Advertisement

ಅಸ್ಸಾಂ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಹಿಮಂತ್ ಬಿಸ್ವಾ ಶರ್ಮಾ

12:28 PM May 10, 2021 | Team Udayavani |

ಅಸ್ಸಾಂ : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹಿಮಂತ್ ಬಿಸ್ವಾ ಶರ್ಮಾ ಇಂದು (ಮೇ.10)  ಪ್ರಮಾಣ ವಚನ ಸ್ವೀಕರಿಸಿದರು.

Advertisement

ಇಂದು ನಡೆದ ಸರಳ ಸಮಾರಂಭದಲ್ಲಿ, ಅಸ್ಸಾಂ ಮುಖ್ಯಮಂತ್ರಿಯಾಗಿ ಹಿಮಂತ್ ಬಿಸ್ವಾ ಶರ್ಮಾ ಅವರಿಗೆ ರಾಜ್ಯಪಾಲ ಜಗದೀಶ್ ಮುಖಿ ಪ್ರಮಾಣ ವಚನ ಬೋಧಿಸಿದ್ದಾರೆ.

ಈ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ತ್ರಿಪುರ ಸಿಎಂ ಬಿಪ್ಲಾಬ್ ದೇಬ್, ಮೇಘಾಲಯ ಸಿಎಂ ಕಾನ್ರಾಡ್ ಸಾಂಗ್ಮಾ, ಮಣಿಪುರದ ಸಿಎಂ ಎನ್ .ಬಿರೆನ್ ಸಿಂಗ್, ಮತ್ತು ನಾಗಾಲ್ಯಾಂಡ್ ಸಿಎಂ ನೀಫಿಯು ರಿಯೊ ಹಾಜರಿದ್ದರು. ಹಾಗೂ ನಿರ್ಗಮಿತ ಸಿಎಂ ಸರ್ಬಾನಂದ ಸೋನೊವಾಲ್ ಕೂಡ ಉಪಸ್ಥಿತರಿದ್ದರು.

ಭಾನುವಾರ ಅಸ್ಸಾಂ ಮುಖ್ಯಮಂತ್ರಿಯಾಗಿ ಹಿಮಂತ್ ಬಿಸ್ವಾ ಶರ್ಮಾ ಅವರನ್ನು ಘೋಷಣೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next