Advertisement

ಭಾರತದಲ್ಲಿ ಹಿಂದೂಗಳ ಸಂಖ್ಯೆ ಶೇ. 8 ಕುಸಿತ, ಮುಸ್ಲಿಂ ಶೇ.43 ಏರಿಕೆ

12:35 AM May 09, 2024 | Team Udayavani |

ಹೊಸದಿಲ್ಲಿ: 1950ರಿಂದ 2015ರ ಅವಧಿಯಲ್ಲಿ ಭಾರತದಲ್ಲಿ ಬಹು ಸಂಖ್ಯಾಕರಾಗಿರುವ ಹಿಂದೂಜನಸಂಖ್ಯೆಯಲ್ಲಿ ಶೇ.7.8 ರಷ್ಟು ಕುಸಿತವಾಗಿದ್ದರೆ, ಅಲ್ಪ ಸಂಖ್ಯಾಕರ ಜನಸಂಖ್ಯೆ ಹೆಚ್ಚಳವಾಗಿದೆ. ಈ ಬಗ್ಗೆ ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿ (ಇಎಸಿ-ಪಿಎಂ)ಯ ಅಧ್ಯಯನ ವರದಿ ತಿಳಿಸಿದೆ.

Advertisement

ಭಾರತದಲ್ಲಿ ಬಹುಸಂಖ್ಯಾಕರ ಜನಸಂಖ್ಯೆಯಲ್ಲಿ ಕುಸಿತ ವಾಗಿದ್ದರೆ, ಇದಕ್ಕೆ ವಿರುದ್ಧವಾಗಿ ನೆರೆಯ ಬಾಂಗ್ಲಾದೇಶ ಮತ್ತು ಪಾಕಿಸ್ಥಾನದಲ್ಲಿರುವ ಬಹುಸಂಖ್ಯಾಕರ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 1950-2015ರ ಅವಧಿಯಲ್ಲಿ ಭಾರತದ ಮುಸ್ಲಿಮರ ಪಾಲು ಶೇ.43.15, ಕ್ರೈಸ್ತರು 5.38, ಸಿಕ್ಖರ ಪಾಲು ಶೇ.6.58 ರಷ್ಟು ಏರಿಕೆಯಾಗಿದೆ. ಬೌದ್ಧರ ಸಂಖ್ಯೆಯಲ್ಲಿ ತುಸು ಏರಿಕೆಯಾದ್ದರೆ, ಜೈನ ಮತ್ತು ಪಾರ್ಸಿ ಸಂಖ್ಯೆ ಕುಸಿತವಾಗಿದೆ.

ಭಾರತದ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು 1950ರಲ್ಲಿ ಶೇ.84ರಿಂದ 2015ರಲ್ಲಿ ಶೇ.78 ಕ್ಕೆ ಕಡಿಮೆಯಾಗಿದೆ, ಆದರೆ ಮುಸ್ಲಿಮರ ಸಂಖ್ಯೆ ಅದೇ ಅವಧಿಯಲ್ಲಿ (65 ವರ್ಷಗಳಲ್ಲಿ) ಶೇ.9.84ರಿಂದ ಶೇ.14.09 ಏರಿಕೆ ಕಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಜಾಗತಿಕ ಪ್ರವೃತ್ತಿಯನ್ನು ಪರಿಗಣಿಸು ವುದಾದರೆ, ವಿಶ್ವದ 167 ರಾಷ್ಟ್ರ ಗಳಲ್ಲೂ ಬಹುಸಂಖ್ಯಾಕರ ಜನ ಸಂಖ್ಯೆಯಲ್ಲಿ ಕುಸಿತವಾಗಿದೆ ಎಂದು ವರದಿ ತಿಳಿಸಿದೆ.

ಸಿಎಎಗೆ ಬಲ
ನೀಡಿದ ವರದಿ?
ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿಯ ಅಧ್ಯಯನ ವರದಿಯ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಲ ನೀಡಲಿದೆ. ಯಾಕೆಂದರೆ ನೆರೆಯ ರಾಷ್ಟ್ರಗಳಲ್ಲಿ ಬಹುಸಂಖ್ಯಾಕರ ಜನಸಂಖ್ಯೆಯ ಪಾಲು ಹೆಚ್ಚುತ್ತಿರುವ ಪರಿಣಾಮ, ಅಲ್ಪಸಂಖ್ಯಾಕರಾದ ಹಿಂದೂಗಳು, ಸಿಕ್ಖರು ಮತ್ತು ಕ್ರೈಸ್ತರು ಆಶ್ರಯಕ್ಕಾಗಿ ಭಾರತಕ್ಕೆ ವಲಸೆ ಬರುತ್ತಿದ್ದಾರೆ. ಅವರಿಗೆ ತ್ವರಿತವಾಗಿ ಪೌರತ್ವ ನೀಡುವುದು ಅತ್ಯಗತ್ಯವಾಗಿದೆ. 2019ರಲ್ಲಿ ಜಾರಿಗೆ ತಂದ ಸಿಎಎಗೆ ಎರಡು ತಿಂಗಳ ಹಿಂದೆಯಷ್ಟೇ ಮಾರ್ಗಸೂಚಿ ಪ್ರಕಟಿಸಲಾಗಿದೆ.

ಪ್ರಮುಖ ಅಂಶಗಳೇನು?
-ಭಾರತದಲ್ಲಿ ಹಿಂದೂಗಳ ಪ್ರಮಾಣ ಶೇ.7.8 ರಷ್ಟು ಕುಸಿತ
-1950ರಿಂದ 2015ರ ಅವಧಿಯಲ್ಲಿ ಮುಸ್ಲಿಮರ ಪ್ರಮಾಣ ಶೇ.43 ಏರಿಕೆ
-123 ದೇಶಗಳಲ್ಲಿ ಬಹುಸಂಖ್ಯಾಕರ ಸಂಖ್ಯೆ ಇಳಿಕೆ; ಅಲ್ಪಸಂಖ್ಯಾಕರ ವೃದ್ಧಿ
-ಜಗತ್ತಿನ 44 ರಾಷ್ಟ್ರಗಳಲ್ಲಿ ಮಾತ್ರ ಬಹುಸಂಖ್ಯಾಕರ ಸಂಖ್ಯೆ ಹೆಚ್ಚಳ
-ಬಾಂಗ್ಲಾದಲ್ಲಿ ಶೇ.18.5, ಪಾಕಿಸ್ಥಾನದಲ್ಲಿ ಮುಸ್ಲಿಮರ ಸಂಖ್ಯೆ ಶೇ.3.7ರಷ್ಟು ವೃದ್ಧಿ

Advertisement

ಅಲ್ಪಸಂಖ್ಯಾಕರ
ಏರಿಕೆಗೆ ಏನು ಕಾರಣ?
-ಸರಕಾರ ಜಾರಿಗೆ ತಂದ ನೀತಿಗಳು
-ಕೈಗೊಳ್ಳಲಾದ ರಾಜಕೀಯ ನಿರ್ಧಾರಗಳು
-ವೈವಿಧ್ಯತೆಯನ್ನು ಪೋಷಿಸುವಂಥ ವಾತಾವರಣ ಸೃಷ್ಟಿ
-ಅಲ್ಪಸಂಖ್ಯಾಕರ ಉತ್ತಮ ಬದುಕಿಗೆ ನೀತಿಗಳು ಜಾರಿ ಮತ್ತು ಸಂಸ್ಥೆಗಳ ರಚನೆ

Advertisement

Udayavani is now on Telegram. Click here to join our channel and stay updated with the latest news.

Next