Advertisement

ಜ.18, 19ರಂದು ಹಿಂದೂರಾಷ್ಟ್ರ ಅಧಿವೇಶನ

10:55 PM Jan 15, 2020 | Team Udayavani |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧದ ನೆಪದಲ್ಲಿ ನಡೆಯುತ್ತಿರುವ ದೇಶ ವಿರೋಧಿ ಕೃತ್ಯಗಳು, ಅಕ್ರಮ ಬಾಂಗ್ಲಾ ನುಸುಳುಕೋರರ ಸಮಸ್ಯೆ, ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆಯ ಷಡ್ಯಂತ್ರ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಧರ್ಮಶಿಕ್ಷಣ ನೀಡಲು ಹಿಂದೂ ಜನಜಾಗೃತಿ ಸಮಿತಿ ಜ.18 ಮತ್ತು 19ರಂದು ಹಿಂದೂರಾಷ್ಟ್ರ ಅಧಿವೇಶನ ಹಮ್ಮಿಕೊಂಡಿದೆ.

Advertisement

ಮಾಗಡಿ ಮುಖ್ಯ ರಸ್ತೆಯ ಕಾಮಾಕ್ಷಿಪಾಳ್ಯದ ಧನಂಜಯ ಪ್ಯಾಲೇಸ್‌ನಲ್ಲಿ ಜ.18ರ ಬೆಳಗ್ಗೆ ಅಧಿವೇಶನ ಉದ್ಘಾಟನೆಯಾ ಗಲಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್‌ ಭಯೋತ್ಪಾದನೆ, ಹಿಂದೂ ಧರ್ಮದ ಅಪಮಾನ ಮಾಡುವ ಷಡ್ಯಂತ್ರ, ದೇವಸ್ಥಾನಗಳ ಸರ್ಕಾರೀಕರಣ, ಮತಾಂತರ, ಲವ್‌ ಜಿಹಾದ್‌, ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದು ಮೊದಲಾದ ಸಮಸ್ಯೆಗಳ ಮೇಲೆ ಕಾನೂನಾತ್ಮಕ ಮತ್ತು ಸಂಘಟನಾತ್ಮಕ ಪರಿಹಾರ ಕಂಡುಕೊಳ್ಳಲು ಈ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದೂ ಶಿಕ್ಷಣ ಮತ್ತು ರಾಷ್ಟ್ರದ ಬಗ್ಗೆ ಜನಜಾಗೃತಿ ಮಾಡಲು ದಕ್ಷಿಣ ಕರ್ನಾಟಕ 12 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ 100 ಕ್ಕೂ ಅಧಿಕ ಹಿಂದೂ ಸಂಘಟನೆಗಳ 500 ಕ್ಕೂ ಅಧಿಕ ಹಿಂದೂ ಸಂಘಟನೆಯ ಪದಾಧಿಕಾರಿಗಳು, 100 ಕ್ಕೂ ಅಧಿಕ ರಾಷ್ಟ್ರ ಪ್ರೇಮಿ ವಕೀಲರ, ಸಾಮಾಜಿಕ ಹೋರಾಟಗಾರರು ಮತ್ತು ಹಿಂದೂ ಧಾರ್ಮಿಕ ಮುಖಂಡರು, ಉದ್ಯಮಿಗಳು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಮಾಹಿತಿಗೆ ಮೊ. 7204082609 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next