Advertisement

ಮುಸ್ಲಿಂ ಬಾಂಧವರಿಗೆ ಸಿಹಿ ಹಂಚಿ ಸೌಹಾರ್ದತೆ ಮೆರೆದ ಹಿಂದೂ ಯುವಕರು

09:46 AM Nov 11, 2019 | sudhir |

ಸುಬ್ರಹ್ಮಣ್ಯ ; ಸುಪ್ರೀಂ ಕೋರ್ಟ್ ಆಯೋಧ್ಯಾ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ನೀಡಿದ ಐತಿಹಾಸಿಕ ತೀರ್ಪನ್ನು ದೇಶದ ಎಲ್ಲ ಧರ್ಮಮ ಜಾತಿ. ಮತ ಪಂಥಕ್ಕೆ ಸೇರಿದ ಜನ ಸ್ವಾಗತಿಸಿದರೆ ಇತ್ತ ಪಂಜದ ಯುವಕರು ವಿಶೇಷವಾಗಿ ಮುಸ್ಲಿಂ ಬಾಂಧವರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊಳೆಂಜ ಪಂಜ ಮಾರ್ಗವಾಗಿ ನೆಲ್ಲಿಕಟ್ಟೆ ತನಕ ಮೆರವಣಿಗೆ ನಡೆಯುತ್ತಿದ್ದ ವೇಳೆ ಪಂಜದಲ್ಲಿ ಮುಸ್ಲಿಂ ಬಾಂಧವರಿಗೆ ಸಿಹಿತಿಂಡಿ ಹಂಚಿ ಭಾವೈಕ್ಯತೆ ಮೆರೆದಿದ್ದಾರೆ.

Advertisement

ಬಹಳ ಸಮಯದಿಂದ ಇತ್ಯರ್ಥವಾಗದೆ ರಾಜಕೀಯ ಪಕ್ಷಗಳ ಚುನಾವಣಾ ದಾಳವಾಗಿ ಉಪಯೋಗವಾಗುತ್ತಿದ್ದ ಅಯೋಧ್ಯ ವಿಚಾರವೂ ಸೌಹಾರ್ದಯುತವಾಗಿ ಮುಗಿದು ಎರಡು ಧರ್ಮದವರು ಸಹ ಶಾಂತಿ ಕಾಪಾಡಿಕೊಂಡು ಬಂದಂತಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ ಪಂಜದ ಸಹೃದಯಿ ಹಿಂದೂ ಸಹೋದರರು ವಿಶೇಷ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಿ ಆದರ್ಶಪ್ರಾಯರಾದರು.

ಈ ಸಂದರ್ಭ ಆಶಿತ್ ಕಲ್ಲಾಜೆ, ನಿಧೀಶ್ ಕಕ್ಯಾನ, ರಮೇಶ್ ಪುತ್ಯ ಪಂಜ ಬದ್ರಿಯಾ ಜುಮ್ಮಾ ಮಸೀದಿಯ ಗುರುಗಳಾದ ಗುರು ಝಿಯಾದ್ ಸಾಕಪಿ. ಅಧ್ಯಕ್ಷ ಉಮರ್ ಸಿಗೆಯಾಡಿ, ಅಬ್ಬಾಸ್ ಮುಸ್ಲಿಯಾರ್, ರಫೀಕ್ ಕಬಕ ಮತ್ತು ಸಿದ್ಧೀಕ್ ಪೊಳೆಂಜ, ಚಂದ್ರಶೇಖರ ಕರಿಮಜಲು ದಯಾನಂದ ಎಣ್ಮೂರು, ರೋಹಿತ್ ಚೀಮುಳ್ಳು, ಉದಯ ಪಲ್ಲೋಡಿ, ಭರತ್ ಪಂಜ, ವಸಂತ ಅಡ್ಕ, ರಂಜಿತ್ ಪಂಜ, ಕೀರ್ತನ್ ಪಲ್ಲೋಡಿ ಹಾಗೂ ನೂರಾರು ಮಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next