ಶಿಮ್ಲಾ:ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ವಿಧಾನಸಭೆಯ ಬಜೆಟ್ ಅಧಿವೇಶನಕ್ಕೆ ಆಲ್ಟೋ ಕಾರ್‌ನಲ್ಲಿ ಆಗಮಿಸಿದ್ದಾರೆ.
Advertisement
ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಫೋಟೋ ಮತ್ತು ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ. ” ದೊಡ್ಡ ಹುದ್ದೆ ಅಲಂಕರಿಸಿದರೂ, ಎಲ್ಲರೂ ಕೂಡ ತಮ್ಮ ತಮ್ಮ ಆರಂಭದ ದಿನಗಳನ್ನು ಮರೆಯಬಾರದು’ ಎಂದು ಬರೆದುಕೊಂಡಿದ್ದಾರೆ.
ನಮ್ಮ ಕುಟುಂಬ, ಹಿನ್ನೆಲೆ ನಮಗೆ ಪ್ರೇರಣೆಯ ಮೂಲವಾಗಿ ಇರಬೇಕು ಎಂದಿದ್ದಾರೆ. ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ಬಳಿಕ ಆಲ್ಟೋ ಕಾರ್ ಖರೀದಿಸಿದ್ದೆ. ಅದನ್ನು ಈಗಲೂ ಇರಿಸಿಕೊಂಡಿದ್ದೇನೆ ಎಂದು ವಿಧಾನಸೌಧದಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.