ಚಿಕ್ಕಮಗಳೂರು: ಡಿ.ಕೆ.ಶಿವಕುಮಾರ್ ಗೆ ಚಿಕ್ಕಮಗಳೂರಿನ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲ. ಚಿಕ್ಕಮಗಳೂರಿನಲ್ಲಿ ಹಿಂದುತ್ವ ಹಾಗೂ ಅಭಿವೃದ್ದಿಯೇ ಗೆಲ್ಲುವುದು. ಅವರು ತಮ್ಮ ಆಳ್ವಿಕೆಯಲ್ಲಿ ಏನು ಮಾಡಿದ್ದೇವೆ ಎಂದು ಮತ ಕೇಳುತ್ತಾರೆ? ಕಾಂಗ್ರೆಸಿಗರಿಗೆ ಇಲ್ಲಿ ಮತ ಕೇಳಲು ಮುಖವೇ ಇಲ್ಲ, ಮಾಡಿರುವ ಕೆಲಸವೂ ಇಲ್ಲ. ಅವರ ಕಾಲದಲ್ಲಿ ಇಂತದ್ದು ಮಾಡಿದ್ದೇವೆಂದು ನೈತಿಕತೆ ಇದ್ದರೆ ಮತ ಕೇಳಲಿ ಎಂದು ಶಾಸಕ ಸಿ.ಟಿ. ರವಿ ಸವಾಲೆಸೆದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನಮ್ಮ ಅಭಿವೃದ್ಧಿ ಹಾಗೂ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ. ಚಿಕ್ಕಮಗಳೂರಿಗರಿಗೆ ಸಿ.ಟಿ. ರವಿ ಏನೆಂದು ಗೊತ್ತು, ನಾನು ಈ ಮಣ್ಣಿನ ಮಗ. ಅವರು (ಡಿಕೆಶಿ) ಸವಾಲು ಆಗುವುದು ನನಗಲ್ಲ, ಚಿಕ್ಕಮಗಳೂರಿನ ಜನಕ್ಕೆ, ಜನ ಅವರ ಸವಾಲನ್ನು ಸ್ವೀಕರಿಸುತ್ತಾರೆ ಎಂದರು.
ಇದನ್ನೂ ಓದಿ:ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಪತ್ತೆಯಾಯ್ತು ಕಾಂಡೋಮ್, ಮದ್ಯದ ಬಾಟಲಿ…
ಡಿಕೆ ಶಿವಕುಮಾರ್ ಅವರಿಗಿರುವ ಆತಂಕವನ್ನು ಹೊರಗಾಕಿದ್ದಾರೆ. ದೇ ಆರ್ ಆಲ್ ಮೈ ಬ್ರದರ್ಸ್ ಅಂತ ಅವರೇ ಹೇಳಿದ್ದು ಡಿಜೆ-ಕೆಜೆ ಹಳ್ಳಿಯಲ್ಲಿ ಬೆಂಕಿ ಹಾಕಿದವರಿಗೆ ಬೆಂಬಲ ನೀಡಿದ್ದು ಯಾರು? ತನ್ನದೇ ಪಕ್ಷದ ದಲಿತ ಶಾಸಕನಿಗೆ ರಕ್ಷಣೆ ನೀಡದೆ ರಾಜಕಾರಣ ಮಾಡಿದ್ಯಾರು? ಅವರು ಏನಾದರೂ ಮಾಡಿ ಸಿಎಂ ಆಗಬೇಕೆಂದು ಹೊರಟಿದ್ದಾರೆ. ನನ್ನ ಪ್ರಕಾರ ಈ ಬಾರಿ ಅದು ಆಗುವುದಿಲ್ಲ. ಅವರು ಸಿಎಂ ಆಗಲು ಸಾಧ್ಯವೇ ಇಲ್ಲ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದು ಸಿ.ಟಿ ರವಿ ಹೇಳಿದರು.