Advertisement

ಹೆತ್ತವರ ಅಪಸ್ವರ ಲೆಕ್ಕಿಸದೇ ಹಿಂದೂ ಯುವಕ, ಮುಸ್ಲಿಂ ಯುವತಿ ವಿವಾಹ

04:11 PM May 17, 2022 | Team Udayavani |

ಕನಕಗಿರಿ: ಕಳೆದ ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದ ಅನ್ಯ ಧರ್ಮದ ಇಬ್ಬರು ಪ್ರೇಮಿಗಳು ವಿರೋಧದ ನಡುವೆಯೂ ವಿವಾಹವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

Advertisement

ಸ್ಥಳೀಯ ಹಿಂದೂ ಸಮಜದ ಯುವಕ ಕನಕರೆಡ್ಡಿ ಹಾಗೂ ಮುಸ್ಲಿಂ ಸಮುದಾಯದ ಯುವತಿ ದಿಲ್‌ ಶಾದ್‌ ಕೆಲ ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಮೇ 10ರಂದು ಇಬ್ಬರು ದೇವಸ್ಥಾನವೊಂದರಲ್ಲಿ ಮದುವೆ ಆಗಿರುವ ಕುರಿತ ಸುದ್ದಿ ಸ್ಥಳೀಯ ಯುವಕರ ವ್ಯಾಟ್ಸ್‌ಆ್ಯಪ್‌ ಸ್ಟೇಟಸ್‌ಗಳಲ್ಲಿ ಹರಿದಾಡುತ್ತಿತ್ತು. ಅದನ್ನು ಅರಿತ ಯುವತಿಯ ಪಾಲಕರು ಹಾಗೂ ಸಮುದಾಯದ ಜನರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲು ಮಾಡುವಂತೆ ಒತ್ತಾಯಿಸಿದ್ದರು. ಶನಿವಾರ ತಡರಾತ್ರಿ ಯುವಕ, ಯುವತಿ ಠಾಣೆಗೆ ಆಗಮಿಸಿದ್ದರು.

ಈ ವಿಷಯ ಅರಿತ ಎರಡು ಸಮಾಜದ ಕೆಲ ಯುವಕರು ಹಾಗೂ ಹಿರಿಯರು ಠಾಣೆ ಮುಂದೆ ಜಮಾಯಿಸಿದ್ದರು. ಪೋಷಕರ ಅಳಲು: ಯುವತಿಯ ಕೊನೆಯ ನಿರ್ಧಾರಕ್ಕೆ ಕಾದು ಕುಳಿತ್ತಿದ್ದ ಪೊಲೀಸರು ಕೊನೆಯದಾಗಿ ಯುವತಿಯ ಮನವೊಲಿಸಲು ಪ್ರತ್ಯೇಕ ಕೊಠಡಿಯಲ್ಲಿ ಪೊಲೀಸರ ಸುರಕ್ಷತೆಯಲ್ಲಿ ಪಾಲಕರಿಗೆ ಕೆಲ ಗಂಟೆಗಳ ಕಾಲ ಮಾತನಾಡಲು ಅವಕಾಶ ನೀಡಿದರು.

ಹೆತ್ತವರು ಹಾಗೂ ಸಮುದಾಯದ ಪ್ರಮುಖರು ಸಾಕಷ್ಟು ಸಮಯ ಚರ್ಚಿಸಿ, ಅತ್ತು ಕಣ್ಣೀರು ಸುರಿಸಿದರೂ ಯುವತಿ ಮಾತ್ರ ಪ್ರೀತಿಸಿದವನನ್ನೇ ವಿವಾಹವಾಗುವೆ ಎನ್ನುವ ಮಾತೇ ಆಡಿದಳು. ಮಧ್ಯರಾತ್ರಿ 2 ಗಂಟೆವರೆಗೆ ಮಾತುಕತೆ ನಡೆಸಲಾಯಿತು. ಹಾಗೆಯೇ ಮಹಿಳಾ ಸಾಂತ್ವನ ಕೇಂದ್ರಕ್ಕೆ ಯುವಕ- ಯುವತಿಯನ್ನು ಕರೆದೊಯ್ಯಲಾಯಿತು. ರವಿವಾರ ಬೆಳಗ್ಗೆ ತೋಟವೊಂದರಲ್ಲಿ ಸ್ಥಳಾಂತರಿಸಲಾಯಿತು.

Advertisement

ಅಲ್ಲಿಯು ಎರಡು ಸಮಾಜದ ಜನರು ಹೊರಟಾಗ ಅಲ್ಲಿಂದ ತಾವರಗೇರಾ ಪೊಲೀಸ್‌ ಠಾಣೆಗೆ ಕರೆದೊಯ್ದರು. ಕೊನೆಗೆ ಯುವತಿಯ ಜತೆ ಮಾತನಾಡಲು ಪಾಲಕರಿಗೆ ಅವಕಾಶ ನೀಡಲಾಗಿತ್ತು. ಆದರೆ ಪಾಲಕರ ಮನವೊಲಿಕೆ ಫಲಕಾರಿಯಾಗದೇ ಯುವತಿ ಯುವಕನ ಮನೆಗೆ ಹೋದಳು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next