Advertisement

ರೈತರಿಂದ ಸುಂಕ ವಸೂಲಿ ಮಾಡದಿರಿ

03:35 PM Dec 25, 2019 | Team Udayavani |

ಹಿರಿಯೂರು: ರೈತರು ಬೆಳೆದ ಪದಾರ್ಥಗಳನ್ನು ಪ್ರತಿ ದಿನ ಮಾರುಕಟ್ಟೆಗೆ ತಂದಾಗ ನಗರಸಭೆ ಸಿಬ್ಬಂದಿ ರೈತರ ಬಳಿ ಜಕಾತಿ ವಸೂಲಿ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ತಕ್ಷಣ ಜಕಾತಿ ವಸೂಲಿ ನಿಲ್ಲಿಸಬೇಕು ಎಂದು ನಗರಸಭೆ ಸದಸ್ಯ ಎ. ಪಾಂಡುರಂಗ ಒತ್ತಾಯಿಸಿದರು.

Advertisement

ನಗರಸಭೆ ಸಭಾಂಗಣದಲ್ಲಿ ನಡೆದ ಆಯ-ವ್ಯಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ 40-50 ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿರುವ ಬಡವರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಹಕ್ಕುಪತ್ರ ನೀಡಬೇಕು. ಹಕ್ಕುಪತ್ರ ನೀಡುವುದರಿಂದ ನಗರಸಭೆ ಆದಾಯ ಹೆಚ್ಚಾಗುತ್ತದೆ. ಪುಟ್‌ಪಾತ್‌ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲಾಗಿದೆ. ಪರ್ಯಾಯ ವ್ಯವಸ್ಥೆ ಮಾಡುವವರೆಗೆ ಅವರು ಮೊದಲಿನಂತೆ ವ್ಯಾಪಾರ ಮಾಡಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ನೆಹರು ಕ್ರೀಡಾಂಗಣದಲ್ಲಿ ಪಾನಿಪೂರಿ ಅಂಗಡಿಗಳಿವೆ. ಅಲ್ಲಿ ಮಲ- ಮೂತ್ರ ವಿಸರ್ಜನೆ ಮಾಡುವುದರಿಂದ ದುರ್ವಾಸನೆ ಉಂಟಾಗುತ್ತಿದೆ. ಈ ಸಮಸ್ಯೆ ನಿವಾರಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವ ತನಕ ಮೊದಲಿನ ಹಾಗೇ ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.

ಕೇಶವಮೂರ್ತಿ ಮಾತನಾಡಿ ನಗರಸಭೆ ವತಿಯಿಂದ ಪುಟ್‌ಪಾತ್‌ ಅಂಗಡಿಗಳನ್ನು ಎತ್ತಂಗಡಿ ಮಾಡಿಸಲಾಗಿದೆ. ಪುಟ್‌ಪಾತ್‌ ಗಳಲ್ಲಿ ಚರ್ಮೋದ್ಯಮ ಮಾಡುತ್ತಿದ್ದ ಕಡುಬಡವರಿಗೆ ಇದರಿಂದ ಅನ್ಯಾಯವಾಗಿದೆ. ತಕ್ಷಣ ಅವರು ಮೊದಲು ಇದ್ದ ಜಾಗದಲ್ಲೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ದಿವಾಕರ ನಾಯಕ್‌ ಮಾತನಾಡಿ, ಟಿ.ಟಿ. ರಸ್ತೆಯಲ್ಲಿರುವ ನಗರಸಭೆ ಅಂಗಡಿ ಮಳಿಗೆಗಳ ಬಾಡಿಗೆ ಬರುವಂತೆ ಕ್ರಮ ಕೈಗೊಳ್ಳಬೇಕು. ಇದರಿಂದ ನಗರಸಭೆಗೆ ಆದಾಯ ಹೆಚ್ಚಾಗಲಿದ್ದು, ಪೌರಾಯುಕ್ತರು ಈ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಶಿವಕುಮಾರ್‌ ಮಾತನಾಡಿ, ಹಿರಿಯೂರಿನ ಹೃದಯ ಭಾಗದಲ್ಲಿರುವ ಹಳೆ ಕಡ್ಲೇಕಾಯಿ ಮಂಡಿಯಲ್ಲಿರುವ ನೆಹರು ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Advertisement

ಎಂ.ಡಿ.ಚಂದ್ರಶೇಖರ್‌ ಮಾತನಾಡಿ, ನಗರದಲ್ಲಿ ಗ್ರಂಥಾಲಯಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಹಾಗೂ
ಓದುಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಪೌರಾಯುಕ್ತ ಶಿವಪ್ರಸಾದ್‌ ಮಾತನಾಡಿ, ಪರ್ಯಾಯ ವ್ಯವಸ್ಥೆ ಕಲ್ಪಿಸುವ ತನಕ ಪುಟ್‌ಪಾತ್‌ ವ್ಯಾಪಾರಿಗಳುತಾತ್ಕಾಲಿಕವಾಗಿ ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಮಾಡಿಕೊಳ್ಳಲಿ. ಸಾರ್ವಜನಿಕರಿಂದ ಬಂದಿರುವ ಈ ಎಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ನಗರಸಭೆ ಸದಸ್ಯರಾದ ಎಸ್‌.ಪಿ.ಟಿ ದಾದಾಪೀರ್‌,
ಸಮೀಉಲ್ಲಾ, ಅನಿಲ್‌ಕುಮಾರ್‌, ಬಿ.ಎನ್‌. ಪ್ರಕಾಶ್‌, ಎಂ.ಡಿ. ಸಣ್ಣಪ್ಪ, ಚಿತ್ರಜಿತ್‌ ಯಾದವ್‌, ಗುಂಡೇಶ್‌ಕುಮಾರ್‌, ಗಣೇಶ್‌, ಮೊದಲಮರಿಯ, ಶಿವರಂಜನಿ, ರತ್ನಮ್ಮ, ಕವಿತಾ, ಮಮತಾ, ಚಿರಂಜೀವಿ, ಸಾದತ್‌ ಉಲ್ಲಾ, ಬಿ. ಸಿದ್ದಪ್ಪ, ಹುಚ್ಚವ್ವನಹಳ್ಳಿ ಪ್ರಸನ್ನ, ಬೋರನಕುಂಟೆ ಜೀವೇಶ್‌, ಜಿ.ಎಲ್‌. ಮೂರ್ತಿ, ಅಸ್ಲಾಂ, ಮಂಜುನಾಥ್‌ ಸೇರಿದಂತೆ ನಗರದ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಗರಸಭೆ ವ್ಯವಸ್ಥಾಪಕರಾದ ರಹಮತ್‌ ಉನ್ನೀಸಾ, ಎಇ ಕೃಷ್ಣಾ ನಾಯ್ಕ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next