Advertisement

ಹಿಂದಿ ಟೀಕಿಸುವ ಭರದಲ್ಲಿ ಡಿಎಂಕೆ ಸಂಸದ ಎಡವಟ್ಟು

07:20 AM Jun 07, 2022 | Team Udayavani |

ಚೆನ್ನೈ: ಹಿಂದಿ ಹೇರಿಕೆ ವಿರುದ್ಧ ಮಾತನಾಡುವ ರಭಸದಲ್ಲಿ ಡಿಎಂಕೆ ರಾಜ್ಯಸಭಾ ಸದಸ್ಯ ಟಿ.ಕೆ.ಎಸ್‌.ಇಳಂಗೋವನ್‌ ಎಡವಟ್ಟು ಮಾಡಿಕೊಂಡಿದ್ದಾರೆ.

Advertisement

“ಹಿಂದಿ ಭಾಷೆ ಹೇರಿಕೆಯಿಂದಾಗಿ ತಮಿಳರು ಶೂದ್ರರ ಮಟ್ಟಕ್ಕೆ ಇಳಿಯಲಿದ್ದಾರೆ’ ಎಂದಿದ್ದಾರೆ. ಜತೆಗೆ ಆ ಭಾಷೆಯನ್ನು ಮಾತನಾ ಡುವ ರಾಜ್ಯ ಗಳು ಅಭಿವೃದ್ಧಿ ಸಾಧಿಸಿಲ್ಲ ಎಂದು ಪ್ರತಿಪಾದಿ ಸಿದ್ದಾರೆ.

“ಹಿಂದಿಯೇ ಪ್ರಧಾನ ಭಾಷೆ ಆಗಿಲ್ಲದ ಪಶ್ಚಿಮ ಬಂಗಾಲ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ ಬೆಳವಣಿಗೆ ಸಾಧಿಸಿವೆ. ಈ ಎಲ್ಲ ರಾಜ್ಯಗಳಲ್ಲಿ ಹಿಂದಿ ಮಾತೃಭಾಷೆ ಆಗಿಲ್ಲ ಎಂದು ಪ್ರತಿಪಾದಿಸುವುದೇ ನನ್ನ ಉದ್ದೇಶ.

ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮತ್ತು ಉತ್ತರಾಖಂಡ ಹಿಂದಿ ಭಾಷೆ ಮಾತನಾಡುವ ರಾಜ್ಯಗಳು. ಅವುಗಳು ಅಭಿವೃದ್ಧಿಯಾಗಿಲ್ಲ. ಹೀಗಾಗಿ, ನಾನೇಕೆ ಆ ಭಾಷೆಯನ್ನು ಕಲಿಯಬೇಕು’ ಎಂದು ಪ್ರಶ್ನಿಸಿದ್ದಾರೆ.

ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಳಂಗೋವನ್‌ ಅವರ ಹೇಳಿಕೆಯು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ವೈಷಮ್ಯ ಹುಟ್ಟಿಸುವಂತಿದೆ ಎಂದು ಆಕ್ರೋಶ ಹೊರಹಾಕಿದೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next