Advertisement

ನದಿಯಲ್ಲಿ ತೇಲಿ ಹೋದ ಕಾರುಗಳು! ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ಘಟನೆ; ಮೇಘಸ್ಫೋಟಕ್ಕೆ 1 ಸಾವು

11:43 AM Aug 09, 2022 | Team Udayavani |

ನವದೆಹಲಿ: ಉತ್ತರ ಭಾರತದ ಹಲವೆಡೆ ಸೋಮವಾರ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ ರಸ್ತೆಗಳು ಕೊಚ್ಚಿ ಹೋಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.

Advertisement

ಮಧ್ಯಪ್ರದೇಶದ ಖರ್ಗೋನ್‌ ಜಿಲ್ಲೆಯಲ್ಲಿ ಮಳೆಯಾಗಿದ್ದರಿಂದ ಸುಕ್ದಿ ನದಿಯಲ್ಲಿ ಪ್ರವಾಹ ಏಕಾಏಕಿ ಹೆಚ್ಚಾಗಿದೆ.

ಹೀಗಾಗಿ, ನದಿ ತಟದಲ್ಲಿ ನಿಲ್ಲಿಸಿದ್ದ 14 ಕಾರುಗಳು ತೇಲಿಹೋಗಿವೆ. ಕಟ್ಕೊಟ್ ಅರಣ್ಯ ಪ್ರದೇಶದಲ್ಲಿ ನದಿ ದಡಕ್ಕೆ ಪಿಕ್‌ನಿಕ್‌ ಬಂದಿದ್ದ ಸುಮಾರು 50 ಮಂದಿ ಪ್ರಾಣ ರಕ್ಷಣೆಗಾಗಿ ಎತ್ತರದ ಪ್ರದೇಶಕ್ಕೆ ಓಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಟ್ರ್ಯಾಕ್ಟರ್‌ಗಳ ಸಹಾಯದಿಂದ 10 ವಾಹನಗಳನ್ನು ನೀರಿನಿಂದ ದಡಕ್ಕೆ ಎಳೆತರಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಿತೇಂದ್ರ ಸಿಂಗ್‌ ಪವಾರ್‌ ತಿಳಿಸಿದ್ದಾರೆ.

ಒಬ್ಬ ಸಾವು:
ಹಿಮಾಚಲ ಪ್ರದೇಶದ ಛಂಬಾ ಜಿಲ್ಲೆಯ ಭದೋಗ ಗ್ರಾಮಗಳಲ್ಲಿ ಸೋಮವಾರ ಮೇಘ ಸ್ಫೋಟ ಸಂಭವಿಸಿದ್ದು, 15 ವರ್ಷದ ಬಾಲಕನೊಬ್ಬ ಸಾವಿಗೀಡಾಗಿದ್ದಾನೆ. ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮಹಾರಾಷ್ಟ್ರದ ದಕ್ಷಿಣ ಕೊಂಕಣ ಭಾಗ ಮತ್ತು ಸಿಂಧುದುರ್ಗ್‌ ಪ್ರದೇಶದಲ್ಲಿಯೂ ಭಾರೀ ಮಳೆ ವರದಿಯಾಗಿದೆ.

Advertisement

ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿರುವ ನಾಲ್ಕು ಜಿಲ್ಲೆಗಳಿಗೆ ಕೇಂದ್ರ ಸರ್ಕಾರದ ತಂಡಗಳು ಬುಧವಾರ ಮತ್ತು ಗುರುವಾರ ಭೇಟಿ ನೀಡಲಿವೆ. ಇದೇ ವೇಳೆ ಭಾರತೀಯ ಹವಾಮಾನ ಇಲಾಖೆಯು ದೆಹಲಿ ಭಾಗದಲ್ಲಿ ಜೂನ್‌ ಮತ್ತು ಜುಲೈ ತಿಂಗಳಿಗೆ ನೀಡಿದ್ದ ಮಳೆ ಮುನ್ಸೂಚನೆಯು ಶೇ.80ರಷ್ಟು ನಿಖರವಾಗಿತ್ತು ಎಂದು ಇಲಾಖೆಯ ಮುಖ್ಯಸ್ಥರಾಗಿರುವ ಮೃತ್ಯುಂಜಯ್‌ ಮಹೋಪಾತ್ರ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next