಷದ ಹಿಂದೆ ಅಜ್ಜಂಪುರ ತಾಲೂಕಿನ ಚಿಕ್ಕಕಾನವಂಗಲ ಗ್ರಾಮದ ವಿಜಯಕುಮಾರ್ ಹಾಗೂ ರಾಜೇಶ್ವರಿ ವಿವಾಹ ನಡೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next