Advertisement

Hiriadka ಪಿಯು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ಹಾರುವುದಿದ್ದರೆ ಇದೇ ಬಾವಿಗೆ ಎಂದಿದ್ದ!

12:31 AM Aug 22, 2024 | Team Udayavani |

ಹಿರಿಯಡಕ: ಅತಿಯಾದ ಮೊಬೈಲ್‌ ಗೀಳು ಹೊಂದಿದ್ದ ಹಿರಿಯಡಕದ ವಿದ್ಯಾರ್ಥಿ ಪ್ರಥಮೇಶ್‌ ತನ್ನ ಆತ್ಮಹತ್ಯೆ ಕುರಿತಂತೆ ಮೊದಲೇ ನಿರ್ಧರಿಸಿದ್ದನೇ ಎಂಬ ಪ್ರಶ್ನೆ ಮೂಡಿದೆ.ಕೆಲವು ದಿನಗಳ ಹಿಂದೆಯೇ ಸಹಪಾಠಿಗಳ ಜತೆ, ನಾನು ಬಾವಿಗೆ ಹಾರುವುದಿದ್ದರೆ ಇದೇ ಬಾವಿಗೆ ಎಂದು ಹೇಳಿಕೊಂಡಿದ್ದ. ಆದರೆ ಇದನ್ನು ಗೆಳೆಯರು ತಮಾಷೆ ಎಂದು ಭಾವಿಸಿದ್ದರು.

Advertisement

ಶಾಲೆಯಿಂದ ಸುಮಾರು 300 ಮೀಟರ್‌ ದೂರದಲ್ಲಿರುವ ಈ ಜನವಾಸ ಇಲ್ಲದ ಮನೆ ಪರಿಸರದಲ್ಲಿ ತರಗತಿ ಇಲ್ಲದ ಸಮಯ
ದಲ್ಲಿ ಮಕ್ಕಳು ಒಟ್ಟುಗೂಡಿ ಹರಟೆ ಹೊಡೆಯುತ್ತಿದ್ದರು. ಇಂತಹ ಸಂದರ್ಭದಲ್ಲಿ ಪ್ರಥಮೇಶ್‌ ಅಲ್ಲಿದ್ದ ಬಾವಿಕಟ್ಟೆಯಲ್ಲಿ ಕುಳಿತುಕೊಂಡು ಗೆಳೆಯರಲ್ಲಿ ಮೇಲಿನಂತೆ ಹೇಳಿದ್ದ.

ಸೋಮವಾರ ಸಂಜೆ ಪ್ರಥಮೇಶ್‌ ಇದೇ ಬಾವಿಗೆ ಶಾಲಾ ಬ್ಯಾಗ್‌ ಸಹಿತ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಪರೀಕ್ಷೆ ಹಿನ್ನೆಲೆಯಲ್ಲಿ ಮನೆಯಲ್ಲಿ ಪೋಷಕರು ಮೊಬೈಲ್‌ ತೆಗೆದಿರಿಸಿದ್ದ ಬಳಿಕ ಈತ ಈ ಕೃತ್ಯ ಎಸಗಿದ್ದ. ಮೊಬೈಲ್‌ನಲ್ಲಿ ಆನ್‌ಲೈನ್‌ ಆಟವಾಡುತ್ತಿದ್ದ ಆತ ಅಪಾಯಕಾರಿ ಡೆತ್‌ಗೆಮ್‌ನ ವಿವಿಧ ಟಾಸ್ಕ್ ಗಳನ್ನು ದಾಟಿ ಅಂತಿಮ ಹಂತ ತಲುಪಿದ್ದ ಎಂದು ತಿಳಿದುಬಂದಿತ್ತು.

ಮಕ್ಕಳ ಮೇಲೆ ನಿಗಾ ಅಗತ್ಯ
ತರಗತಿಗಳಲ್ಲಿ ಮಕ್ಕಳು ಶಾಂತವಾಗಿ ರುತ್ತಾರೆ. ಅವರ ಯೋಚನೆಗಳು ಯಾವ ರೀತಿ ಇರುತ್ತವೆ ಎಂಬುದು ಶಿಕ್ಷಕರಿಗೆ ತಿಳಿಯುವುದಿಲ್ಲ. ತಮ್ಮ ಮಿತ್ರರೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅವರಿಗೂ ಅದನ್ನು ಹೇಗೆ ನಿಭಾಯಿಸಬೇಕು ಎಂಬ ಜ್ಞಾನ ಇರುವುದಿಲ್ಲ. ಶಾಲೆ, ಕಾಲೇಜುಗಳಲ್ಲಿ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಬಗ್ಗೆ ಅವರ ಪೋಷಕರನ್ನು ಸೇರಿಸಿಕೊಂಡು ಮಾಹಿತಿ ಕಾರ್ಯಾಗಾರ ಮಾಡುವ ಅನಿವಾರ್ಯ ಇದೆ ಎನ್ನುತ್ತಾರೆ ಸರಕಾರಿ ಶಾಲೆಯ ಶಿಕ್ಷಕಿಯೋರ್ವರು.

ಸೌಮ್ಯ ಸ್ವಭಾವದ ವಿದ್ಯಾರ್ಥಿ
ಆತ್ಮಹತ್ಯೆ ಮಾಡಿಕೊಂಡ ಪ್ರಥಮೇಶ್‌ ಸೌಮ್ಯ ಸ್ವಭಾವದ ವಿದ್ಯಾರ್ಥಿ. ಕಾಲೇಜಿನಲ್ಲಿ ಯಾವುದೇ ಕಿರಿಕಿರಿ ಮಾಡಿದವನಲ್ಲ. ಮನೆಯಲ್ಲಿಯೂ ಶಾಂತವಾಗಿರುತ್ತಿದ್ದ. ಯಾರೂ ಆತನಿಗೆ ಬೈಯುತ್ತಿರಲಿಲ್ಲ. ಆದರೂ ಇಂತಹ ದುರ್ಘ‌ಟನೆ ನಡೆದಿರುವುದು ಬೇಸರದ ಸಂಗತಿ. ಸ್ವಲ್ಪ ಗದರಿದರೂ ತುಂಬಾ ಖಿನ್ನತೆಗೆ ಒಳಗಾಗುತ್ತಿದ್ದ. ಆದ್ದರಿಂದ ಮನೆಯಲ್ಲೂ ಅವನಿಗೆ ಹೆಚ್ಚಾಗಿ ಏನೂ ಹೇಳುತ್ತಿರಲಿಲ್ಲ ಎನ್ನುತ್ತಾರೆ ಆತನ ನೆರೆಮನೆಯವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next