Advertisement

ವಿಹಿಂಪ, ಬಜರಂಗ ದಳದಿಂದ ಬಡ ಕುಟುಂಬಕ್ಕೆ ಮನೆ ನಿರ್ಮಾಣ

02:35 AM Jul 10, 2018 | Karthik A |

ಬಂಟ್ವಾಳ: ಕಲ್ಲಡ್ಕ ವಲಯ ವಿಹಿಂಪ ಮತ್ತು ಬಜರಂಗದಳ ಘಟಕವು ಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ಪಳನೀರು ಗುಡ್ಡದಲ್ಲಿ ಗುಡಿಸಲಿನಲ್ಲಿ ವಾಸ್ತವ್ಯವಿದ್ದ ಬಡ ಕುಟುಂಬಕ್ಕೆ ನೂತನ ಮನೆಯೊಂದನ್ನು ನಿರ್ಮಿಸಿ ಕೊಡುವ ಆದರ್ಶ ಕೆಲಸವನ್ನು ಮಾಡಿದ್ದು, ಇಲ್ಲಿನ ಲಕ್ಷ್ಮೀ ಆಚಾರ್ಯ ಅವರಿಗೆ ಸಂಪೂರ್ಣಗೊಂಡ ಈ ಮನೆಯನ್ನು ಜು. 16ರಂದು ಹಸ್ತಾಂತರಕ್ಕೆ ದಿನ ನಿಗದಿಯಾಗಿದೆ. RSS ಪ್ರಮುಖರಾದ ಕಲ್ಲಡ್ಕ ಡಾ| ಪ್ರಭಾಕರ ಭಟ್‌, ಮತ್ತು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಇವರ ಕೈಯಲ್ಲಿ ಕೀ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದು ಇಲ್ಲಿನ ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ. ಲಕ್ಷ್ಮೀ ಆಚಾರ್ಯ ಅವರು ಬಡ ಕುಟುಂಬದ ಮಹಿಳೆ. ಇವರ ಪತಿ ಅಸೌಖ್ಯದಿಂದ ಮರಣ ಹೊಂದಿದ್ದಾರೆ. ಪುತ್ರ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಹಾಗಾಗಿ ಪುತ್ರಿಯ ಜತೆ ವಾಸವಾಗಿದ್ದಾರೆ. ಮಾನಸಿಕವಾಗಿ ನೊಂದ ಕುಟುಂಬಕ್ಕೆ ಸಾಮಾಜಿಕ ಸಾಂತ್ವನದ ಕೆಲಸವನ್ನು ಈ ಮೂಲಕ ಸಂಘಟನೆಯು ಮಾಡುತ್ತಿದೆ.

Advertisement

ಸುಮಾರು 50 ಸೆಂಟ್ಸ್‌ ಜಾಗವಿದ್ದರೂ ಅದಕ್ಕೆ ದಾಖಲೆ ಇಲ್ಲದ ಕಾರಣ ಸರಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿ ಮನೆ ಕಟ್ಟಲು ಸಾಧ್ಯವಾಗಿಲ್ಲ. ಇವರ ಕಷ್ಟ ವನ್ನು ಮನಗಂಡ ಕಲ್ಲಡ್ಕದ ವಿಹಿಂಪ, ಬಜರಂಗ ದಳದ ಕಾರ್ಯಕರ್ತರು ಸೇರಿಕೊಂಡು ಸ್ವಂತ ಖರ್ಚಿನಲ್ಲಿ ಮತ್ತು ಎರಡು ಜನ ದಾನಿಗಳ ಸಹಾಯದಿಂದ ಸುಮಾರು ನಾಲ್ಕು ಲಕ್ಷ ರೂ. ವೆಚ್ಚದ ಹಂಚಿನ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಯುವಕರು ಪ್ರತಿ ರವಿವಾರ ಶ್ರಮದಾನದ ಮೂಲಕವೇ ಹೆಚ್ಚಿನ ಕೆಲಸವನ್ನು ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next