Advertisement

Moral policing: ಯುವತಿಯೊಂದಿಗೆ ಇದ್ದ ಕಾರಣಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

11:33 AM May 26, 2023 | Team Udayavani |

ಚಿಕ್ಕಬಳ್ಳಾಪುರ: ಪರಸ್ಪರ ಅನ್ಯಕೋಮಿನ ಯುವತಿ ಜೊತೆ ಇದ್ದ ಕಾರಣಕ್ಕೆ ಯುವಕನ ಮೇಲೆ ಅನ್ಯಕೋಮಿನ ಯುವಕರ ಗುಂಪೊಂದು ನೈತಿಕ ಪೊಲೀಸ್‌ ಗಿರಿ ಪ್ರದರ್ಶಿಸಿ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲಾ ಕೇಂದ್ರದಲ್ಲಿ ನಡೆದಿದ್ದು, ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ.

Advertisement

ಆಗಿದ್ದೇನು?: ಯುವತಿಯೊಂದಿಗೆ ಅನ್ಯ ಕೋಮಿನ ಯುವಕನ್ನೊಬ್ಬ ಚಿಕ್ಕ ಬಳ್ಳಾಪುರ ನಗರದ ಕಾರ್ಖಾನೆಪೇಟೆಯಲ್ಲಿರುವ ಗೋಪಿಕಾ ಚಾಟ್ಸ್‌ನಲ್ಲಿ ಗೋಬಿ ತಿನ್ನಲು ಬಂದಿದ್ದಾರೆ. ಇದನ್ನು ದೂರದಿಂದಲೇ ಗಮನಿಸಿದ ಮತ್ತೂಂದು ಕೋಮಿನ ಯುವಕರ ಗುಂಪು ಅವರನ್ನು ಫಾಲೋ ಮಾಡಿದೆ.

ಯುವಕನನ್ನು ಪ್ರಶ್ನಿಸಿ ಹಲ್ಲೆ: ಈ ವೇಳೆ ಯುವತಿ ಜೊತೆ ಚಾಟ್ಸ್‌ ಅಂಗಡಿಯಲ್ಲಿ ಕೂತಿದ್ದ ಯುವಕನಿಗೆ ನೀನೇಕೆ ನಮ್ಮ ಧರ್ಮದ ಯುವತಿ ಜೊತೆ ಇದ್ದೀಯಾ ಅಂತ ಯುವಕನನ್ನು ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಯುವತಿ ಸಹ ಯುವಕರ ದೌರ್ಜನ್ಯವನ್ನು ಆಕ್ರೋಶವಾಗಿ ಪ್ರಶ್ನಿಸಿದ್ದಾಳೆ. ಆದರೂ ನೈತಿಕ ಪೊಲೀಸ್‌ ಗಿರಿ ಪ್ರದರ್ಶಿಸಿ ಹಲ್ಲೆ ನಡೆಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕೆಟ್ಟ ಭಾಷೆ ಬಳಸಿ ನೈತಿಕ ಪೊಲೀಸ್ಗಿರಿ: ಯುವಕನನ್ನು ನಡು ರಸ್ತೆಯಲ್ಲಿಯೇ ಗುಂಪು ಹಲ್ಲೆ ನಡೆಸುವ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವೇಳೆ ಯುವತಿ, ತನ್ನ ಜತೆಗಿದ್ದ ಯುವಕನ ರಕ್ಷಣೆಗೆ ಧೈರ್ಯದಿಂದ ನಿಂತು ನನ್ನ ಪಾಡು ನನ್ನಿಷ್ಟ, ನೀವು ಯಾರು ಕೇಳಕ್ಕೆ ಅಂತ ಪ್ರಶ್ನಿಸಿದ್ದಾಳೆ. ಆದರೆ ಯುವಕರ ಗುಂಪು, ನೀನು ಅನ್ಯಕೋಮಿನ ಯುವಕನ ಜೊತೆ ಏಕೆ ಇದ್ದೀಯಾ ಅಂತ ಪ್ರಶ್ನಿಸಿದ್ದಾರೆ. ನಿಮ್ಮ ತಂದೆ ತಾಯಿ ನಂಬರ್‌ ಕೊಡು ಫೋನ್‌ ಮಾಡುತ್ತೇವೆಂದು ಹೆದರಿಸಿದ್ದಾರೆ. ಆದರೂ ಯಾವುದಕ್ಕೂ ಜಗ್ಗದ ಯುವತಿ ಯುವಕರಿಗೆ ಅವಾಜ್‌ ಹಾಕಿದ್ದಾಳೆ. ಒಂದು ಹಂತದಲ್ಲಿ ತನ್ನ ಸಹಪಾಠಿ ಮೇಲೆ ಹಲ್ಲೆ ನಡೆಸಲು ಮುಂದಾದಾಗ ವಿರೋಧಿಸಿ ಆತನನ್ನು ಕರೆದುಕೊಂಡು ಹೋಗುತ್ತಾಳೆ.

ಮೊದಲು ಅವಾಜ್ಬಳಿಕ ಕ್ಷಮೆ ಕೇಳಿದ ಯುವತಿ:  ಆರಂಭದಲ್ಲಿ ತನ್ನ ಜೊತೆಯಲ್ಲಿದ್ದ ಯುವಕನ ಮೇಲೆ ಹಲ್ಲೆ ನಡೆಸುವುದನ್ನು ಬಲವಾಗಿ ವಿರೋಧಿಸುವ ಯುವತಿ ಬಳಿಕ ತಮ್ಮ ಸಮುದಾಯದ ಯುವಕರ ಗುಂಪು ಹೇರಿದ ಒತ್ತಡಕ್ಕೆ ಮಣಿದು ನಾನು ಮಾಡಿದ್ದು ತಪ್ಪು ಅನ್ನುವ ರೀತಿಯಲ್ಲಿ ಯುವತಿಯ ಕೈಯಲ್ಲಿ ಮಾತನಾಡಿಸಿ ಆ ಯುವಕರು ವಿಡಿಯೋ ಮಾಡಿಸಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದ್ದಾರೆ.

Advertisement

ಘಟನೆ ಬಗ್ಗೆ ಎಸ್ಪಿ ಹೇಳಿದ್ದೇನು? ಘಟನೆ ಕುರಿತು ಉದಯವಾಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್‌ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಇಷ್ಟು, ಘಟನೆ ಬಗ್ಗೆ ನಮಗೆ ಯಾರು ದೂರು ಕೊಟ್ಟಿಲ್ಲ. ವಿಷಯ ನಮ್ಮ ಗಮನಕ್ಕೆ ಬಂದ ತಕ್ಷಣ, ನಾವು ದೃಶ್ಯಾವಳಿಗಳಲ್ಲಿರುವ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳು ವಂತೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಯಾರೇ ಇದರಲ್ಲಿ ಪಾಲ್ಗೊಂಡಿದ್ದರೂ ಪೊಲೀಸ್‌ ಇಲಾಖೆ ಕಠಿಣ ಕ್ರಮ ವಹಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next