Advertisement

ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್‍ಗೆ ಅಭಿನಂದನೆ

01:05 PM Sep 06, 2021 | Team Udayavani |

ಶಿವಮೊಗ್ಗ: ಇತ್ತೀಚೆಗೆ ಮುಕ್ತಾಯಗೊಂಡ ಒಲಂಪಿಕ್ಸ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಶಿವಮೊಗ್ಗ ಮೂಲದ ಅಂಕಿತಾ ಬಿ.ಎಸ್ ಅವರನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೋಮವಾರ ಅಭಿನಂದಿಸಿದರು.

Advertisement

ಒಲಂಪಿಕ್ಸ್‍ನಲ್ಲಿ ಸೆಮಿ ಫೈನಲ್ ತಲುಪಿದ್ದ ಭಾರತೀಯ ಹಾಕಿ ತಂಡದ ಸದಸ್ಯರಾಗಿದ್ದ ತಾವು ಶಿವಮೊಗ್ಗ ಮೂಲದವರು ಎಂಬುವುದು ಜಿಲ್ಲೆಯ ಹೆಮ್ಮೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಂಕಿತಾ ಬಿ.ಎಸ್. ನಾನು ಶಿವಮೊಗ್ಗದವಳು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಅನ್ನಿಸುತ್ತಿದೆ. ಒಲಂಪಿಕ್ಸ್‍ನಲ್ಲಿ ಸಾಧನೆ ಮಾಡಿದ ತಂಡದ ಭಾಗವಾಗಿದ್ದು ಅವಿಸ್ಮರಣೀಯ ಅನುಭವ. ಶಿವಮೊಗ್ಗದಲ್ಲಿ ಪ್ರತಿಭಾವಂತ ಹಾಕಿ ಆಟಗಾರರು ಇದ್ದಾರೆ. ಕೆಲವರು ರಾಷ್ಟ್ರೀಯ ಮಟ್ಟದಲ್ಲೂ ಪ್ರತಿನಿಧಿಸುತ್ತಿದ್ದಾರೆ. ಇನ್ನಷ್ಟು ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡುವ ಗುರಿ ಇದೆ. ಶಿವಮೊಗ್ಗದಲ್ಲಿ ಉತ್ತಮ ಹಾಕಿ ಮೈದಾನ ಸೌಲಭ್ಯ ಕಲ್ಪಿಸಿದರೆ ಉತ್ತಮ ಆಟಗಾರರನ್ನು ಹೊರ ತರಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ :ಜಾಗದ ಸರ್ವೆಗೆ ನೀವೇ ಬನ್ನಿ ಹೂಗುಚ್ಛ ನೀಡಿ ಸ್ವಾಗತಿಸುವೆ :ಆಯುಕ್ತರಿಗೆ ಸಾ.ರಾ.ಮಹೇಶ್ ಹೇಳಿಕೆ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಅಂಕಿತಾ ಅವರ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next