Advertisement
ನಗರದ ಹೈಕ ಶಿಕ್ಷಣ ಸಂಸ್ಥೆ ಅಡಿ ಎಸ್.ಎಸ್.ಮರಗೋಳ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದ ಉದ್ಘಾಟಕರಾಗಿ ಅವರು ಮಾತನಾಡಿದರು.
ಎಸ್.ಎಸ್. ಮರಗೊಳ ಕಾಲೇಜಿಗೆ 51 ವರ್ಷದ ಹಿರಿತನವಿದೆ. ವಿಶ್ವವಿದ್ಯಾಲಯಕ್ಕಿಂತಲೂ ಮೊದಲೇ ಹಿಂದುಳಿದ ಈ ಭಾಗದಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ನೆರಳಿನ ಶಹಾಬಾದನ ಎಸ್.ಎಸ್.ಮರಗೊಳ ಕಾಲೇಜು
ಶೈಕಣಿಕ ಸೇವೆ ಆರಂಭಿಸಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು. ಅಂಗೈಯಲ್ಲಿ ಇಡೀ ವಿಶ್ವವನ್ನೇ ಇರಿಸುವ ಇಂದಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಅಧ್ಯಯನ ಮಾಡಬೇಕಾಗಿದೆ. ತಂತ್ರಜ್ಞಾನದ ಫಲವಾಗಿ ಸಾಕಷ್ಟು ವಿಷಯಗಳು ಲಭಿಸುತ್ತಿವೆ. ಅದನ್ನು ಬಳಸಿಕೊಂಡರೆ
ಮುಂದೆ ಸಾಗಬಹುದು. ಇಲ್ಲವಾದರೆ ನಮ್ಮ ಜತೆಗಿರುವ ಸಹಪಾಠಿಗಳು ನಮ್ಮಿಂದ ಮುಂದೆ ಹೋಗುವುದರಲ್ಲಿ ಅನುಮಾನವೇ ಇಲ್ಲ. ಪಾಲಕರು ಮಕ್ಕಳ ಬಗ್ಗೆ ಸದಾ ಗಮನಹರಿಸಿ ಅವರ ಅಧ್ಯಯನಕ್ಕೆ ನೆರವಾಗಬೇಕು. ಇದರಿಂದ ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ನೀಡಬಹುದೆಂದು ಹೇಳಿದರು.
Related Articles
1967ರಲ್ಲಿ ಶಹಾಬಾದಿನ ದಾಲ್ ಮಿಲ್ ಗೋದಾಮಿನಲ್ಲಿ ಆರಂಭವಾದ ಕಾಲೇಜು ಹೆಮ್ಮರವಾಗಿ ಬೆಳೆಯುವುದಕ್ಕೆ
ದಾನಿಗಳ, ಪಾಲಕರ ನೆರವು ಪ್ರಮುಖ ಕಾರಣ ಎಂದು ಹೇಳಿದರು.
Advertisement
ಕಾಲೇಜಿನ ಇತಿಹಾಸ ವಿವರಿಸಿದರು . ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ| ಸೂರ್ಯಕಾಂತ ಬಿರಾದಾರಅತಿಥಿಗಳನ್ನು ಪರಿಚಯಿಸಿದರು. ಗುವಿವಿ ಮೌಲ್ಯಮಾಪನ ಕುಲಸಚಿವ ಸಿ.ಎಸ್. ಪಾಟೀಲ, ಸಂಸ್ಥೆ ಅಧ್ಯಕ್ಷ ಬಸವರಾಜ
ಭೀಮಳ್ಳಿ, ಉಪಾದ್ಯಕ್ಷ ಸೂರ್ಯಕಾಂತ ಪಾಟೀಲ, ಸಂಸ್ಥೆ ಕಾರ್ಯದರ್ಶಿ ಆರ್.ಎಸ್.ಹೊಸಗೌಡ, ಶಿವಾನಂದ ಮಾನಕರ್, ಎನ್.ಡಿ. ಪಾಟೀಲ, ಜಿ.ಡಿ. ಅಣಕಲ್, ನಿತೀಶ ಜವಳಿ, ಡಾ| ಎ.ವಿ.ದೇಶಮುಖ , ಡಾ| ಅಶೋಕ ಪಾಟೀಲ,
ಡಾ| ಎಸ್.ಎಸ್. ಪಾಟೀಲ, ಡಾ| ಅಂಬಿಕಾ ಪ್ರಸಾದ, ದಾನಿ ಅನಿಲ ಮರಗೋಳ, ಉದಯ ಕುಮಾರ ಇತರರು ಇದ್ದರು. ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಾದ ಬುಶೇರಾ ಮತೀನ್, ಶೀದೇವಿ ಸೇರಿದಂತೆ 37 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎ.ಜಿ. ಪೊಲೀಸ್ ಪಾಟೀಲ ನಿರೂಪಿಸಿದರು, ಶಿವಕುಮಾರ ತಂಡದವರು ಪ್ರಾರ್ಥಿಸಿದರು,
ಡಾ| ಶರಣಪ್ಪ ಕವಡೆ ವಂದಿಸಿದರು.