ಭುವನೇಶ್ವರ: ಜರ್ಮನಿ ಮತ್ತು ನೆದರ್ಲೆಂಡ್ಸ್ ತಂಡಗಳು ವಿಶ್ವಕಪ್ ಹಾಕಿ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿವೆ.
ಬುಧವಾರ ನಡೆದ ಇಂಗ್ಲೆಂಡ್ ಎದುರಿನ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಜರ್ಮನಿ ಸೋಲಿನ ದವಡೆಯಿಂದ ಪಾರಾಗಿ ಶೂಟೌಟ್ನಲ್ಲಿ ಜಯ ಸಾಧಿಸಿತು. ಪಂದ್ಯದ ಮುಕ್ತಾಯಕ್ಕೆ ಕೇವಲ ಎರಡು ನಿಮಿಷ ಇರುವಾಗ ಇಂಗ್ಲೆಂಡ್ 2-0 ಮುನ್ನಡೆಯೊಂದಿಗೆ ಸೆಮಿಫೈನಲ್ ಕನಸಿನಲ್ಲಿ ವಿಹರಿಸುತ್ತಿತ್ತು.
ಆದರೆ 58ನೇ ನಿಮಿಷದಲ್ಲಿ ಜರ್ಮನಿ 2 ಗೋಲು ಸಿಡಿಸಿ ಪಂದ್ಯವನ್ನು ಸಮಬಲಕ್ಕೆ ತಂದಿತು. ಬಳಿಕ ಶೂಟೌಟ್ನಲ್ಲಿ 4-3 ಅಂತರದಿಂದ ಆಂಗ್ಲ ಪಡೆಯನ್ನು ಕೆಡವಿತು. ಜರ್ಮನಿಯ ಸೆಮಿಫೈನಲ್ ಎದುರಾಳಿ ಆಸ್ಟ್ರೇಲಿಯ.
ದ್ವಿತೀಯ ಪಂದ್ಯದಲ್ಲಿ ನೆದರ್ಲೆಂಡ್ಸ್ 5-1 ಗೋಲುಗಳಿಂದ ಕೊರಿಯಾದ ಸದ್ದಡಗಿಸಿತು. ಡಚ್ ಪಡೆಯಿನ್ನು ಚಾಂಪಿಯನ್ ಬೆಲ್ಜಿಯಂ ವಿರುದ್ಧ ಸೆಣಸಲಿದೆ.