Advertisement

Vijayapura:ದತ್ತು ಯೋಜನೆಗಾಗಿ ಐತಿಹಾಸಿಕ ತಾಜ್ ಬಾವಡಿ ಪರಿಶೀಲನೆ: ಮುಂಬೈ ಮೂಲದ ಸಂಸ್ಥೆ ಭೇಟಿ

06:21 PM Feb 20, 2024 | Suhan S |

ವಿಜಯಪುರ: ಪಾರಂಪರಿಕ ಸ್ಮಾರಕಗಳ ದತ್ತು ಯೋಜನೆ ಅನುಷ್ಠಾನದ ಭಾಗವಾಗಿ ನಗರದಲ್ಲಿರುವ ಐತಿಹಾಸಿಕ ಸ್ಮಾರಕಗಳ ನಿರ್ವಹಣೆ ಕುರಿತು ಮುಂಬೈನ ವಿಶ್ವ ಸ್ಮಾರಕ ಸಂರಕ್ಷಣೆ ನಿಧಿ ಸಂಸ್ಥೆ ಪ್ರತಿನಿಧಿಗಳು ಜಿಲ್ಲಾಧಿಕಾರಿ ಭೂಬಾಲನ್ ಜೊತೆ ಐತಿಹಾಸಿಕ ತಾಜ್ ಬಾವಡಿ ಸ್ಥಳ ಪರಿಶೀಲನೆ ನಡೆಸಿದರು.

Advertisement

ರಾಜ್ಯದ ಸ್ಮಾರಕ ಸಂರಕ್ಷಣೆ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕಾಗಿ ಸ್ಮಾರಕಗಳನ್ನು ಅಭಿವೃದ್ಧಿಪಡಿಸಿ, ಕಾರ್ಪರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿಯಲ್ಲಿ ಸ್ಮಾರಕಗಳ ದತ್ತು ಪಡೆಯಲು ಅವಕಾಶವನ್ನು ಕಲ್ಪಿಸಿ ದತ್ತು ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಪಾರಂಪರಿಕ ಸ್ಮಾರಕ ದತ್ತು ಯೋಜನೆ ಅಡಿಯಲ್ಲಿ ತಾಜ್ ಬಾವಡಿ ಸ್ಮಾರಕವನ್ನು ಮುಂಬೈನ ವಿಶ್ವ ಸ್ಮಾರಕ ಸಂರಕ್ಷಣೆ ನಿಧಿ ಸಂಸ್ಥೆ ದತ್ತು ಪಡೆಯಲು ಮುಂದೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿರುವ ಐತಿಹಾಸಿಕ ತಾಜ್‌ ಬಾವಡಿ ಜಲಸ್ಮಾರಕಕ್ಕೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಸ್ಮಾರಕ ಪರಿಸರದಲ್ಲಿ ಸಂರಕ್ಷಣೆ ಮತ್ತು ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳು, ಸೌಂದರೀಕರಣ, ಸುಧಾರಿತ ಪ್ರವಾಸಿ ಸೌಕರ್ಯಗಳನ್ನು ಒದಗಿಸಿ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಿಲು ವಿವಿಧ ಯೋಜನೆ ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಗುತ್ತಿದೆ.

ಈ ವಿಷಯವಾಗಿ ದತ್ತು ಪಡೆಯುವ ಸಂಸ್ಥೆ ಜಿಲ್ಲಾಧಿಕಾರಿಗಳೊಂದಿಗೆ ತಾಜ್‌ ಬಾವಡಿ ಸ್ಮಾರಕ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದರು.

Advertisement

ತಾಜ್‌ ಬಾವಡಿ ಸ್ಮಾರಕದ ಸುತ್ತಮುತ್ತಲಿರುವ ಶಿಥಿಲಾವಸ್ಥೆಯಲ್ಲಿರುವ ಗೋಡೆಗಳ ಸಂರಕ್ಷಣೆ, ಸ್ಮಾರಕ ಅಭಿವೃದ್ಧಿ, ಮೂಲಭೂತ ಸೌಕರ್ಯ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲು ಸೂಚಿಸಿದರು.

ವಲ್ಡ್ ಮೊನುಮೆಂಟ್ ಫಂಡ್ಸ್ ಇಂಡಿಯಾ ಅಶೋಷಿಯನ್ ಮುಂಬೈ ಸಂಸ್ಥೆಯ ಸಂಸ್ಥೆಯ ಯೋಜನಾ ನಿರ್ದೇಶಕ ಅನಾಬೇಲ್ ಲೋಪೆಜ್, ವಾಸ್ತು ಪರಿಣಿತರಾದ ಬಿ.ಶರತಚಂದ್ರ, ಅಖಿಲಾ ಉದಯಶಂಕರ, ಸಿಂಧುಜಾದೇವಿ ಕಲ್ಯಾಣಿ, ಪ್ರೊಬೇಷನರಿ ಐಪಿಎಸ್ ಅಧಿಕಾರಿ ಶಾಲೂ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಜಿಲ್ಲಾ ವಕ್ಪ ಅಧಿಕಾರಿ ಎಂ.ತಬಸುಮ್, ನಿರೀಕ್ಷಕ ಮೋಹಸಿನ ಜಮಖಂಡಿ, ಸರ್ವೇ ಇಲಾಖೆಯ ಪ್ರಕಾಶ ಪಾಟೀಲ, ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಸಮಾಲೋಚಕ ಅನಿಲಕುಮಾರ ಬಣಜಿಗೇರ, ಜಿಲ್ಲೆಯ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ಹೋರಾಟಗಾರ ಪೀಟರ್ ಅಲೆಕ್ಸಾಂಡರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next