Advertisement

ಹಿಮಾಚಲ ಪ್ರದೇಶ ಬಿಜೆಪಿ ತೆಕ್ಕೆಗೆ

06:00 AM Dec 19, 2017 | Team Udayavani |

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯ ಲಾಭ ದಕ್ಕಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

Advertisement

ವಿಧಾನಸಭೆ ಚುನಾ ವಣೆಯ ಫ‌ಲಿತಾಂಶ ಸೋಮವಾರ ಹೊರಬಿದ್ದಿದ್ದು, ಕಳೆದೈದು ವರ್ಷಗಳಿಂದ ವಿಪಕ್ಷವಾಗಿದ್ದ ಬಿಜೆಪಿ ಈ ಬಾರಿ ಅಧಿಕಾರ ಹಿಡಿಯುವಲ್ಲಿ ಸಫ‌ಲವಾಗಿದೆ.

ಒಟ್ಟು 68 ಸ್ಥಾನಗಳಿರುವ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ, ಯಾವುದೇ ಪಕ್ಷ ಅಧಿಕಾರ ಪಡೆಯಲು 35 ಸ್ಥಾನಗಳನ್ನು ಗೆಲ್ಲಬೇಕು. ಈಗ, 44 ಸ್ಥಾನಗಳನ್ನು ಪಡೆದಿರುವ ಬಿಜೆಪಿ, ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರುವುದು ನಿಶ್ಚಿತ.
ಇನ್ನು, ಈವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌, ಜನರ ಅವಕೃಪೆಗೆ ಕಾರಣವಾಗಿದೆ. ಕೇವಲ 21 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿರುವ ಕಾಂಗ್ರೆಸ್‌ ಪಕ್ಷವು ಈ ಬಾರಿ ವಿಪಕ್ಷ  ಸ್ಥಾನ ಅಲಂಕರಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಇನ್ನು, ಈ ಚುನಾವಣ ಅಖಾಡಕ್ಕಿಳಿದಿದ್ದ ಭಾರತೀಯ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸಿಸ್ಟ್‌) ಒಂದು ಸ್ಥಾನ ಗೆದ್ದಿದ್ದರೆ, ಪಕ್ಷೇತರರು 2 ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಸ್ಥಾಪಿಸುವುದಾಗಿ ಚುನಾವಣ ಸಮೀಕ್ಷೆಗಳು ನುಡಿದಿದ್ದ ಭವಿಷ್ಯ ನಿಜವಾಗಿದೆ. ಈ ಬಾರಿಯ ಮತ ಹಂಚಿಕೆ ವಿಚಾರದಲ್ಲೂ ಬಿಜೆಪಿ ಪ್ರಗತಿ ಸಾಧಿಸಿದೆ. 2012ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಶೇ.38.5ರಷ್ಟು ಮತ ಪಡೆದಿತ್ತು. ಈ ಬಾರಿ, ಇದು ಶೇ. 48.07ಕ್ಕೇರಿದೆ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಕೂಡ ತನ್ನ ಮತಗಳ ಹಂಚಿಕೆ ವಿಚಾರದಲ್ಲಿ ಉತ್ತಮ ಮುನ್ನಡೆ ಕಾಣಲಿದೆ ಎಂಬ ಪಕ್ಷದ ನಿರೀಕ್ಷೆಗಳು ಹುಸಿಯಾಗಿವೆ. ಈ ಬಾರಿ ಅದು, ಕಳೆದ ಬಾರಿ ಗೆದ್ದಿದ್ದಕ್ಕಿಂತ 15 ಸ್ಥಾನಗಳನ್ನು ಕಳೆದುಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next