Advertisement
ಪ್ರಕರಣ ವಿವರರಾಮ ನಲ್ಕೆ ತನ್ನ ಪತ್ನಿ ಮೋಹಿನಿ ಹಾಗೂ ಮಕ್ಕಳಾದ ಧನುಷ್ (10) ಮತ್ತು ಧನ್ಯಶ್ರೀ (8) ಜತೆ ಬಾಯಾಡಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. 2018 ಮೇ 17ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದು ಮದ್ಯಪಾನ ಮಾಡುತ್ತಿದ್ದಾಗ ಪತ್ನಿ ಆಕ್ಷೇಪಿಸಿದ್ದರು.ಕೋಪಗೊಂಡ ರಾಮನು ಪತ್ನಿಯ ಹೊಟ್ಟೆಗೆ ತುಳಿದು ಗಂಭೀರ ಹಲ್ಲೆ ಮಾಡಿದ್ದ. ಆಕೆ ನೆಲಕ್ಕೆ ಬಿದ್ದಾಗ ಪುತ್ರ ಧನುಷ್ ಬೊಬ್ಬೆ ಹಾಕಿದ್ದು, ಆತನನ್ನು ರಾಮ ನಲ್ಕೆ ಸಮಾಧಾನಪಡಿಸಿದ್ದ. ಮೋಹಿನಿ ಮರುದಿನ (ಮೇ 19) ಬೆಳಗ್ಗೆ ಏಳದಿದ್ದಾಗ ರಾಮನು ಬೀಡಿಯ ಬೆಂಕಿ ಯಿಂದ ಆಕೆಯ ಕೈ, ಕಾಲು, ಸೊಂಟಕ್ಕೆ ಸುಟ್ಟು ಗಾಯಗೊಳಿಸಿದ್ದ ಎಂದು ಆರೋಪಿಸಲಾಗಿತ್ತು. ಅಂದು ಸಂಜೆ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.
Related Articles
ಮಕ್ಕಳಾದ ಧನುಷ್ ಮತ್ತು ಧನ್ಯಶ್ರೀಗೆ ನಗರದಲ್ಲಿ ಉತ್ತಮ ವ್ಯವಸ್ಥೆ ಯಿರುವ ಸರಕಾರಿ ವಸತಿ ಶಾಲೆಗೆ ಸೇರ್ಪಡೆಗೊಳಿಸುವ ವ್ಯವಸ್ಥೆಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಾಡ ಬೇಕೆಂದು ನ್ಯಾಯಾಲಯ ಆದೇಶಿಸಿದೆ.
Advertisement
ಮೃತ ಮೋಹಿನಿಯ ತಂಗಿ ಶಶಿಕಲಾ ತಿಂಗಳಿಗೆ ಒಂದು ಬಾರಿ ಮಕ್ಕಳನ್ನು ಜೈಲಿಗೆ ಕರೆದೊಯ್ದು ತಂದೆಯ ಜತೆ ಮಾತನಾಡಲು ಅನುಕೂಲ ಮಾಡಿ ಕೊಡಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ. ತಂದೆ ಮತ್ತು ಮಕ್ಕಳ ಸಂಬಂಧ ಕಡಿದು ಹೋಗದಿರಲಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಮಕ್ಕಳಾದ ಧನುಷ್ ಮತ್ತು ಧನ್ಯಶ್ರೀ ತಾಯಿಯ ಪರವಾಗಿ ಸಾಕ್ಷಿ ಹೇಳಿದ್ದರು. ಮ್ಯಾಜಿಸ್ಟ್ರೇಟರ ಮುಂದೆ ಮಕ್ಕಳು ನೀಡಿದ ಹೇಳಿಕೆ ಕೂಡ ಆರೋಪಿಗೆ ಶಿಕ್ಷೆಯಾಗುವಲ್ಲಿ ಪೂರಕವಾಗಿತ್ತು. ಶವದ ಮರಣೊತ್ತರ ಪರೀಕ್ಷೆ ನಡೆಸಿದ ಡಾ| ಪವನ್‌ಚಂದ್ರ ಶೆಟ್ಟಿ ವಿವರವಾದ ಸಾಕ್ಷಿ ಹೇಳಿದ್ದರು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿ ಪುಷ್ಪರಾಜ್ ಅಡ್ಯಂತಾಯ ವಾದಿಸಿದ್ದರು.
ಶಿಕ್ಷೆ ವಿವರ ಐಪಿಸಿ 498(2)ರಡಿ 2 ವರ್ಷ ಸಾದಾ ಸಜೆ ಮತ್ತು 5 ಸಾ. ರೂ. ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ 1 ತಿಂಗಳು ಸಾದಾ ಶಿಕ್ಷೆ , ಐಪಿಸಿ 304(11) ಅನ್ವಯ 2 ವರ್ಷ ಕಠಿನ ಶಿಕ್ಷೆ ವಿಧಿಸಲಾ ಗಿದೆ. ಆರೋಪಿ ಬಂಧನವಾದ ಬಳಿಕ ಜೈಲಲ್ಲೇ ಇರುವ ಕಾರಣ ನ್ಯಾಯಾಂಗ ಬಂಧನದ ಅವಧಿಯನ್ನು ಶಿಕ್ಷೆಯಿಂದ ಕಡಿತಗೊಳಿಸಲು ಆದೇಶಿಸಲಾಗಿದೆ.