Advertisement

25 ವಿಭಾಗಗಳಲ್ಲಿ  ಅನಾವರಣಗೊಳ್ಳಲಿದೆ ಹಿಂದೂ ವೈಭವ

08:21 AM Nov 23, 2017 | |

ಉಡುಪಿ: ಸಹಸ್ರಾರು ಸಾಧು-ಸಂತರ ಅಪೂರ್ವ ಸಂಗಮ ಧರ್ಮ ಸಂಸದ್‌ಗೆ ಸಾಕ್ಷಿಯಾಗಲಿರುವ ರಜತಪುರ ಉಡುಪಿಯಲ್ಲಿ ಹಿಂದೂ ಧರ್ಮದ ವಿವಿಧ ವೈಭವ ಆಯಾಮಗಳು ತೆರೆದುಕೊಳ್ಳುತ್ತಿವೆ. 

Advertisement

ಸರ್ವವಂದ್ಯ ಓಂಕಾರದಿಂದ, ಅರ್ಥಾತ್‌ ಜ್ಞಾನದಿಂದ ಆರಂಭವಾಗಿ ಸಮಕಾಲೀನ ವಿಷಯಗಳ ವರೆಗಿನ ಸನಾತನ ಹಿಂದೂ ಧರ್ಮದ ವೈಭವ ವನ್ನು 25 ವಿಭಾಗಗಳಲ್ಲಿ ಕಲಾಕೃತಿ, ವರ್ಣಚಿತ್ರಗಳು, ಮಾದರಿ, ಮಾಹಿತಿ ಫ‌ಲಗಳು, ವಸ್ತು ಪ್ರದರ್ಶನ ಇತ್ಯಾದಿ ಗಳ ಮೂಲಕ ಪ್ರದರ್ಶನ ನಡೆಯ ಲಿದೆ. ಈ ನಿಟ್ಟಿನಲ್ಲಿ ಅಂತಿಮ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಓಂಕಾರ  ರೂಪಿ ಜ್ಞಾನ ವನ್ನು ಋಷಿಗಳು ತಪಸ್ಸಿ ನಿಂದ ಸಿದ್ಧಿಸಿಕೊಂಡಿದ್ದು ಅಲ್ಲಿಂದ ಜ್ಞಾನ ಸಾಧು, ಸಂತರಿಂದ, ಸಂಘಟನೆ ಗಳಿಂದ ಮುಂದುವರಿದು ಹಂತ ಹಂತ ವಾಗಿ 25 ವಿಭಾಗ ಗಳಲ್ಲಿ ಪ್ರದರ್ಶನ ಗೊಳ್ಳ ಲಿದೆ. ಋಷಿ ವೈಭವ, ಸಾಮ್ರಾಜ್ಯ ವೈಭವ, ಸಂತ ವೈಭವ, ಗ್ರಂಥ ವೈಭವ, ಕ್ಷೇತ್ರ ವೈಭವ‌-ಉಡುಪಿ ಕ್ಷೇತ್ರ ವೈಭವ ವಿಶೇಷ, ಭಾರತ ವೈಭವ, ವಿಶ್ವ ವೈಭವ, ಮಂಡಲ ವೈಭವ, ಜೋತಿಷ ವೈಭವ, ಹೋಮ- ಹವನ ವೈಭವ, ಸಂಗೀತ ವೈಭವ, ಹೋರಾಟ ವೈಭವ, ದೈವ ವೈಭವ ಇವು ಪ್ರದರ್ಶನ ಗೊಳ್ಳಲಿರುವ ವೈಭವಗಳಲ್ಲಿ ಪ್ರಮುಖ ವಾದುವು.

ಸಂತ ವೈಭವ
ಸಂತ ವೈಭವ ವಿಭಾಗದಲ್ಲಿ ಸಂತರ ಮಾಹಿತಿಗಳುಳ್ಳ ಫ‌ಲಕಗಳು ಸಚಿತ್ರ ವಾಗಿ ಮೂಡಿಬರಲಿವೆ. ಸನಾತನ ಸಂಸ್ಕೃತಿಯ ಕುರಿತ ಕಲಾಕೃತಿ, ಮಾದರಿ ಗಳು ಮನಸೂರೆಗೊಳ್ಳಲಿವೆ. ಹೋರಾಟ ವೈಭವದಲ್ಲಿ ಧರ್ಮ ರಕ್ಷಣೆಯ ಕುರಿತ ಮಾಹಿತಿ ಬಿತ್ತರ ವಾಗಲಿದೆ. 

ಹಿಮಾಲಯ, ಶ್ರೀರಾಮನ ಆಸ್ಥಾನ, ಶಿವಾಜಿಯ ಶೌರ್ಯ ಸ್ವಚ್ಛಂದವಾಗಿ ಹಬ್ಬಿರುವ ತಪೋ ಭೂಮಿ ಹಿಮಗಿರಿಯ ಮಾದರಿ ವೈಭವ ಲೋಕಕ್ಕೆ ಪ್ರೇಕ್ಷಕರನ್ನು ಸ್ವಾಗ ತಿಸು ತ್ತದೆ. ಶ್ರೀರಾಮನ ಆಸ್ಥಾನದ ಸೊಗಸು, ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿಯ ಶೌರ್ಯಾ ದರ್ಶಗಳನ್ನು ಅಭಿವ್ಯಕ್ತಿಸುವ ಮಾದರಿ ಗಳು ಮನ ಸೂರೆ ಗೊಳ್ಳಲಿವೆ. ಸುರಂಗದ ಮಾದರಿಯಂತೂ ಪ್ರೇಕ್ಷಕ ರಿಗೆ ಸುರಂಗದಲ್ಲೇ ನಡೆದ ಅನುಭವ ನೀಡಲಿದೆ. 

ತುಳುನಾಡಿನ ದೈವಗಳ ವೈಭವ
ಪರಶುರಾಮ ಸೃಷ್ಟಿ ತುಳುನಾಡಿನ ವೈಭವವೂ ಅನಾವರಣಗೊಳ್ಳಲಿದ್ದು, ಈ ಪುಣ್ಯಭೂಮಿಯಲ್ಲಿ ನೆಲೆ ಯಾದ ದೈವಗಳ ಕುರಿತ ಕಲಾಕೃತಿ ಗಳೂ ಪ್ರೇಕ್ಷಕರ ಗಮನ ಸೆಳೆಯ ಲಿವೆ. ದೇಶ ದೆಲ್ಲೆಡೆ ಯಿಂದ ಆಗಮಿಸುವವರಿಗೆ ತುಳು ನಾಡಿನ ಸಂಸ್ಕೃತಿಯ ಪರಿಚಯ ಮಾಡಿ ಸುವುದು ಶ್ಲಾಘನಾರ್ಹವಾಗಿದೆ. 

Advertisement

ನ. 23 ಸಂಜೆ 4ಕ್ಕೆ ಅನಾವರಣ ಗೊಳ್ಳಲಿರುವ ಈ ಅದ್ಭುತ ಲೋಕ ನ. 24, 25, 26ರಂದು ಪ್ರದರ್ಶನಗೊಳ್ಳಲಿದೆ.

ಅಶ್ವಿ‌ನ್‌ ಲಾರೆನ್ಸ್‌ ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.

Next