Advertisement

ಹಾಕಿ: ಕೆನಡಾ ವಿರುದ್ಧ ಪುರುಷರಿಗೂ ಜಯ; ಅಗ್ರಸ್ಥಾನಕ್ಕೆ

10:34 PM Aug 03, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಭಾರತದ ಪುರುಷರ ಹಾಕಿ ತಂಡ ಕೂಡ ಕೆನಡಾವನ್ನು ಮಣಿಸಿತು. ಅಂತರ 8-0. ಈ ಪರಾಕ್ರಮದೊಂದಿಗೆ ಇಂಗ್ಲೆಂಡನ್ನು ಹಿಂದಿಕ್ಕಿ “ಬಿ’ ವಿಭಾಗದ ಅಗ್ರಸ್ಥಾನಕ್ಕೆ ನೆಗೆಯಿತು. ಗುರುವಾರ ಮನ್‌ಪ್ರೀತ್‌ ಪಡೆ ವೇಲ್ಸ್‌ ವಿರುದ್ಧ ಆಡಲಿದೆ.

Advertisement

ಹರ್ಮನ್‌ಪ್ರೀತ್‌ ಸಿಂಗ್‌ (7ನೇ ಹಾಗೂ 54ನೇ ನಿಮಿಷ) ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಆಕಾಶ್‌ದೀಪ್‌ 2 ಆಕರ್ಷಕ ಫೀಲ್ಡ್‌ ಗೋಲ್‌ ಬಾರಿಸಿದರು (38ನೇ ಹಾಗೂ 60ನೇ ನಿಮಿಷ). ಅಮಿತ್‌ ರೋಹಿದಾಸ್‌ (10ನೇ ನಿಮಿಷ), ಲಲಿತ್‌ ಉಪಾಧ್ಯಾಯ (20ನೇ ನಿಮಿಷ), ಗುರ್ಜಂತ್‌ ಸಿಂಗ್‌ (27ನೇ ನಿಮಿಷ), ಮನ್‌ದೀಪ್‌ ಸಿಂಗ್‌ (58ನೇ ನಿಮಿಷ) ಉಳಿದ ಗೋಲು ವೀರರು. ಕೆನಡಾಕ್ಕೆ ಒಂದೂ ಗೋಲು ಹೊಡೆಯಲು ಸಾಧ್ಯವಾಗಲಿಲ್ಲ.

ಆತಿಥೇಯ ಇಂಗ್ಲೆಂಡ್‌ ವಿರುದ್ಧವೇ ಭಾರತ ಗೆಲುವಿನ ಖಾತೆ ತೆರೆಯಬೇಕಿತ್ತು. ಆದರೆ 3-0 ಮುನ್ನಡೆಯ ಬಳಿಕ ಪಂದ್ಯವನ್ನು 4-4 ಡ್ರಾ ಮಾಡಿಕೊಂಡು ಕೈ ಕೈ ಹಿಸುಕಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next