ಹಿರಿಯೂರು: ನಗರದ ಹುಳಿಯಾರು ರಸ್ತೆ ಬಳಿರುವ ಓಂಶಕ್ತಿ ಶ್ರೀ ಅರ್ಧನಾರೀಶ್ವರಿ ಕರುಮಾರಿಯಮ್ಮ ದೇವರ 17ನೇ ವರ್ಷದ ಶರನ್ನವರಾತ್ರಿ ಪೂಜಾ ಮಹೋತ್ಸವ ಭಾನುವಾರದಿಂದ ಆರಂಭಗೊಂಡಿತು. ಲೋಕ ಕಲ್ಯಾಣಕ್ಕಾಗಿ 29ರಿಂದ 4ರ ಶುಕ್ರವಾರದ ವರೆಗೆ ಪ್ರತಿದಿನ ಬೆಳಿಗ್ಗೆ ಚಂಡಿ ಪಾರಾಯಣ, 30ರಂದು ಮಹೇಶ್ವರಿ ಹೋಮ ಹಾಗೂ ಕುಂಕುಮ ಅಲಂಕಾರ,
ಅ.1ರಂದು ಮಂಗಳವಾರ ಕುಮಾರಿ ಹೋಮ ಮತ್ತು ವಿಭೂತಿ ಅಲಂಕಾರ ಮಾಡಲಾಗುವುದು. ಅ.2ರಂದು ವೈಷ್ಣವೀ ಹೋಮ, ಶಾಕಂಬರಿ ಅಲಂಕಾರ. ಅ.3ರಂದು ಗುರುವಾರ ವಾರಾಹಿ ಹೋಮ ನಡೆಯಲಿದೆ.
ಅ.4ರಂದು ಇಂದ್ರಾಣಿ ಹೋಮ ಮತ್ತು ಹೆಸರು ಬಳೆ ಅಲಂಕಾರ. ಅ.5ರಂದು ಚಂಡೀ ಸರಸ್ವತಿ ಸೂಕ್ತ ಪಾರಾಯಣ ಸರಸ್ವತಿ ಹೋಮ ಮತ್ತು ಸರಸ್ವತಿ ಅಲಂಕಾರ ಮಾಡಲಾಗುವುದು. ಅ.6ರಂದು ಬೆಳಗ್ಗೆ 6ಕ್ಕೆ ಚಂಡಿ ದುರ್ಗಾ ಸೂಕ್ತ ಪಾರಾಯಣ, ಹೋಮ ಮತ್ತು ಅಲಂಕಾರ. ಅ.7ರಂದು ಶ್ರೀಸೂಕ್ತ ಪಾರಾಯಣ ಲಕ್ಷ್ಮೀ ಹೋಮ ರಜತ ಕವಚ ಅಲಂಕಾರ ನಡೆಯಲಿದೆ.
ಪ್ರತಿ ದಿನ ಸಂಜೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ನವರಾತ್ರಿಯ ಪ್ರಯುಕ್ತ ದೇವಾಲಯದಲ್ಲಿ ನಡೆಯುವ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತ ವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿ ಮನವಿ ಮಾಡಿದೆ.