ಭುವನೇಶ್ವರ: ಸೋಮವಾರದ ವಿಶ್ವಕಪ್ ಹಾಕಿ ಕ್ರಾಸ್ ಓವರ್ ಪಂದ್ಯದಲ್ಲಿ ಫ್ರಾನ್ಸ್ ಮೇಲೆರಗಿದ ಜರ್ಮನಿ ಅಧಿಕಾರಯುತ ಜಯದೊಂದಿಗೆ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದೆ.
“ಕಳಿಂಗ ಸ್ಟೇಡಿಯಂ’ನಲ್ಲಿ ನಡೆದ ಮುಖಾಮುಖಿಯಲ್ಲಿ ಜರ್ಮನಿ 5-1 ಅಂತರದಿಂದ ಫ್ರಾನ್ಸ್‌ಗೆ ಸೋಲುಣಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನ್ ಪಡೆ ಇಂಗ್ಲೆಂಡ್ ವಿರುದ್ಧ ಆಡಲಿದೆ.
ಅರ್ಧ ಹಾದಿ ಕ್ರಮಿಸುವಾಗಲೇ ಜರ್ಮನಿ 4-0 ಮುನ್ನಡೆ ಸಾಧಿಸಿತ್ತು. ಕೊನೆಯ ಗೋಲು, ಪಂದ್ಯದ ಮುಕ್ತಾಯಕ್ಕೆ ಒಂದು ನಿಮಿಷ ಇರುವಾಗ ಸಿಡಿಯಿತು. ಫ್ರಾನ್ಸ್‌ನ ಏಕೈಕ ಗೋಲು 57ನೇ ನಿಮಿಷದಲ್ಲಿ ದಾಖಲಾಯಿತು.
ಆರ್ಜೆಂಟೀನಾಕ್ಕೆ ಕೊರಿಯಾಘಾತ
ದಿನದ ದ್ವಿತೀಯ ಕ್ರಾಸ್ ಓವರ್ ಪಂದ್ಯದಲ್ಲಿ ಆರ್ಜೆಂಟೀನಾ ಕೊರಿಯಾಘಾತಕ್ಕೆ ಸಿಲುಕಿ ಕೂಟದಿಂದ ಹೊರಬಿತ್ತು. ನಿಗದಿತ ಅವಧಿಯ ಜಿದ್ದಾಜಿದ್ದಿ ಹೋರಾಟದಲ್ಲಿ ಪಂದ್ಯ 5-5ರಿಂದ ಸಮನಾಯಿತು. ಬಳಿಕ ಶೂಟೌಟ್‌ನಲ್ಲಿ ಕೊರಿಯಾ 3-2 ಅಂತರದಿಂದ ಆರ್ಜೆಂಟೀನಾವನ್ನು ಕೆಡವಿತು. ಕ್ವಾರ್ಟರ್ ಫೈನಲ್‌ನಲ್ಲಿ ಕೊರಿಯಾ-ನೆದರ್ಲೆಂಡ್ಸ್ ಮುಖಾಮುಖಿಯಾಗಲಿವೆ.
Related Articles