Advertisement

ಹಿಮಾಚಲ ಪ್ರದೇಶ: ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಅಂಗೀಕಾರ

07:45 PM Aug 13, 2022 | Team Udayavani |

ಶಿಮ್ಲಾ: ಸಾಮೂಹಿಕ ಮತಾಂತರವನ್ನು ನಿಷೇಧಿಸುವ ಮಸೂದೆಯನ್ನು ಹಿಮಾಚಲ ಪ್ರದೇಶ ವಿಧಾನಸಭೆಯು ಶನಿವಾರ ಅಂಗೀಕರಿಸಿದೆ.

Advertisement

ಹಾಗೆಯೇ 2019ರ ಒತ್ತಾಯಪೂರ್ವಕ ಮತಾಂತರ ಕಾನೂನಿನಲ್ಲಿ ಅಪರಾಧಿಗಳಿಗೆ ಗರಿಷ್ಠ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸುವಂತೆ ತಿದ್ದುಪಡಿ ತರಲಾಗಿದೆ. ಹಿಮಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ್ಯ(ತಿದ್ದುಪಡಿ) 2022 ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ಈ ಮಸೂದೆಯ ಪ್ರಕಾರ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಒಮ್ಮೆಲೇ ಒಂದು ಧರ್ಮಕ್ಕೆ ಮತಾಂತರವಾಗುವಂತಿಲ್ಲ. 2019ರ ಕಾನೂನಿನಲ್ಲಿ ಈ ಅಂಶ ಇಲ್ಲದ ಹಿನ್ನೆಲೆ ಇದೀಗ ತಿದ್ದುಪಡಿ ತಂದು ಸೇರ್ಪಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಜೈ ರಾಮ್‌ ಠಾಕೂರ್‌ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next