Advertisement

ಪುರುಷರ ಹಾಕಿ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ; ಸ್ಪೇನ್​ ವಿರುದ್ಧ ಭಾರತದ ಮೊದಲ ಪಂದ್ಯ

11:56 PM Sep 27, 2022 | |

ಹೊಸದಿಲ್ಲಿ: ಆತಿಥೇಯ ಭಾರತವು ಪುರುಷರ ಹಾಕಿ ವಿಶ್ವಕಪ್‌ ಕೂಟದ ಆರಂಭಿಕ ಪಂದ್ಯದಲ್ಲಿ ಸ್ಪೇನ್‌ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯವು ಜ. 13ರಂದು ನೂತನವಾಗಿ ನಿರ್ಮಿಸಲಾದ ಬಿರ್ಸಾ ಮುಂಡ ಕ್ರೀಡಾಂಗಣದಲ್ಲಿ ನಡೆಯಲಿದೆ.

Advertisement

ಎಫ್ಐಎಚ್‌ ರ್‍ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿರುವ ಟೋಕಿಯೊ ಒಲಿಂಪಿಕ್ಸ್‌ ಕಂಚು ವಿಜೇತ ಭಾರತವು “ಡಿ’ ಬಣದಲ್ಲಿ ಇಂಗ್ಲೆಂಡ್‌, ಸ್ಪೇನ್‌ ಮತ್ತು ವಿಶ್ವಕಪ್‌ಗೆ ಪದಾರ್ಪಣೆಗೈಯಲಿರುವ ವೇಲ್ಸ್‌ ಜತೆ ಸ್ಪರ್ಧಿಸಲಿದೆ.

ಜ. 15ರಂದು ನಡೆಯುವ ಎರಡನೇ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್‌ ತಂಡವನ್ನು ಎದುರಿಸಲಿದ್ದರೆ ಜ. 19ರಂದು ವೇಲ್ಸ್‌ ವಿರುದ್ಧ ಆಡಲಿದೆ.

“ಎ’ ಬಣದಲ್ಲಿ ವಿಶ್ವದ ನಂ. ವನ್‌ ಆಸ್ಟ್ರೇಲಿಯ ಸಹಿತ ಆರ್ಜೆಂಟೀನಾ, ಫ್ರಾನ್ಸ್‌ ಮತ್ತು ದಕ್ಷಿಣ ಆಫ್ರಿಕಾ ಇದೆ. ಹಾಲಿ ವಿಶ್ವ ಚಾಂಪಿಯನ್‌ ಬೆಲ್ಜಿಯಂ ಸಹಿತ ಜರ್ಮನಿ, ಕೊರಿಯ ಮತ್ತು ಜಪಾನ್‌ “ಬಿ’ ಬಣದಲ್ಲಿದ್ದರೆ “ಸಿ’ ಬಣದಲ್ಲಿ ನೆದರ್ಲೆಡ್ಸ್‌, ನ್ಯೂಜಿಲ್ಯಾಂಡ್‌, ಮಲೇಶ್ಯ ಮತ್ತು ಚಿಲಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next