Advertisement

ಈದ್ಗಾ ಮೈದಾನಕ್ಕೆ 1.5 ಕೋಟಿ ರೂ. ಮೌಲ್ಯದ ಭೂಮಿ ನೀಡಿದ ಹಿಂದೂ ಸಹೋದರಿಯರು

03:28 PM May 05, 2022 | Team Udayavani |

ಕಾಶಿಪುರ : ದೇಶದ ವಿವಿಧ ಭಾಗಗಳಿಂದ ಕೋಮು ಉದ್ವಿಗ್ನತೆಯ ವರದಿಗಳು ಬರುತ್ತಿರುವ ಸಮಯದಲ್ಲಿ ಉತ್ತರಾಖಂಡ ದ ಹಿಂದೂ ಸಹೋದರಿಯರ ಧಾರ್ಮಿಕ ಸಾಮರಸ್ಯ ಮತ್ತು ತ್ಯಾಗದ ಮನೋಭಾವವು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

Advertisement

ತಮ್ಮ ದಿವಂಗತ ತಂದೆಯ ಕೊನೆಯ ಆಸೆಯನ್ನು ಪೂರೈಸುವ ಸಲುವಾಗಿ, ಇಬ್ಬರು ಹಿಂದೂ ಸಹೋದರಿಯರು ಇಲ್ಲಿನ ಈದ್ಗಾ ಮೈದಾನಕ್ಕೆ 1.5 ಕೋಟಿಗೂ ಹೆಚ್ಚು ಮೌಲ್ಯದ ಜಮೀನನ್ನು ದಾನ ನೀಡಿದ್ದಾರೆ. ಇದು ಅಲ್ಲಿನ ಮುಸ್ಲಿಮರನ್ನು ಆಳವಾಗಿ ಸ್ಪರ್ಶಿಸಿದ್ದು, ಅವರು ಈದ್‌ನಲ್ಲಿ ಮೃತ ವ್ಯಕ್ತಿಗಾಗಿ ಪ್ರಾರ್ಥನೆ ಸಲ್ಲಿಸಿರುವುದು ವಿಶೇಷವಾಗಿದೆ.

ಕಾಶಿಪುರವು ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದ್ದು, 20 ವರ್ಷಗಳ ಹಿಂದೆ ನಿಧನರಾದ ಬ್ರಜನಂದನ್ ಪ್ರಸಾದ್ ರಸ್ತೋಗಿ ಅವರು ತಮ್ಮ ಕೃಷಿ ಭೂಮಿಯನ್ನು ಈದ್ಗಾ ವಿಸ್ತರಣೆಗಾಗಿ ದಾನ ಮಾಡಲು ಬಯಸುವುದಾಗಿ ತಮ್ಮ ನಿಕಟ ಸಂಬಂಧಿಗಳಿಗೆ ತಿಳಿಸಿದ್ದಾರೆ. ಅವರು ತಮ್ಮ ಕೊನೆಯ ಆಸೆಯನ್ನು ತಮ್ಮ ಮಕ್ಕಳೊಂದಿಗೆ ಹಂಚಿಕೊಳ್ಳುವ ಮೊದಲು, ಅವರು ಜನವರಿ 2003 ರಲ್ಲಿ ನಿಧನ ಹೊಂದಿದ್ದರು.

ದೆಹಲಿ ಮತ್ತು ಮೀರತ್‌ನಲ್ಲಿ ವಾಸಿಸುತ್ತಿರುವ ಅವರ ಇಬ್ಬರು ಪುತ್ರಿಯರಾದ ಸರೋಜ್ ಮತ್ತು ಅನಿತಾ ಅವರು ಇತ್ತೀಚೆಗೆ ಸಂಬಂಧಿಕರ ಮೂಲಕ ತಮ್ಮ ತಂದೆಯ ಕೊನೆಯ ಆಸೆಯನ್ನು ತಿಳಿದಿದ್ದಾರೆ.ತತ್ ಕ್ಷಣ ಕಾಶಿಪುರದಲ್ಲಿ ವಾಸಿಸುವ ಅವರ ಸಹೋದರ ರಾಕೇಶ್ ರಸ್ತೋಗಿ ಅವರನ್ನು ಸಂಪರ್ಕಿಸಿದರು ಮತ್ತು ಅವರ ಒಪ್ಪಿಗೆಯನ್ನು ಪಡೆದು ಭೂಮಿಯನ್ನು ನೀಡಲು ಒಪ್ಪಿಕೊಂಡರು.

“ಇಬ್ಬರು ಸಹೋದರಿಯರು ಕೋಮು ಐಕ್ಯತೆಗೆ ಜೀವಂತ ಉದಾಹರಣೆಯಾಗಿದ್ದಾರೆ. ಈದ್ಗಾ ಸಮಿತಿಯು ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ. ಇಬ್ಬರು ಸಹೋದರಿಯರನ್ನು ಅವರು ಮಾಡಿದ ದಾನಕ್ಕಾಗಿ ಶೀಘ್ರದಲ್ಲೇ ಗೌರವಿಸಲಾಗುವುದು ಎಂದು ಈದ್ಗಾ ಸಮಿತಿಯ ಹಸಿನ್ ಖಾನ್ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next