Advertisement

Hit And Run: ಆಟೋ ರಿಕ್ಷಾಕ್ಕೆ ಲಾರಿ ಢಿಕ್ಕಿ; 6 ಮಹಿಳಾ ಕಾರ್ಮಿಕರು ಮೃತ್ಯು

01:06 PM May 17, 2023 | Team Udayavani |

ಆಂಧ್ರ ಪ್ರದೇಶ: ಲಾರಿ – ಆಟೋ ರಿಕ್ಷಾ ನಡುವಿನ ಭೀಕರ ಅಪಘಾತದಲ್ಲಿ 6  ಮಂದಿ ಮೃತಪಟ್ಟಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಬುಧವಾರ(ಮೇ.17 ರಂದು) ಮುಂಜಾನೆ ನಡೆದಿದೆ.

Advertisement

ಗುಡೂರು ಕಡೆಯಿಂದ ಬರುತ್ತಿದ್ದ ಲಾರಿ ತೆಲಂಗಾಣದ ನಲ್ಗೊಂಡ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ರಿಕ್ಷಾದಲ್ಲಿದ್ದ 6 ಮಹಿಳಾ ಕಾರ್ಮಿಕರು ಮೃತಪಟ್ಟಿದ್ದು, ಇನ್ನು 6 ಮಂದಿ ಗಾಯಗೊಂಡಿದ್ದಾರೆ. ಅಪಘಾತ ಮಾಡಿ ಲಾರಿ ಸ್ಥಳದಿಂದ ಪರಾರಿಯಾಗಿದೆ ಎಂದು ವರದಿ ತಿಳಿಸಿದೆ.

ಮೃತ ಮಹಿಳಾ ಕಾರ್ಮಿಕರು ಮೆಣಸಿನಕಾಯಿ ಕೊಯ್ಲು ಕೆಲಸಕ್ಕಾಗಿ ಪಲ್ನಾಡು ಜಿಲ್ಲೆಯ ಪುಲಿಪಾಡು ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಸದ್ಯ ಪರಾರಿಯಾದ  ಲಾರಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next