Advertisement

ಹೊಳಲ್ಕೆರೆ: 19 ಅಡಿ ಎತ್ತರದ ಏಕಶಿಲಾ ಶಿವನ ವಿಗ್ರಹ ಪ್ರತಿಷ್ಠಾಪನೆ

09:41 PM Dec 09, 2022 | Team Udayavani |

ಹೊಳಲ್ಕೆರೆ :(ಚಿತ್ರದುರ್ಗ) ಪಟ್ಟಣದ ಹೃದಯ ಭಾಗದಲ್ಲಿರುವ ಶಿವನಕೆರೆಯಲ್ಲಿ 19 ಅಡಿ ಎತ್ತರದ ಏಕಶಿಲೆಯಲ್ಲಿ ಕೆತ್ತಲಾಗಿರುವ ಶಿವನ ವಿಗ್ರಹವನ್ನು ಶುಕ್ರವಾರ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ಮಾಡುವ ಮೂಲಕ ಪಟ್ಟಣದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುವಲ್ಲಿ ಶಾಸಕ ಎಂ.ಚಂದ್ರಪ್ಪ ಯಶಸ್ವಿಯಾಗಿದ್ದಾರೆ.

Advertisement

ಐತಿಹಾಸಕ ಹಿನ್ನಲೆಯ ಹೊನ್ನಕೆರೆಯಲ್ಲಿ ಖ್ಯಾತಿಯ ಶಿವನಕೆರೆಯಲ್ಲಿ ಜಟೆಯಲ್ಲಿ ಗಂಗೆಯನ್ನಿರಿಸಿಕೊಂಡಿರುವ ಪರಶಿವನನ್ನು ಲೋಕ ಕಲ್ಯಾಣಕ್ಕಾಗಿ ಕೆರೆಯ ಮಧ್ಯಭಾಗದಲ್ಲಿಟ್ಟು ಅಷ್ಟೋತ್ತರ ಅಭಿಷೇಕ ಸಲ್ಲಿಸಿ ನಾಡಿ ಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿತ್ತು.

ಶಾಸಕ ಎಂ.ಚಂದ್ರಪ್ಪ ಶಿವನ ವಿಗ್ರಹವನ್ನು ಪೂಜೆ ಸಲ್ಲಿಸಿ ಪ್ರತಿಷ್ಠಾಪನೆಗೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರು ಶ್ರದ್ದಾಭಕ್ತಿಯಿಂದ ಪೂಜಿಸುವ ಶಿವನನ್ನು ಶಿವನಕೆರೆಯ ಮಧ್ಯದಲ್ಲಿ ಕೂರಿಸುವುದಕ್ಕಾಗಿ ಚೆನ್ನೈನಿಂದ ಕ್ರೈನ್ ತರಿಸಲಾಗಿದೆ. ಹೊಳಲ್ಕೆರೆ ಯಿಂದ ಹೊಸದುರ್ಗಕ್ಕೆ ಹೋಗುವ ರಸ್ತೆಯಲ್ಲಿರುವ ಕೆರೆಯಲ್ಲಿ ನಿಲ್ಲಿಸಲಾಗುವ ಶಿವನನ್ನು ಎಲ್ಲರೂ ನಿಂತು ನೋಡಲೇಬೇಕು ಅಂತಹ ನಯನ ಮೋನಹರವಾಗಿದೆ. ಈ ವಿಗ್ರಹವನ್ನು ಕೆತ್ತಿರುವ ಶಿಲ್ಪಿ ಕೂದಲಲ್ಲಿ ಗಂಗೆಯನ್ನು ಕೂರಿಸಿರುವುದು ಅತ್ಯಾಕರ್ಷಣೀಯವಾಗಿದೆ. ಮುಂದಿನ ದಿನಗಳಲ್ಲಿ ಯಾರಾದರೂ ದೊಡ್ಡ ಸ್ವಾಮಿಗಳನ್ನು ಕರೆಸಿ ಶಿವನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಜೊತೆಗೆ ಹನ್ನೆರಡನೆ ಶತಮಾನದ ಬಸವಣ್ಣ ಹಾಗೂ ಲಿಂಗವನ್ನು ಕೂಡ ಇಲ್ಲಿ ಪ್ರತಿಷ್ಟಾಪಿಸಿ ಧರ್ಮಾತೀತ, ಜಾತ್ಯಾತೀತವಾಗಿ ಎಲ್ಲರನ್ನು ಆಹ್ವಾನಿಸಲಾಗುವುದು. ಹೊಳಲ್ಕೆರೆಯಲ್ಲಿರುವ ಒಂಟಿ ಕಲ್ಲಿನ ಗಣಪನನ್ನು ಬಿಟ್ಟರೆ ಕೆರೆಯ ಮಧ್ಯಭಾಗದಲ್ಲಿರುವ ಶಿವನ ವಿಗ್ರಹ ಪ್ರವಾಸಿ ತಾಣವಾಗಲಿದೆ ಎಂದು ಹೇಳಿದರು.

ರಾಜಕಾರಣದಲ್ಲಿ ಅಧಿಕಾರ ಶಾಶ್ವತವಲ್ಲ. ಇಂತಹ ಪುಣ್ಯದ ಕೆಲಸಗಳನ್ನು ಮಾಡಿದಾಗ ಮಾತ್ರ ಭೂಮಿ ಸೂರ್ಯ ಚಂದ್ರ ಇರುವ ತನಕ ಶಾಶ್ವತವಾಗಿ ಉಳಿಯಲಿದೆ. ಜೀವನದಲ್ಲಿ ಯಾರು ಎಲ್ಲಿಯೂ ನೋಡಿರದಂತೆ ಶಿವನ ವಿಗ್ರಹ ಇದಾಗಿದೆ ಬಣ್ಣಿಸಿದರು.

ಮಾಜಿ ಶಾಸಕ ಎ.ವಿ.ಉಮಾಪತಿ, ಪುರಸಭೆ ಅಧ್ಯಕ್ಷ ಆರ್.ಎ.ಅಶೋಕ್, ಉಪಾಧ್ಯಕ್ಷ ಕೆ.ಸಿ.ರಮೇಶ್, ಸದಸ್ಯರುಗಳಾದ ಮುರುಗೇಶ್, ಮಲ್ಲಿಕಾರ್ಜುನ್, ಹೆಚ್.ಆರ್.ನಾಗರತ್ನಮ್ಮವೇದಮೂರ್ತಿ, ಬಸವರಾಜ್ ಯಾದವ್, ಪುರಸಭೆ ಮೂಖ್ಯಾಧಿಕಾರಿ ಎ.ವಾಸಿಂ, ವೃತ ನೀರಿಕ್ಷಕ ರವೀಶ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next