Advertisement

ಪೊಲೀಸ್‌ ಹೆಲ್ಮೆಟ್‌ ಧರಿಸಿ ಹೈಜಾಕ್‌

11:49 AM Apr 29, 2018 | Team Udayavani |

ಬೆಂಗಳೂರು: ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೊರಟ್ಟಿದ್ದ ಲಾಮಾ ಟ್ರಾವೆಲ್ಸ್‌ ಬಸ್‌ ಅಪಹರಿಸಿದ ದುಷ್ಕರ್ಮಿಗಳು, ಪೊಲೀಸರ ಹೆಲ್ಮೆಟ್‌ ಧರಿಸಿದ್ದರು. ಹೀಗಾಗಿ ಹೆದರಿದ ಬಸ್‌ ಚಾಲಕ ತಪಾಸಣೆಗೆ ಅವಕಾಶ ನೀಡಿದ್ದ. ಬಳಿಕ ಫೈನಾನ್ಸ್‌ ಕಂಪನಿ ಸಿಬ್ಬಂದಿ ಎಂದು ಹೇಳಿ ಬಸ್‌ ಹೈಜಾಕ್‌ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕಲಾಸಿಪಾಳ್ಯದಲ್ಲಿರುವ ಫ‌ುಲ್ಟ್ರಾನ್‌ ಇಂಡಿಯಾ ಫೈನಾನ್ಸ್‌ ಕಂಪನಿಯಲ್ಲಿ ಲಾಮಾ ಟ್ರಾವೆಲ್ಸ್‌ನ ಮಾಲೀಕ ನೌಷಾದ್‌ ಸಾಲ ಪಡೆದುಕೊಂಡಿದ್ದರು. ಆದರೆ, ಕೆಲ ತಿಂಗಳಿಂದ ಮಾಸಿಕ ಸಾಲದ ಹಣ ಪಾವತಿಸದೆ ಇಲ್ಲದ ಸಬೂಬು ಹೇಳುತ್ತಿದ್ದರು. ಈ ಬಗ್ಗೆ ನಾಲ್ಕೈದು ಬಾರಿ ನೋಟಿಸ್‌ ಜಾರಿ ಮಾಡಿದ್ದರೂ ಯಾವುದೇ ಉತ್ತರ ಬಂದಿರಲಿಲ್ಲ. ಹೀಗಾಗಿ ಫೈನಾನ್ಸ್‌ ಕಂಪನಿಯವರು ಪ್ರಯಾಣಿಕರು ಇರುವ ಬಸ್‌ನ್ನೆ ಜಪ್ತಿ ಮಾಡಲು ಸೂಚಿಸಿದ್ದರು.

ಅದರಂತೆ ಪೆರಿ ಪ್ಲ ಸ್‌ ಸರ್ವೀ ಸ್‌ ನ ನಾಲ್ಕು ಮಂದಿ ಬೈಕ್‌ನಲ್ಲಿ ಬಂದು ಬಸ್‌ ಅಡ್ಡಗಟ್ಟಿದ್ದಾರೆ. ಇದನ್ನು ಪ್ರಶ್ನಿಸಿದ ಚಾಲಕನಿಗೆ ನಾವು ಸಿಸಿಬಿ ಪೊಲೀಸರು, ಹೆಲ್ಮೆಟ್‌ ಇರುವುದು ಕಾಣುವುದಿಲ್ಲವೇ ಎಂದು ಬೆದರಿಸಿ ಆರಂಭದಲ್ಲಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಬಳಿಕ ದಾಖಲೆಗಳನ್ನು ವಶಕ್ಕೆ ಪಡೆದು ಚಾಲಕನ ಮೇಲೆ ಹಲ್ಲೆ ನಡೆಸಿ ಪಟ್ಟಣಗೆರೆಯ ಗೋಡೌನ್‌ಗೆ ಪ್ರಯಾಣಿಕರ ಸಮೇ ತ ಬಸ್‌ ಕೊಂಡೊಯ್ದಿದ್ದಾರೆ.

ಪೆರಿಪ್ಲಸ್‌ ಸರ್ವಿಸ್‌ ಜತೆ ನಂಟು ಪಟ್ಟಣಗೆರೆಯಲ್ಲಿರುವ ಪೆರಿಪ್ಲಸ್‌ ಸರ್ವೀಸ್‌ ಹಾಗೂ ಫ‌ುಲ್ಟ್ರಾನ್‌ ಇಂಡಿಯಾ ಫೈನಾನ್ಸ್‌ ಕಂಪನಿ ನಡುವೆ ವ್ಯವಹಾರದ ನಂಟಿದೆ. ಈ ಫೈನಾನ್ಸ್‌ನಿಂದ ಹಣ ಪಡೆದು ವ್ಯಕ್ತಿ ನಿಗದಿತ ಸಮಯಕ್ಕೆ ಮರು ಪಾವತಿಸದಿದ್ದರೆ, ಆ ವಕ್ತಿಗೆ ಸಂಬಂಧಿಸಿದ ಮೌಲ್ಯಯುತ ವಸ್ತುಗಳನ್ನು ಪೆರಿಪ್ಲಸ್‌ ಸರ್ವೀ ಸ್‌ ಮೂಲಕ ಜಪ್ತಿ ಮಾಡಿಸುತ್ತಾರೆ.

ಬಸ್‌ ಮಾಲೀಕ ನೌಷದ್‌ ಬಾಕಿ ಹಣ ಉಳಿಸಿಕೊಂಡಿದರಿಂದ ಬಸ್‌ ಅನ್ನು ಜಪ್ತಿ ಮಾಡುವಂತೆ ಫ‌ುಲ್ಟ್ರಾನ್‌ ಇಂಡಿಯಾ ಫೈನಾನ್ಸ್‌ ಕಂಪನಿಯೇ ಪೆರಿಪ್ಲಸ್‌ ಸರ್ವೀಸ್‌ಗೆ ಸೂಚಿಸಿತ್ತು. ಅದರಂತೆ ಸರ್ವೀಸ್‌ ಸಂಸ್ಥೆಯ ಯುವಕರು ಬಸ್‌ ಹೈಜಾಕ್‌ ಮಾಡಿದ್ದಾರೆ. ದೂರು ಬರುತ್ತಿದ್ದಂತೆ ನಮ್ಮ ಸಿಬ್ಬಂದಿ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಅಪಹರಣಕಾರರನ್ನು ಬಂಧಿಸಿದ್ದಾರೆ.

Advertisement

ಹಾಗೆಯೇ ಅಕ್ರಮವಾಗಿ ಬಸ್‌ ತಡೆ ಹಿಡಿದಿದ್ದ ಫೈನಾನ್ಸ್‌ ಕಂಪನಿಯ ಮೇಲೆ ದಾಳಿ ನಡೆಸಿ ಜಪ್ತಿ ಮಾಡಲಾಗುವುದು. ಜತೆಗೆ ಪೆರಿಪ್ಲಸ್‌ ಸಂಸ್ಥೆ ಸಾಲದ  ಹಣ ವಸೂಲಿ ಮಾಡಲು ಅಫ‌ರಾಧ ಹಿನ್ನೆಲೆಯಲ್ಲಿರುವ ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿಯಿದೆ. ನಸುಕಿನ 3.30ರ ಸುಮಾರಿಗೆ ಕಾನೂನು ಪ್ರಕ್ರಿಯೆ ಮುಗಿಸಿ ಬಸ್‌ ಮತ್ತು ಪ್ರಯಾಣಿಕರನ್ನು ಕಣ್ಣೂರಿಗೆ ಕಳುಹಿಸಿಕೊಡಲಾಯಿತು. ಪ್ರಕರಣ ಸಂಬಂಧ ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚಿನ್ನಣ್ಣನವರ್‌ ತಿಳಿಸಿದ್ದಾರೆ.

ಏಕಾಏಕಿ ಬಸ್‌ ಗೋಡೌನ್‌ ಕಡೆ ಹೋಗುತ್ತಿದ್ದನ್ನು ಪ್ರಶ್ನಿಸಿದಾಗ, ದುಷ್ಕರ್ಮಿಗಳು ನಾವು ಫೈನಾನ್ಸ್‌ನವರು 40 ಲಕ್ಷ ರೂ. ಹಣ ಕೊಟ್ಟಿಲ್ಲ. ಅದಕ್ಕೆ ಬಸ್‌ ಜಪ್ತಿ ಮಾಡುತ್ತಿದ್ದೇವೆ. ಎಲ್ಲರೂ ಸೈಲೆಂಟ್‌ ಆಗಿ ಕುಳಿತುಕೊಳ್ಳಬೇಕು ಎಂದು ಬೆದರಿಕೆ ಹಾಕಿದರು.
ನಯಾಜ್‌, ಪ್ರಯಾಣಿಕ

ಮುಖ್ಯಾಂಶಗಳು
-ಬೆಂಗಳೂರಿನ ಕಲಾಸಿಪಾಳ್ಯದಿಂದ ಕೇರಳದ ಕಣ್ಣೂರಿಗೆ ಹೊರಟಿದ್ದ ಲಾಮಾ ಬಸ್‌
-ಫ‌ುಲ್ಟ್ರಾನ್‌ ಇಂಡಿಯಾ ಫೈನಾನ್ಸ್‌ ಕಂಪನಿ ಸೂಚನೆ ಮೇರೆಗೆ ಬಸ್‌ ಹೈಜಾಕ್‌
-ಕೆಲ ತಿಂಗಳಿಂದ ಸಾಲ ಮರು ಪಾವತಿ ಮಾಡದಕ್ಕೆ ಪ್ರಯಾಣಿಕರಿರುವ ಬಸ್‌ ಅಪಹರಣ
-ಲಾಮಾ ಟ್ರಾವೆಲ್ಸ್‌ಗೆ ಸೇರಿದ ಬಸ್‌
-ನಸುಕಿನ 3.30ಕ್ಕೆ ಟ್ರಾವೆಲ್ಸ್‌ನ ಮತ್ತೂಬ್ಬ ಚಾಲಕನಿಂದ ಪ್ರಯಾಣಿಕರನ್ನು ಕೇರಳಕ್ಕೆ ಬಸ್‌ ಕಳುಹಿಸಿದ ಪೊಲೀಸರು
-ಒಟ್ಟು 7 ಮಂದಿಯಿಂದ ಬಸ್‌ ಹೈಜಾಕ್‌

ಟೈಂ ಲೈನ್‌
-10.00- ಕಲಾಸಿಪಾಳ್ಯದಿಂದ ಕಣ್ಣೂರು ಕಡೆ ಹೊರಟ ಬಸ್‌
-10.30-ಬೈಕ್‌ನಲ್ಲಿ ಬಂದ ನಾಲ್ವರಿಂದ ಬಸ್‌ ಅಪಹರಣ
-11.30-ಪಟ್ಟಣಗೆರೆಯ ಗೋಡೌನ್‌ಗೆ ಬಸ್‌ ಕೊಂಡೊಯ್ದ ದುಷ್ಕರ್ಮಿಗಳು
-11.40-ಪ್ರಯಾಣಿಕರಿಂದ ಪೊಲೀಸ್‌ ಸಹಾಯವಾಣಿಗೆ ನಮ್ಮ-100ಕ್ಕೆ ದೂರು
-12.00-ಗೋಡೌನ್‌ನಲ್ಲಿದ್ದ ಮೂವರು ಸೇರಿ 7 ಮಂದಿಯಿಂದ ಪ್ರಯಾಣಿಕರ ಮೇಲೆ ದಬ್ಟಾಳಿಕೆ
-12.30-ಸ್ಥಳಕ್ಕೆ ದೌಡಾಯಿಸಿದ ರಾಜರಾಜೇಶ್ವರಿನಗರದ ಸುಮಾರು 30 ಮಂದಿ ಪೊಲೀಸರು, ಮೂವರ ಬಂಧನ
-1.00-ರಾಜರಾಜೇಶ್ವರಿನಗರ ಠಾಣೆಗೆ ಬಸ್‌ ಕೊಂಡೊಯ್ದ ಪೊಲೀಸರು
-3.30-ವಿಚಾರಣೆ ಮುಗಿಸಿ ಕಣ್ಣೂರಿಗೆ ಪ್ರಯಾಣಿಕರ ಪ್ರಯಾಣ

Advertisement

Udayavani is now on Telegram. Click here to join our channel and stay updated with the latest news.

Next