Advertisement
ನಗರದ ಅರಣ್ಯ ಇಲಾಖೆ ಕಚೇರಿಯಲ್ಲಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ಜತೆ ಇಲಾಖೆ ಸೌಲಭ್ಯಗಳಕುರಿತ ಮಾಹಿತಿ ನೀಡುವ ಸಭೆಯಲ್ಲಿ ಅವರು ಮಾತನಾಡಿದರು.
ಲಕ್ಕೇನಹಳ್ಳಿ, ಚಳಮಡು, ಅರಿಶಿಣಗುಂಡಿ, ಯಲ್ಲದಕೆರೆ ಮೊದಲಾದ ಗ್ರಾಮಗಳಲ್ಲಿ ಬಹಳ ಹಿಂದೆ 1142 ಹೆಕ್ಟೇರ್ ಅರಣ್ಯ ಭೂಮಿಯನ್ನು ರೈತರಿಗೆ ನೋಟಿಫಿಕೇಶನ್ ಮಾಡಿಕೊಡಲಾಗಿದೆ. ಪ್ರಸ್ತುತ ಅರಣ್ಯ ಕಾಯ್ದೆ ಕಠಿಣ ಆಗಿರುವುದರಿಂದ ಒತ್ತುವರಿ ಕಡಿಮೆಯಾಗಿದೆ. ಒತ್ತುವರಿ ಮಾಡಿದರೂ ಫಲಾನುಭವಿಗಳಿಗೆ ಹಸ್ತಾಂತರ ಆಗುವುದಿಲ್ಲ. ಬೇಸಿಗೆ ಸಮಯದಲ್ಲಿ ಅರಣ್ಯದಲ್ಲಿನ ಒಣ ಹುಲ್ಲಿಗೆ ಬೆಂಕಿ ಹಚ್ಚುವ ಕೆಲಸವನ್ನು ಕೆಲವು ಪಶುಪಾಲಕರು ಮಾಡುತ್ತಿದ್ದು, ಇದರಿಂದ ಮರ-ಗಿಡಗಳಿಗೆ ಹಾನಿಯಾಗುತ್ತಿದೆ. ರೈತ ಸಂಘದವರು ಜನರಿಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ಇಲಾಖೆ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕೋಟಿ ರೂ. ವೆಚ್ಚದ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಶ್ರೀಹರ್ಷ ರೈತರ ಪ್ರಶ್ನೆಗೆ ಉತ್ತರಿಸಿದರು. “ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಒಂದು ಹೆಕ್ಟೇರ್‌ನಲ್ಲಿ ನೆಟ್ಟಿರುವ ಗರಿಷ್ಠ 400 ಗಿಡಗಳಿಗೆ ಮೂರು ಹಂತದಲ್ಲಿ 100 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ. ಇಲ್ಲಿ ನೀಲಗಿರಿ, ಅಕೇಷಿಯಾ, ಸಿಲ್ವರ್ ಓಕ್, ರಬ್ಬರ್, ಸುಬಾಬುಲ್, ತೆಂಗು, ಅಡಿಕೆ, ಕಿತ್ತಳೆ ಇಂತಹ ಗಿಡಗಳು ಸದರಿ ಯೋಜನೆಗೆ ಅರ್ಹವಲ್ಲ. ನಮ್ಮ ಇಲಾಖೆಯಿಂದ ಪ್ರಸ್ತುತ ವರ್ಷ ಬೇಲ, ತೇಗ, ಶ್ರೀಗಂಧ, ಬೀಟೆ, ಸಂಪಿಗೆ, ಮುತ್ತುಗ, ಹೆಬ್ಬೇವು ಸೇರಿ 30 ಬಗೆಯ 15 ಸಾವಿರ ಸಸಿಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಮರಪಟ್ಟ ಯೋಜನೆಯಡಿ ರೈತರು ಮನೆ ಹಾಗೂ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಮರ ಬೆಳೆಸಬಹುದು. ಮರದಿಂದ ಬರುವ ಆದಾಯ ರೈತರಿಗೆ ಸೇರುತ್ತದೆ ಎಂದರು.
Related Articles
ಬೈಬ್ಯಾಕ್ ಒಪ್ಪಂದ ಮಾಡಿಕೊಂಡಲ್ಲಿ ಇನ್ನೂ ಲಾಭದಾಯಕ. ಶ್ರೀಗಂಧ ಮತ್ತು ತೇಗ ಈ ಭಾಗದಲ್ಲಿ ಉತ್ಕೃಷ್ಟವಾಗಿ ಬರುತ್ತದೆ. ಫಸಲು ಬರುವವರೆಗೆ ಕಾಯುವ ತಾಳ್ಮೆಬೇಕು ಎಂದರು.
Advertisement
ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ಆಗಿಂದಾಗ್ಗೆ ರೈತರ ಜತೆ ಸಭೆ ನಡೆಸುವ ಮೂಲಕ ಇಲಾಖೆ ಸೌಲಭ್ಯಗಳ ಬಗ್ಗೆ ರೈತರಿಗೆ ತಿಳಿಸಬೇಕು ಎಂದರು. ಸಭೆಯಲ್ಲಿ ರೈತ ಮುಖಂಡರಾದ ಆಲೂರು ಸಿದ್ದರಾಮಣ್ಣ, ಬಿ.ಒ. ಶಿವಕುಮಾರ್, ದಸ್ತಗೀರ್ ಸಾಬ್, ತಿಮ್ಮಾರೆಡ್ಡಿ, ವಿ.ಕಲ್ಪನಾ, ಹೊರಕೇರಪ್ಪ, ಎಂ.ಆರ್. ಪುಟ್ಟಸ್ವಾಮಿ, ಎಚ್.ಕೆ. ಓಬಣ್ಣ, ಲಕ್ಷ್ಮೀಕಾಂತ್,ಸಿದ್ದಪ್ಪ, ಅರಳೀಕೆರೆ ತಿಪ್ಪೇಸ್ವಾಮಿ ಇತರರಿದ್ದರು.