ಭುವನೇಶ್ವರ : ವಿಶ್ವಕಪ್ ಹಾಕಿ ಪಂದ್ಯಾವಳಿಯ ವೇಳೆ ಸಣ್ಣ ಅವಘಡವೊಂದು ನಡೆದಿದ್ದು, ದಕ್ಷಿಣ ಕೊರಿಯಾದ ಛಾಯಾಚಿತ್ರ ಪತ್ರಕರ್ತ ರೊಬ್ಬರು ತೆರೆದ ಚರಂಡಿ ಗುಂಡಿಗೆ ಬಿದ್ದಿದ್ದಾರೆ.
ವಿಶ್ವಕಪ್ ಆರಂಭಕ್ಕೂ ಮುನ್ನ ಸರಕಾರ ಕೋಟ್ಯಂತರ ರೂ. ಹಣವನ್ನು ವ್ಯಯಿಸಿ ಸಕಲ ಸಿದ್ಧತೆ ನಡೆಸಿದ್ದರೂ ಬುಧವಾರ ನಡೆದ ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.
ಕೆಲ ವರದಿಗಳ ಪ್ರಕಾರ ಹಾಕಿ ವಿಶ್ವಕಪ್ ವರದಿ ಮಾಡಲು ಭುವನೇಶ್ವರದಲ್ಲಿದ್ದ ಫೋಟೋ ಜರ್ನಲಿಸ್ಟ್, ದುಮ್ಡುಮಾ ಪ್ರದೇಶದ ರಸ್ತೆ ಬದಿಯ ಸ್ಟಾಲ್‌ನಲ್ಲಿ ಚಹಾ ಸೇವಿಸುತ್ತಿದ್ದಾಗ ತೆರೆದ ಚರಂಡಿಗೆ ಬಿದ್ದಿದ್ದಾರೆ. ತತ್ ಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.