Advertisement

ಅಕ್ರಮ ಗಣಿಗಾರಿಕೆ ತಡೆಗೆ ಆಗ್ರಹಿಸಿ ಪಾದಯಾತ್ರೆ

12:19 PM Nov 10, 2018 | Team Udayavani |

ಮೈಸೂರು: ನಾಡಿನ ಪ್ರಮುಖ ಜಲಾಶಯ ಕೆಆರ್‌ಎಸ್‌ಗೆ ಗಂಡಾಂತರ ತರುತ್ತಿರುವ ಅಕ್ರಮ ಗಣಿಗಾರಿಕೆಯನ್ನು ತಡೆಯುವಂತೆ ಒತ್ತಾಯಿಸಿ ಗಣಿಗಾರಿಕೆ ತೊಲಗಿಸಿ-ಕೆಆರ್‌ಎಸ್‌ ಉಳಿಸಿ ಘೋಷಣೆಯೊಂದಿಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶಗೌಡ ನೇತೃತ್ವದಲ್ಲಿ ವೇದಿಕೆ ಪದಾಧಿಕಾರಿಗಳು ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡರು.

Advertisement

ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಿಂದ ತಲೆಯ ಕಲ್ಲುಗಳನ್ನು ಹೊತ್ತು, ಘೋಷಣೆ ಕೂಗುತ್ತಾ ವಿನೂತನ ಪಾದಯಾತ್ರೆ ಕೈಗೊಂಡರು. ಈ ವೇಳೆ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ರಮೇಶಗೌಡ, ಕೆಆರ್‌ಎಸ್‌ ಜಲಾಶಯ ಉಳಿವಿಗಾಗಿ ಕೈಗೊಂಡಿರುವ ಈ ಬೃಹತ್‌ ಜನಾಂದೋಲನ ಪಾದಯಾತ್ರೆ ನ.15ರಂದು ಬೆಂಗಳೂರು ತಲುಪಲಿದ್ದು, ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಿ, ಅಕ್ರಮ ಗಣಿಗಾರಿಕೆ ತಡೆಯುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಸಲ್ಲಿಸಲಾಗುವುದು ಎಂದರು. 

ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯ ಮಾತ್ರವಲ್ಲದೆ, ಮಂಚನಬೆಲೆ, ತಿಪ್ಪಗೊಂಡನಹಳ್ಳಿ ಜಲಾಶಯ, ಇಸ್ರೋ, ಮುಂಬೈ ನಿಂದ ಬಿಡದಿಗೆ ಹಾದು ಬಂದಿರುವ ಗ್ಯಾಸ್‌ ಪೈಪ್‌ಲೇನ್‌ಗೆ ಹಾನಿಯಾಗಿ ನೂರಾರು ಹಳ್ಳಿಗಳಿಗೆ ಹಾನಿಯಾಗಲಿದ್ದು, ಅಪಾರ ನಷ್ಟ ಸಂಭವಿಸಲಿದೆ.

ಇದರ ಜೊತೆಗೆ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿ, ಸೂಲಿವಾರ, ಮಾದಾಪಟ್ಟಣ, ಹುಳಿವೇನಹಳ್ಳಿ, ಉಣಿಗೆರೆ, ದೊಡ್ಡೇರಿ, ಉದ್ದಂಡನಹಳ್ಳಿ, ಚಿಕ್ಕನಹಳ್ಳಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು. ವೇದಿಕೆಯ ಮೈಸೂರು ಜಿಲ್ಲಾಧ್ಯಕ್ಷ ಗಿರೀಶ್‌ಕುಮಾರ್‌ ಸೇರಿದಂತೆ ಹಲವರು ಪಾದಯಾತ್ರೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next