ಹೊಳಲ್ಕೆರೆ: ತಾಲೂಕಿನ ರಾಮಗಿರಿ ಹೋಬಳಿಯ ವ್ಯಾಪ್ತಿಯಲ್ಲಿ ಕಾಲ್ಕೆರೆ ಲಂಬಾಣಿಹಟ್ಟಿಯಲ್ಲಿ ಆಕಸ್ಮಿಕವಾಗಿ ಮನೆಗೆ ಬೆಂಕಿ ತಗಲಿದ ಪರಿಣಾಮ ಮನೆಯೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಮನೆಯಲ್ಲಿದ್ದ ಸಾವಿರಾರು ರೂ. ಹಣ, ಪಾತ್ರೆ ಪಗಡೆ ದವಸ ಧಾನ್ಯ ಮತ್ತಿತರ ಹಲವಾರು ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.
ಘಟನೆಯಿಂದ ಮನೆ ಮಾಲೀಕ ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಹೊಳಲ್ಕೆರೆ ಕ್ಷೇತ್ರದ, ಶಾಸಕ ಸ್ಥಾನದ ಅಭ್ಯರ್ಥಿಯಾದ ಡಾಕ್ಟರ್ ಜಯಸಿಂಹ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಡಾಕ್ಟರ್ ಜಯಸಿಂಹ ಮನೆ ಕಳೆದುಕೊಂಡ ಕುಟುಂಬಸ್ಥರಿಗೆ ದವಸ ಧಾನ್ಯ ಬಟ್ಟೆ ಬರೆ ನೀಡಿದ್ದು. ಸರ್ಕಾರ ಕೂಡಲೇ ಮನೆ ನಿರ್ಮಾಣಕ್ಕೆ 5 ಲಕ್ಷ ಅನುದಾನ ಹಾಗೂ ದವಸ ಧಾನ್ಯ ಬಟ್ಟೆ ಬರೆ ಕೊಂಡುಕೊಳ್ಳಲು ಒಂದು ಲಕ್ಷ ಪರಿಹಾರವನ್ನು ಕೂಡಲೇ ನೀಡಬೇಕು ಎಂದು ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
Related Articles
ಇದನ್ನೂ ಓದಿ: ಮನುಷ್ಯನ ಬೆಳವಣಿಗೆಗೆ ಜನಪದವೇ ಜೀವಾಳ: ಸಿಎಂ