Advertisement

ಮತಾಂತರ ವಿರೋಧಿಸಿ ಸಂಘಟನೆಗಳ ಪ್ರತಿಭಟನೆ

03:38 PM Nov 24, 2020 | Suhan S |

ಚಾಮರಾಜನಗರ: ಜಿಲ್ಲೆಯಲ್ಲಿಕ್ರೆçಸ್ತಮಿಷನರಿಗಳಿಂದ ಅಕ್ರಮವಾಗಿ ಸಾಮೂಹಿಕ ಮತಾಂತರ ನಡೆಯುತ್ತಿದ್ದು, ಇದನ್ನು ತಡೆಯಬೇಕು. ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಅಡಳಿತಯಂತ್ರ ದುರುಪಯೋಗಪಡಿಸಿಕೊಂಡು ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ, ಮತಾಂತರ ವಿರೋಧಿ ಹೋರಾಟ ಸಮಿತಿ ಹಾಗೂ ಹಿಂದೂ ಸಂಘಟನೆಗಳಿಂದ ಸೋಮವಾರ ನಗರದಲ್ಲಿ ಭಾರೀ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Advertisement

ನಗರದ ಮಾರಮ್ಮ ದೇವಸ್ಥಾನದ ಮುಂದೆ ಸಮಾವೇಶಗೊಂಡ ಹಿಂದೂ ಸಂಘಟನೆಗಳು ಕೇಸರಿ ಬಾವುಟಗಳನ್ನು ಹಿಡಿದು ಮೆರವಣಿಗೆ ಹೊರಟು, ದೊಡ್ಡಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತ, ಹಾಗೂ ಬಿ. ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲ ಕಾಲ ಪ್ರತಿಭಟನೆ ನಡೆಸಿ, ಸ್ಥಳಕ್ಕಾಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಅನಂದ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾಡಳಿತ ಭವನ ಮೆರವಣಿಗೆ ಬರುತ್ತಿದ್ದಂತೆ ಪ್ರತಿಭಟನಾಕಾರರ ಜೊತೆ ಇದ್ದ ಮೈಕ್‌ ಇರುವ ವಾಹನವನ್ನು ಪೊಲೀಸರು ತಡೆದರು. ಇದರಿಂದ ಕೆರಳಿದ ಪ್ರತಿಭಟನಾಕಾರರು ಧಿಕ್ಕಾರ ಘೋಷಣೆಗಳನ್ನು ಕೂಗಿ, ಮುನ್ನಗ್ಗಲು ಯತ್ನಿಸಿದರು. ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು. ಆಗ ಡಿವೈಎಸ್ಪಿ ಪ್ರಿಯದರ್ಶಿನಿ ಅವರು ರಾಷ್ಟ್ರಗೀತೆ ಹಾಡುವ ಮೂಲಕ ಪರಿಸ್ಥಿತಿ ತಹಬದಿಗೆ ತಂದರು. ಬಳಿಕ, ಮುಖ್ಯದ್ವಾರದ ಮುಂಭಾಗದ ಸ್ವಲ್ಪ ದೂರದಲ್ಲಿರುವ ಮರದ ನೆರಳಲ್ಲಿ ಕುಳಿತು ಪ್ರತಿಭಟನೆ ಮಾಡಲು ಅವಕಾಶ ಮಾಡಿಕೊಟ್ಟರು.

ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಹಿಂದುಜಾಗರಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ್‌, ಕ್ರೆçಸ್ತ ಮಿಷನರಿಗಳು ಸದ್ದು ಗದ್ದಲವಿಲ್ಲದಲ್ಲೇ ಹನೂರು ಭಾಗದಲ್ಲಿರುವಸೋಲಿಗರನ್ನು ಮತಾಂತರ ಮಾಡುತ್ತಿದ್ದಾರೆ. ಜಿಲ್ಲಾ ಕೇಂದ್ರದಲ್ಲಿಯೇ ಮತಾಂತರ ನಡೆಯುತ್ತಿದೆ. ಕ್ರೈಸ್ತ ಪಾದ್ರಿಗಳು ಸೇವೆ ನೆಪದಲ್ಲಿ ಕಾಡು ಜನರು ಹಾಗು ಸೋಲಿಗರ ಮನವೊಲಿಸಿ ಅವರಿಗೆ ಶಿಲುಬೆ ಕೊಟ್ಟು ಇದೇ ದೇವರು ಎಂದು ನಂಬಿಸಿ, ಬಲವಂತದಿಂದ ಮತಾಂತರ ಮಾಡುತ್ತಿದ್ದಾರೆ. ಇನ್ನು 10 ರಿಂದ 15 ವರ್ಷಗಳಲ್ಲಿ ನಮ್ಮಕಾಡು ಪ್ರದೇಶಗಳಲ್ಲಿ ಸೋಲಿಗರು ಇರುವುದಿಲ್ಲ. ಇವೆರಲ್ಲರೂ ಕ್ರೈಸ್ತರಾಗಿ ಮತಾಂತರ ಗೊಂಡು ನಮ್ಮ ವಿರುದ್ಧವೇ ಹೋರಾಟ ಮಾಡಲು ಬರುತ್ತಾರೆ ಎಂದು ದೂರಿದರು.

ಮತಾಂತರ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಕೆಬ್ಬೇಪುರ ನಂದೀಶ್‌, ಪ್ರಮುಖ ನಾಲ್ಕು ಬೇಡಿಕೆಗಳುವುಳ್ಳ ಮನವಿಪತ್ರವನ್ನುಓದಿಸಲ್ಲಿಸಿದರು. ಪ್ರತಿಭಟನೆಯಲ್ಲಿ ಶಾಸಕ ನಿರಂಜನ್‌ಕುಮಾರ್‌, ಆರ್‌ ಎಸ್‌ಎಸ್‌ ವಿಭಾಗ ಪ್ರಚಾರಕ್‌ ಅಕ್ಷಯ್‌, ಜಿಲ್ಲಾ ಪ್ರಚಾರಕ್‌ ಪ್ರಶಾಂತ್‌, ಜಿಲ್ಲಾ ಕಾರ್ಯವಾಹ ಮಹೇಂದ್ರ, ಜಿಲ್ಲಾ ಸೇವಾ ಪ್ರಮುಖ್‌ ಶಿವಕುಮಾರ್‌, ನಗರ ಕಾರ್ಯವಾಹ ಹೇಮಂತ್‌ಕುಮಾರ್‌, ಮುಖಂಡರಾದ ನಿಜಗುಣರಾಜು, ಜಿಪಂ ಸದಸ್ಯ ಸಿ. ಎನ್‌. ಬಾಲರಾಜು, ಜಿ.ನಾಗಶ್ರೀ ಪ್ರತಾಪ್‌, ಎಸ್‌. ಬಾಲಸುಬ್ರಹ್ಮಣ್ಯ, ನಗರಸಭಾ ಅಧ್ಯಕ್ಷೆ ಆಶಾ ನಟ ರಾಜು, ಮಂಗಳಮ್ಮ, ಲಕ್ಷ್ಮೀ, ಶಿವಮ್ಮ, ನಗರಸಭಾ ಸದಸ್ಯ ಚಂದ್ರಶೇಖರ್‌, ಚಿಕ್ಕರಾಜು ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next