Advertisement

ಅಗ್ನಿವೀರರ ಮೊದಲ ತಂಡ ಸೇವೆಗೆ ಸಿದ್ಧ; 273 ಮಹಿಳೆಯರೂ ಸೇರಿ 2,600 ನೌಕಾ ಅಗ್ನಿವೀರರು

09:50 PM Mar 25, 2023 | Team Udayavani |

ನವದೆಹಲಿ:ಭಾರತೀಯ ಸೇನೆಯ ಹಲವು ದಶಕಗಳಷ್ಟು ಹಳೆಯ ನೇಮಕಾತಿ ಪ್ರಕ್ರಿಯೆಗೆ ಅಂತ್ಯಹಾಡಿ, “ಅಗ್ನಿವೀರ’ ಯೋಜನೆಯನ್ನು ಘೋಷಿಸಿದ ಬಳಿಕ ದೇಶದ ಮೊತ್ತಮೊದಲ “ಅಗ್ನಿವೀರ’ರ ತಂಡ ಸೇವೆಗೆ ಸಿದ್ಧವಾಗಿದೆ.

Advertisement

ಒಡಿಶಾದ ಐಎನ್‌ಎಸ್‌ ಚಿಲ್ಕಾದಲ್ಲಿ 273 ಮಹಿಳೆಯರೂ ಸೇರಿದಂತೆ 2,600 ನೌಕಾ ಅಗ್ನಿವೀರರ ಮೊದಲ ತಂಡ ಸತತ 4 ತಿಂಗಳ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದೆ. ಇದೇ 28ರಂದು ಅವರ “ಪಾಸಿಂಗ್‌ ಔಟ್‌ ಪರೇಡ್‌’ ನಡೆಯಲಿದೆ ಎಂದು ನೌಕಾಪಡೆ ತಿಳಿಸಿದೆ.

ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿಕುಮಾರ್‌ ಅವರು ಈ ಪರೇಡ್‌ನ‌ಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿರುವ ಅಗ್ನಿವೀರರನ್ನು ನಿರ್ಗಮನ ಪಥಸಂಚಲನದ ಬಳಿಕ, ಸಾಗರ ತರಬೇತಿಗಾಗಿ ಮುಂಚೂಣಿ ಯುದ್ಧ ನೌಕೆಗಳಲ್ಲಿ ನಿಯೋಜಿಸಲಾಗುತ್ತದೆ. ಪಾಸಿಂಗ್‌ ಔಟ್‌ ಪರೇಡ್‌ ಅನ್ನು ಸಾಮಾನ್ಯವಾಗಿ ಹಗಲು ಹೊತ್ತಲ್ಲಿ ನಡೆಸಲಾಗುತ್ತದೆ. ಆದರೆ, ಈ ಬಾರಿ ಸಶಸ್ತ್ರ ಪಡೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಮಾ.28ರಂದು ಸೂರ್ಯಾಸ್ತದ ಬಳಿಕ ಪರೇಡ್‌ ನಡೆಸುತ್ತಿರುವುದು ವಿಶೇಷ.

ತರಬೇತಿ ಪೂರ್ಣಗೊಳಿಸಿರುವ ಅಗ್ನಿವೀರರು- 2,600
ಈ ಪೈಕಿ ಮಹಿಳೆಯರ ಸಂಖ್ಯೆ- 273
ತರಬೇತಿ ಆರಂಭವಾಗಿದ್ದು – ನವೆಂಬರ್‌ 2022
ಐಎನ್‌ಎಸ್‌ ಚಿಲ್ಕಾದಲ್ಲಿ ಎಷ್ಟು ವಾರಗಳ ತರಬೇತಿ?- 16
ಏನೇನು ತರಬೇತಿ?- ದೈಹಿಕ ತರಬೇತಿ, ಸ್ವಿಮ್ಮಿಂಗ್‌, ಸಣ್ಣ ಶಸ್ತ್ರಾಸ್ತ್ರಗಳು, ಸೈಬರ್‌ ಭದ್ರತೆ, ನೌಕಾಪಡೆ ಕೇಂದ್ರಿತ ತರಬೇತಿ ಇತ್ಯಾದಿ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next