Advertisement

ಹಿಂದೂ ಕಾಲೇಜು ಶಿರ್ವ ಹಳೆವಿದ್ಯಾರ್ಥಿ ಸಂಘ ಮುಂಬಯಿ ಸ್ನೇಹ ಸಂಗಮ 

12:15 PM Jul 17, 2018 | Team Udayavani |

ಮುಂಬಯಿ: ವಿದ್ಯಾವರ್ಧಕ ಸಂಘ ಶಿರ್ವ ಸಂಚಾಲಕತ್ವದ ಹಿಂದೂ ಜ್ಯೂನಿಯರ್‌ ಕಾಲೇಜು ಶಿರ್ವ ಹಳೆವಿದ್ಯಾರ್ಥಿ ಸಂಘ ಮುಂಬಯಿ ಇದರ ಸ್ನೇಹ ಸಂಗಮ-2018 ಸಮಾರಂಭವು ಜು. 14 ರಂದು ಅಪರಾಹ್ನ 2.30 ರಿಂದ ಕುರ್ಲಾ ಪೂರ್ವದ ಬಂಟರ ಭವನದ ಶ್ರೀ ಮುಕ್ತಾನಂದ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು.

Advertisement

ಹಳೆವಿದ್ಯಾರ್ಥಿ ಸಂಘ ಮುಂಬಯಿ ಅಧ್ಯಕ್ಷ ಹೇಮನಾಥ್‌ ಶೆಟ್ಟಿ ಸೂಡ ಇವರು ಸಮಾರಂಭವನ್ನು ದೀಪಪ್ರಜ್ವಲಿಸಿ ಉದ್ಘಾಟಿ ಸಿದರು. ಹಳೆವಿದ್ಯಾರ್ಥಿ ಸಂಘ ಮುಂಬಯಿ ಇದರ  ಗೌರವಾಧ್ಯಕ್ಷ ನಿತ್ಯಾನಂದ ಹೆಗ್ಡೆ ನಡಿಬೆಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿದ್ಯಾವರ್ಧಕ ಸೆಂಟ್ರಲ್‌ ಸ್ಕೂಲ್‌ ಶಿರ್ವ ಇದರ ಕಾರ್ಯಾಧ್ಯಕ್ಷ, ಸಮಾಜ ಸೇವಕ ಗುರ್ಮೆ ಸುರೇಶ್‌ ಶೆಟ್ಟಿ, ಗೌರವ ಅತಿಥಿಗಳಾಗಿ ಮುಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜು ಶಿರ್ವ ಹಳೆವಿದ್ಯಾರ್ಥಿ ಸಂಘ ಮುಂಬಯಿ ಅಧ್ಯಕ್ಷ ಉದಯ್‌ ಸುಂದರ್‌ ಶೆಟ್ಟಿ, ಹಿಂದೂ ಜ್ಯೂನಿಯರ್‌ ಕಾಲೇಜು ಹಳೆವಿದ್ಯಾರ್ಥಿ ಸಂಘ ಶಿರ್ವ ಇದರ ಅಧ್ಯಕ್ಷ ಪ್ರಸಾದ್‌ ಶೆಟ್ಟಿ ಕುತ್ಯಾರ್‌, ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಇದರ ಮಾಜಿ ಅಧ್ಯಕ್ಷ ಸಿಎ ಕರುಣಾಕರ ಶೆಟ್ಟಿ, ಇದೇ ಸಂದರ್ಭದಲ್ಲಿ ಸಮ್ಮಾನಿತಗೊಂಡ ವಿವಿಧ ಕ್ಷೇತ್ರದ ಗಣ್ಯರುಗಳಾದ  ಕರ್ನಾಟಕ ರಾಜ್ಯ ಸರಕಾರದ ಎಂಎಲ್‌ಸಿ ಐವನ್‌ ಡಿಸೋಜಾ, ಬಂಟ್ಸ್‌ ನ್ಯಾಯಮಂಡಳಿಯ ಅಧ್ಯಕ್ಷ ರವೀಂದ್ರ ಎಂ. ಅರಸ, ಕನ್ಸಲ್ಟೆಂಟ್‌ ಫೆಥೋಲೊಜಿಸ್ಟ್‌ ಡಾ| ಶಂಕರ್‌ ಮಲ್ಯ ಎಂ. ಡಿ.,  ಕೈಗಾರಿಕೋದ್ಯಮಿ ಕರುಣಾಕರ ಶೆಟ್ಟಿ ಸೂಡ, ಉದ್ಯಮಿ ಶ್ರೀಧರ ಆಚಾರ್ಯ ಇವರು ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷರುಗಳಾದ ಅಮರ್‌ನಾಥ್‌ ಶೆಟ್ಟಿ, ಶಶಿಪ್ರಭಾ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್‌ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ರಾಜೇಶ್‌ ಶೆಟ್ಟಿ, ಸಂಚಾಲಕ ಕಿಶೋರ್‌ ಕುಮಾರ್‌ ಕುತ್ಯಾರ್‌, ಸಮನ್ವಯಕರುಗಳಾದ ರಾಜ್‌ಗೊàಪಾಲ್‌ ಕೆ., ಸಚ್ಚಿದಾನಂದ ಹೆಗ್ಡೆ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಖಾಂದೇಶ್‌ ಭಾಸ್ಕರ್‌ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯಕಾರಿ ಸಮಿತಿಯ  ಸದಸ್ಯರಾದ ಪ್ರಭಾವತಿ ಎಂ. ಶೆಟ್ಟಿ, ಕರುಣಾಕರ್‌ ಶೆಟ್ಟಿ ಸೂಡ, ಹರಿಣಿ ಎಂ. ಶೆಟ್ಟಿ, ಸಿಎ ಕೃಷ್ಣ ನಾಯಕ್‌, ವಾಲ್ಟರ್‌ ಮಥಾಯಸ್‌, ಶಬುನಾ ಎಸ್‌. ಶೆಟ್ಟಿ ಮೊದಲಾದವರು ಸಹಕರಿಸಿದರು.

ವಿದ್ಯಾರ್ಥಿವೇತನ ವಿತರಣೆ

ಇದೇ ಸಂದರ್ಭದಲ್ಲಿ  ಹಳೆವಿದ್ಯಾರ್ಥಿಗಳ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ  ಅಪರಾಹ್ನ 2.30 ರಿಂದ ಸಂಜೆ 6 ರವರೆಗೆ ಸ್ವರ ಸಿಂಚನ ಸಂಗೀತ ಕಾರ್ಯಕ್ರಮ ಹಾಗೂ ಮುಂಬಯಿಯ ಪ್ರಬುದ್ಧ ಕಲಾವಿದರಿಂದ ಈ ರಾತ್ರೆಗ್‌ ಪಗೆಲ್‌Y ಯಾನ್‌ ತುಳುನಾಟಕ ಪ್ರದರ್ಶನಗೊಂಡಿತು. ಮರಾಠಿ ಮೂಲದ ಈ ನಾಟಕವನ್ನು ರಂಗಕಲಾವಿದ ಕೃಷ್ಣರಾಜ್‌ ಶೆಟ್ಟಿ ಮುಂಡ್ಕೂರು ತುಳುವಿಗೆ ಅನುವಾದಿಸಿ ನಿರ್ದೇಶಿಸಿದ್ದಾರೆ. ರಾತ್ರಿ 8 ರಿಂದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು.

Advertisement

Udayavani is now on Telegram. Click here to join our channel and stay updated with the latest news.

Next