Advertisement

ಥಾಣೆಯಲ್ಲಿ ಹಿಸ್ಟರಿ ಶೀಟರ್‌ ಕೊಲೆ; ಕತ್ತು ಸೀಳಲ್ಪಟ್ಟ ಶವ ಪತ್ತೆ

12:06 PM Mar 02, 2018 | udayavani editorial |

ಥಾಣೆ : ಹಲವಾರು ಕ್ರಿಮಿನಲ್‌ ಆರೋಪಗಳನ್ನು ಹೊತ್ತಿದ್ದ 23ರ ಹರೆಯದ ಬಬ್ಲೂ ಚೌರಾಶಿಯಾ ಎಂಬಾತ ಕೊಲೆಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಬಬ್ಲೂ ಮೃತ ದೇಹ ನಿನ್ನೆ ಗುರುವಾರ ರಾತ್ರಿ 9 ಗಂಟೆಗೆ ಉಲ್ಲಾಸನಗರ ಪಟ್ಟಣದಲ್ಲಿ ಪತ್ತೆಯಾಗಿತ್ತು. ಆತನ ದೇಹದ ಮೇಲೆ ಹಲವಾರು ಇರಿತದ ಗಾಯಗಳಿದ್ದವು; ಆತನ ಕತ್ತನ್ನು ಸೀಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಬಬ್ಲೂ ಚೌರಾಶಿಯಾ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ ಮುಂತಾದ ಕ್ರಿಮಿನಲ್‌ ಕೇಸುಗಳು ಇದ್ದವು. 

ಬಬ್ಲೂ ಕೊಲೆ ಸಂಬಂಧ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next