ಬೆಂಗಳೂರು : ಐದು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದು ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿರುವ ಹಿರಿಯ ಜನನಾಯಕ ಎಚ್.ಎಂ.ರೇವಣ್ಣ ಅವರ ಜೀವನ ಮತ್ತು ಸಾಧನೆಗಳ ಕುರಿತ ‘ಸಂಗತ’ ಎಂಬ ಗ್ರಂಥವನ್ನು ಮಾರ್ಚ್ 21 ರಂದು ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಕನ್ ವೆನ್ಷನ್ ಸೆಂಟರ್ ನಲ್ಲಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ನೆರವೇರಿಸಿದ್ದು, ಕಾರ್ಯಕ್ರಮದಲ್ಲಿ ಬಸವರಾಜ ಹೊರಟ್ಟಿ, ರಾಮಲಿಂಗರೆಡ್ಡಿ, ಬಿ.ಟಿ ಲಲಿತಾ ನಾಯಕ್, ಹಿರಿಯ ಕವಿ ಸಿದ್ದಲಿಂಗಯ್ಯ ಸೇರಿದಂತೆ ಹಲವರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು, ರೇವಣ್ಣ ಮತ್ತು ಅವರ ಪತ್ನಿಗೆ ಶುಭವಾಗಲಿ.ಅವರು ಮತ್ತಷ್ಟು ಜನ ಮುಖಿಯಾಗಿ ಕೆಲಸ ಮಾಡಲಿ.ನಾನು ಇನ್ನೂ ರಾಜಕೀಯ ಮಾಡಬೇಕು ಎಂದು ಕೊಂಡಿದ್ದೇನೆ. ಹಾಗಾಗಿ,ರೇವಣ್ಣ ಸಹ ರಾಜಕಾರಣದಲ್ಲಿ ಮುಂದುವರಿಯಲಿ ಎಂದರು.
ರಾಜಕೀಯ ಹಿನ್ನೆಲೆ,ಗಾಡ್‌ಫಾದರ್ ಇಲ್ಲದೆ ನಾನು ಮತ್ತು ರೇವಣ್ಣ ಇಷ್ಟು ಬೆಳದಿರುವುದು ಸಾಧನೆಯೆ ಆಗಿದೆ. ನನಗೆ ರಾಜಕೀಯ ಆಸಕ್ತಿ ಬೆಳೆದಿದ್ದು ರೈತ ನಾಯಕ ಪ್ರೊ.ನಂಜುಂಡ ಸ್ವಾಮಿ ಅವರಿಂದ.ಆ ಬೆಳವಣಿಗೆ ಆಗಿರದಿದ್ದರೆ ನಾನು ಮುಖ್ಯ ಮಂತ್ರಿ ಆಗುತ್ತಿರಲಿಲ್ಲ, ನಿಮ್ಮ ಪ್ರೀತಿ ವಿಶ್ವಾಸಗಳಿಸಲಾಗುತ್ತಿರಲಿಲ್ಲ. ಅವಕಾಶ ಬಳಸಿಕೊಂಡವರು ನಾಯಕರಾಗುತ್ತಾರೆ. ಇಲ್ಲವಾದರೆ ಆಗೊಲ್ಲ.ರಾಜಕಾರಣಕ್ಕೆ ಬರುವವರಿಗೆ ಸಿದ್ದಾಂತದ ಸ್ಪಷ್ಟತೆ ಇರಬೇಕುಕು ಎಂದರು.
ಈ ವೇಳೆ ಬಸವರಾಜ ಹೊರಟ್ಟಿ ಮಾತನಾಡಿದ್ದು, ರೇವಣ್ಣನವರೊಂದಿಗಿನ ಸ್ನೇಹವನ್ನು ಸ್ಮರಿಸಿದರು. ಇತ್ತೀಚಿನ ದಿನ ಗಳನ್ನು ನೋಡಿದರೆ ಪಕ್ಷಗಳ ಆಚೆಗೆ ರಾಜಕಾರಣಿಗಳ ನಡುವೆ ಸ್ನೇಹ ಉಳಿಯುವುದು ಕಷ್ಟ ಅನ್ನಿಸುತ್ತಿದೆ. ರೇವಣ್ಣ ಅತ್ಯಂತ ಸ್ನೇಹಮಹಿ ನಾಯಕ ಎಂದಿದ್ದಾರೆ.