ಹೊಳಲ್ಕೆರೆ : ಪಟ್ಟಣದ ಪಟ್ಟಣದ ಕಾಲಭೈರೇಶ್ವರ ದೇವಸ್ಥಾನದ ಆವರಣದಲ್ಲಿ ಗಂಗಾಧರಯ್ಯ ಶಾಸ್ತ್ರೀಗಳು ಗುರುವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.ಅಪಾರ ಭಕ್ತ ಸಮೂಹ ಗಂಗಾಧರಯ್ಯ ಶಾಸ್ತ್ರೀಗಳ ನಿಧನದಿಂದ ದು:ಖತಪ್ತರಾಗಿದ್ದಾರೆ.
ಬ್ರಹ್ಮಚಾರಿಯಾಗಿದ್ದ ಗಂಗಾಧರಯ್ಯ ಶಾಸ್ತ್ರೀಗಳು ತಮ್ಮ ಜೀವನೊದ್ದಕ್ಕು ಶಾಸ್ತ್ರ, ಸಂಪ್ರಾಯಗಳನ್ನು ಪ್ರಖರವಾಗಿ ಆಚರಣೆ ಮಾಡಿಕೊಂಡು ಬಂದ ಸಂಪ್ರದಾಯವಾದಿಗಳಾಗಿದ್ದರು.
ಪಟ್ಟಣದ ಸೇರಿದಂತೆ ಸುತ್ತಮುತ್ತ ಹತ್ತಾರು ಹಳ್ಳಿಗಳ ಅರಾಧ್ಯ ದೈವ ಎನ್ನುವ ಹೆಗ್ಗಳಿಗೆ ಹೊಂದಿದ್ದ ಗಂಗಾಧರಯ್ಯ ಶಾಸ್ತ್ರೀಗಳು ಜೀವನದುದ್ದಕ್ಕೂ ಹಿಂದು ಮುಸ್ಲಿಂ ಕ್ರೈಸ್ತ ಎನ್ನದೆ ಎಲ್ಲರಿಗೂ ಉಚಿತವಾಗಿ ಜನ ಸೇವೆ ಸಲ್ಲಿಸುವ ಮೂಲಕ ಸಂಪ್ರಾಯಗಳನ್ನು ನಡೆಸಿಕೊಂಡು ಬಂದವರು. ಗೃಹಪ್ರವೇಶ, ಭೂಮಿ ಪೂಜೆ, ನಾಮಕರಣ, ಹುಟ್ಟು ಸಾವು, ದೇವಸ್ಥಾನ ಧಾರ್ಮಿಕ ಕಾರ್ಯಗಳಿಗೆ ಉಪವಾಸದೊಂದಿಗೆ ಕಾಯಕ ಸಲ್ಲಿಸುವ ಮಹಾನ್ ಬ್ರಹ್ಮಚಾರಿ ಎನ್ನುವ ಹೆಗ್ಗಳಿಗೆ ಹೊಂದಿದ್ದರು.
ತಾಲೂಕಿನ ಹಲವಡೆ ಅಪಾರ ಸೇವೆ ಸಲ್ಲಿಸಿದ್ದ ಗಂಗಾಧರಯ್ಯರಿಗೆ ಶ್ರೀಮಂತ, ಬಡವರು, ದಲಿತರು, ಹಿಂದುಳಿದವರು, ಜಾತಿ ವರ್ಣ ಎನ್ನದೆ ಎಲ್ಲರನ್ನು ಸಮಾನ ಮನಸ್ಸಿನಿಂದ ಕಾಣುತ್ತಿದ್ದ ಬಂಧುಗಳಾಗಿದ್ದರು. ಧಾರ್ಮಿಕ ಸೇವೆ ಸಲ್ಲಿಸಿದ ಶಾಸ್ತ್ರೀಗಳು ದೈವಾಧೀನರಾದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಶೋಕ ವಾತವರಣ ನಿರ್ಮಾಣವಾಗಿದೆ.
ಪಟ್ಟಣದ ಶಿವಮೊಗ್ಗ ರಸ್ತೆಯ ಕೃಷಿ ಇಲಾಖೆ ಹಿಂಭಾಗದಲ್ಲಿರುವ ಶಾಸ್ತ್ರೀಗಳ ಗದ್ದೆಯಲ್ಲಿ ಶುಕ್ರವಾರ ಬೆಳಗ್ಗೆ 12 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತಿಮ ದರ್ಶನಕ್ಕೆ ಬಾಳೆಹೊನ್ನೂರು ಗುರುಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಭಕ್ತರು ತಿಳಿಸಿದ್ದಾರೆ.