ಜಕಾರ್ತಾ: ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ಸೂಪರ್-4 ಪಂದ್ಯದಲ್ಲಿ ಶನಿವಾರ ಭಾರತದ ಯುವ ತಂಡ ಅನುಭವಿ ಜಪಾನ್ ತಂಡದ ವಿರುದ್ಧ 2-1 ಗೋಲುಗಳ ವಿಜಯವನ್ನು ತನ್ನದಾಗಿಸಿಕೊಂಡಿದೆ.
ಲೀಗ್ ಹಂತದಲ್ಲಿ ಭಾರತ 2-5 ಅಂತರದಿಂದ ಜಪಾನ್ಗೆ ಸೋತಿತ್ತು. ಅವಕಾಶವನ್ನು ಬಳಸಿಕೊಂಡ ಭಾರತಡಾ ಯುವ ಆಟಗಾರರು ಸೇಡು ತೀರಿಸಿಕೊಂಡಿದ್ದಾರೆ. ಇದು ಪಂದ್ಯಾವಳಿಯಲ್ಲಿ ಜಪಾನ್ನ ಮೊದಲ ಸೋಲಾಗಿದೆ. ಮಂಜೀತ್ ಸಿಂಗ್ ಮತ್ತು ಪವನ್ ರಾಜ್ಭರ್ ಭಾರತದ ಪರ ಗೋಲು ಗಳಿಸಿದರು.
ಸೂಪರ್-4 ಹಂತದ ಉಳಿದೆರಡು ತಂಡಗಳೆಂದರೆ ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ. ಇದೊಂದು ರೌಂಡ್ ರಾಬಿನ್ ಮಾದರಿಯ ಹಂತ. ಎಲ್ಲರೂ ಎಲ್ಲರ ವಿರುದ್ಧ ಒಂದೊಂದು ಪಂದ್ಯ ಆಡಲಿದ್ದಾರೆ. ಅಗ್ರ ಸ್ಥಾನ ಪಡೆದ ತಂಡಗಳೆರಡು ಫೈನಲ್ಗೆ ಪ್ರವೇಶಿಸಲಿವೆ. ಕೊರಿಯಾ ಮತ್ತು ಮಲೇಷ್ಯಾವನ್ನು ಭಾರತ ಎದುರಿಸಬೇಕಿದೆ.